ರಾಜ್ ಬಿ ಶೆಟ್ಟಿ ಅವರ ‘ಸು ಫ್ರಮ್ ಸೋ’ ಸಿನಿಮಾ ದೊಡ್ಡ ಯಶಸ್ಸು ಕಂಡಿದೆ. ಆದರೆ, ಈ ಯಶಸ್ಸನ್ನು ಅನುಕರಿಸಿ ಅದೇ ಮಾದರಿಯ ಚಿತ್ರಗಳನ್ನು ಮಾಡುವುದನ್ನು ಅವರು ವಿರೋಧಿಸುತ್ತಾರೆ. ಅವರ ಪ್ರಕಾರ, ಯಶಸ್ಸಿನ ಹಿಂದೆ ಓಡುವುದಕ್ಕಿಂತ ಹೊಸತನವನ್ನು ಪ್ರಯತ್ನಿಸುವುದು ಮುಖ್ಯ.
‘ಸು ಫ್ರಮ್ ಸೋ’ ಸಿನಿಮಾ ಮೂಲಕ ರಾಜ್ ಬಿ ಶೆಟ್ಟಿ ಎಲ್ಲ ಕಡೆಗಳಲ್ಲೂ ಫೇಮಸ್ ಆಗಿದ್ದಾರೆ. ಈ ಮೊದಲು ಅವರು ಮಾಡುತ್ತಿದ್ದ ಚಿತ್ರಗಳು ಕನ್ನಡದಲ್ಲಿ ಮಾತ್ರ ಗಮನ ಸೆಳೆಯುತ್ತಿದ್ದವು. ಈಗ ಪರಭಾಷೆಯಲ್ಲೂ ಅವರ ಸಿನಿಮಾ ಸದ್ದು ಮಾಡಿದೆ. ‘ಸು ಫ್ರಮ್ ಸೋ’ ಯಶಸ್ಸಿನ ಬಳಿಕ ಅನೇಕರು ಅದನ್ನೇ ಕಾಪಿ ಮಾಡುವ ಸಾಧ್ಯತೆ ಇರುತ್ತದೆ. ಅಂದರೆ ಈ ರೀತಿಯ ಸಿನಿಮಾಗಳು ಜನರಿಗೆ ಹೆಚ್ಚು ಇಷ್ಟು ಆಗುತ್ತವೆ ಎಂದು ಭಾವಿಸಿ ಇದೇ ಮಾದರಿಯ ಚಿತ್ರಗಳನ್ನು ಮಾಡಲು ಹೋಗುವ ಸಾಧ್ಯತೆ ಇದೆ. ಈ ವಿಚಾರಕ್ಕೆ ಸಂಬಂಧಿಸಿ ರಾಜ್ ಅವರು ಕಿವಿ ಮಾತು ಹೇಳಿದ್ದಾರೆ.
ಕೆಜಿಎಫ್’ ಕನ್ನಡ ಚಿತ್ರರಂಗದ ಪಾಲಿಗೆ ಅತಿ ದೊಡ್ಡ ಹಿಟ್ ಆಗಿದೆ. ಈ ರೀತಿಯ ಚಿತ್ರಗಳನ್ನು ಜನರು ನೋಡುತ್ತಾರೆ ಎಂದು ಭಾವಿಸಿ ಅನೇಕರು ಇದೇ ಮಾದರಿಯ ಸಿನಿಮಾಗಳನ್ನು ಮಾಡಲು ಹೋಗಿ ಕೈ ಸುಟ್ಟುಕೊಂಡ ಉದಾಹರಣೆ ಇದೆ. ಇನ್ನೂ ಕೆಲವೊಮ್ಮೆ ಸಕ್ಸಸ್ ಫಾರ್ಮಲಾದಿಂದ ಹೊಸದೇನು ಬರೋದಿಲ್ಲ. ಆ ರೀತಿ ಆಗಬಾರದು ಎಂಬುದು ರಾಜ್ ಅವರ ಕಾಳಜಿ. ಹೀಗಾಗಿ, ಅವರು ಈ ಬಗ್ಗೆ ಮಾತನಾಡಿದ್ದಾರೆ.
ಇದೇ ತರಹದ ಸಿನಿಮಾ ಎಂಬುದು ಬಂದಾಗ ನಾವು ಯಶಸ್ಸಿನ ಹಾದಿಯನ್ನು ಮಾತ್ರ ಹಿಡಿಯಲು ಸಾಧ್ಯ. ನಾವು ಯಶಸ್ಸಿನ ಸೂತ್ರದ ಹಿಂದೆ ಹೋದಂತೆ ಆಗುತ್ತದೆ. ಆಗ ನಮ್ಮ ಇಂಡಸ್ಟ್ರಿ ಕೆಳಗೆ ಹೋಗುತ್ತದೆ. ಪ್ರತಿ ಸಿನಿಮಾಗಳಲ್ಲೂ ಹೊಸದನ್ನು ಮಾಡಬೇಕು ಎಂಬುದು ನಮ್ಮ ಉದ್ದೇಶ. ಇದಕ್ಕೆ ನಿಮ್ಮ ಬೆಂಬಲ ಬೇಕು’ ಎಂದಿದ್ದಾರೆ ರಾಜ್ ಬಿ ಶೆಟ್ಟಿ.
‘ಒಂದು ಸಿನಿಮಾ ಮಾಡಿದ ಬಳಿಕ ಎರಡನೇ ಪಾರ್ಟ್ ಮಾಡಿದರೆ ಒಳ್ಳೆಯ ಬಿಸ್ನೆಸ್ ಆಗುತ್ತದೆ. ಆದರೆ, ನಾವು ಇಲ್ಲಿ ಬಿಸ್ನೆಸ್ ಮಾಡೋಕೆ ಬಂದಿಲ್ಲ. ಒಳ್ಳೆಯ ಸಿನಿಮಾ ಕೊಡೋಕೆ ಬಂದಿದ್ದೇವೆ’ ಎಂದು ರಾಜ್ ಅವರು ಹೇಳಿದ್ದಾರೆ. ಅವರ ಈ ಮಾತನ್ನು ಅನೇಕರು ಒಪ್ಪಿಕೊಂಡಿದ್ದಾರೆ.
For More Updates Join our WhatsApp Group :