ಓವರ್‌ಟೇಕ್ ಸಮಯದ ಅಜಾಗರೂಕತೆಯೇ ಭೀಕರ ಅಪ*ತಕ್ಕೆ ಕಾರಣ ಎಂಬ ಶಂಕೆ.

ಓವರ್‌ಟೇಕ್ ಸಮಯದ ಅಜಾಗರೂಕತೆಯೇ ಭೀಕರ ಅಪ*ತಕ್ಕೆ ಕಾರಣ ಎಂಬ ಶಂಕೆ.

ಬಾಗಲಕೋಟೆ :ಬೀಳಗಿ ತಾಲ್ಲೂಕಿನ ಅನಗವಾಡಿ ಬ್ರಿಡ್ಜ್ ಬಳಿ ಸೋಮವಾರ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇನ್ನೋವಾ ಕಾರು ಮತ್ತು ಟಂಟಂ ಪರಸ್ಪರ ಡಿಕ್ಕಿಯಾಗಿ, 2 ಮಂದಿ ಸ್ಥಳದಲ್ಲೇ ಸಾವಿಗೀಡಾಗಿದ್ದು, 3 ಮಂದಿ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮೃತರಾದವರು:

  • ಮಹೇಶ್ ನಾಯ್ಕರ್ (27)
  • ಮೆಹಬೂಬ್ ಶೇಖ್ (30)

ಈ ಇಬ್ಬರೂ ನವನಗರದ 45ನೇ ಸೆಕ್ಟರ್ ನಿವಾಸಿಗಳು ಎಂದು ತಿಳಿದುಬಂದಿದೆ.

ಗಾಯಾಳುಗಳು:

  • ವಿಶಾಲ್ ವರತಿಲ್ಲೆ
  • ವಿಜಯಕುಮಾರ್ ಭೋವಿ
  • ಗುರುಪ್ರಸಾದ್ ಸುಂಕದ

ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ತಕ್ಷಣ ದಾಖಲಿಸಲಾಗಿದೆ.

ಘಟನೆ ವಿವರ:

ಪಾರ್ಥಿವ ಜನರನ್ನೊಟ್ಟಿಗೆ, ವಿಜಯಪುರ ಜಿಲ್ಲೆಯ ಕೊಲ್ಹಾರದಿಂದ ಊಟ ಮುಗಿಸಿ ವಾಪಸ್ ಬಾಗಲಕೋಟೆ ಕಡೆಗೆ ಬರುತ್ತಿದ್ದ ಟಂಟಂ ವಾಹನಕ್ಕೆ, ಮಾಹಿಂದ್ರಾ ಪಿಕಪ್ಗೆ ಡಿಕ್ಕಿ ತಪ್ಪಿಸಲು ಹೋಗಿ ಇನ್ನೋವಾ ಚಾಲಕ ಎದುರಿನಿಂದ ಬಂದು ಡಿಕ್ಕಿ ಹೊಡೆದಿದ್ದಾನೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

ಕಲಾದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

ಕೋಲಾರದಲ್ಲಿ ಇನ್ನೊಂದು ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ಸಾವು

ಮೂಲಬಾಗಿಲು, ಕೋಲಾರ ಜಿಲ್ಲೆ:
ಒಮ್ಮಸಂದ್ರ ಗ್ರಾಮದಲ್ಲಿ ವ್ಯಾಗನಾರ್ ಕಾರು ಮತ್ತು ಬೈಕ್ ನಡುವೆ ಡಿಕ್ಕಿಯಾದ ಪರಿಣಾಮ, ಬೈಕ್ ಸವಾರ ಗಂಗಿರೆಡ್ಡಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

  • ಗಂಗಿರೆಡ್ಡಿ ಮೂಲತಃ ಆಂಧ್ರದ ರಾಮಕುಪ್ಪಂ ನಿವಾಸಿ
  • ಮೈಸೂರಿನಲ್ಲಿ ಉದ್ಯೋಗ ಮಾಡುತ್ತಿದ್ದ ಅವರು ಹುಟ್ಟೂರಿಗೆ ಬಂದ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿದೆ
  • ಹೆಲ್ಮೆಟ್ ಧರಿಸಿದ್ದರೂ ತಲೆಗೆ ಗಂಭೀರ ಗಾಯವಾಗಿದ್ದು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ

ಮೂಲಬಾಗಿಲು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *