ಪುಷ್ಪ ಬಳಿಕ ಅಲ್ಲು ಅರ್ಜುನ್ ಒಪ್ಪಿಕೊಂಡಿರುವ ಬಿಗ್ ಪ್ರಾಜೆಕ್ಟ್ AA22xA6. ಈ ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ ಆದರೆ ಈಗಾಗ್ಲೇ ಅನೌನ್ಸ್ಮೆಂಟ್ ಟೀಸರ್ನಿಂದಲೇ ಭಾರೀ ನಿರೀಕ್ಷೆ ಹುಟ್ಟಿಸಿದೆ.

ಇದು ಬಿಗ್ ಪ್ರಾಜೆಕ್ಟ್ ಚಿತ್ರವಾಗಿದ್ದು ಸನ್ಪಿಚ್ಚರ್ಸ್ ಇದನ್ನು ನಿರ್ಮಾಣ ಮಾಡುತ್ತಿದೆ. ಬಿಗ್ ಮಹತ್ವದ ಪ್ರಾಜೆಕ್ಟ್ ತಮಿಳು ನಿರ್ದೇಶಕ ಅಟ್ಲೀ (Atlee) ನಿರ್ದೇಶನದಲ್ಲಿ ಬರುತ್ತಿದೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ ಅಭಿನಯಿಸುತ್ತಿರುವುದು ವಿಶೇಷ. ಆದರೆ ಟೀಸರ್ ರಿಲೀಸ್ ಆದ ಬೆನ್ನಲ್ಲೇ ಇದನ್ನ ಹಾಲಿವುಡ್ನ `ಡ್ಯೂನ್’ ಚಿತ್ರದ ಕಾಪಿ ಎಂದು ಟೀಕೆ ಮಾಡಲಾಗಿತ್ತು. ಹೌದು ಎನ್ನುವಂತೆ ಹಾಲಿವುಡ್ನಲ್ಲೇ ಮುಖವಾಡವನ್ನೂ ತಯಾರು ಮಾಡುವ ವೀಡಿಯೋ ಹಂಚಿಕೊಂಡಿದ್ರು ಅಲ್ಲು ಅರ್ಜುನ್. ಕಾಪಿ ಮಾಡಿದ್ದಾರೆ ಅನ್ನೋ ವಿಚಾರಕ್ಕೆ ಅಟ್ಲೀ ಇದೀಗ ಸ್ಪಷ್ಟನೆ ಕೊಟ್ಟಿದ್ದಾರೆ.
ಹಾಲಿವುಡ್ನ ಡ್ಯೂನ್ ಕಾಪಿ ಎಂದು ಟೀಕೆ ಬರುತ್ತಿರುವ ಹಿನ್ನೆಲೆ ನಿರ್ದೇಶಕ ಅಟ್ಲೀ ಸ್ಪಷ್ಟನೆ ಕೊಟ್ಟಿದ್ದಾರೆ. ನಮ್ಮ ಕೆಲಸಕ್ಕೆ ಆಗಾಗ್ಗೆ ಹೀಗೆಯೇ ಹೇಳಲಾಗುತ್ತೆ, ಎಷ್ಟು ಬಾರಿ ಅಂತ ಈ ಥರ ಕಲ್ಪಿಸಿಕೊಳ್ಳುತ್ತಾರೆ ಎಂದಿದ್ದಾರೆ ಅಟ್ಲೀ. ಅಲ್ಲಿಗೆ ಪೋಸ್ಟರ್ ಕಾಪಿ ವಿಚಾರವನ್ನ ಅಟ್ಲಿ ತಳ್ಳಿಹಾಕಿದ್ದಾರೆ.
ನಿರ್ದೇಶಕ ಅಟ್ಲೀ ಚೆನ್ನೈನಲ್ಲಿರುವ ಸತ್ಯಭಾಮಾ ಇನ್ಸ್ಸ್ಟಿಟ್ಯೂಟ್ ಆಫ್ ಸೈನ್ಸ್ & ಟೆಕ್ನಾಲಜಿ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದುಕೊಂಡಿದ್ದಾರೆ. ಈ ವೇಳೆ ಮಾಧ್ಯಮದ ಪ್ರಶ್ನೆಗೆ ಉತ್ತರಿಸುವ ವೇಳೆ ಮುಂದಿನ ಬಿಗ್ಪ್ರಾಜೆಕ್ಟ್ ಹಾಗೂ ವೈರಲ್ ಆಗಿರುವ ಡ್ಯೂನ್ ಪೋಸ್ಟರ್ ಕಾಪಿ ಬಗ್ಗೆ ಪ್ರತಿಕ್ರಿಯೆ ನೀಡಿದರು.