ಬೆಂಗಳೂರು: ಲಾಲ್ ಬಾಗ್ನಲ್ಲಿ ಟನಲ್ ರಸ್ತೆ ನಿರ್ಮಾಣದ ವಿಚಾರವಾಗಿ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹಾಗೂ ಬೆಂಗಳೂರು ಉಸ್ತುವಾರಿ, ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಜಟಾಪಟಿ ನಡೆದಿದ್ದು, ಇದರ ನಡುವೆ ತೇಜಸ್ವಿ ಸೂರ್ಯ ಅವರು ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಆದ್ರೆ, ಈ ವೇಳೆ ತೇಜಸ್ವಿ ಸೂರ್ಯ ಅವರ ಕೆಲ ಮಾತಿಗೆ ಡಿಕೆಶಿ ಸಮ್ಮತಿಸಿಲ್ಲ.
ತೇಜಸ್ವಿ ಸೂರ್ಯ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್, ತೇಜಸ್ವಿ ಸೂರ್ಯ ಅವರು ಕೆಲವೊಂದಿಷ್ಟು ಸಲಹೆ ನೀಡಿದ್ದಾರೆ. ಟನಲ್ ರಸ್ತೆ ಬದಲಿಗೆ ಮೆಟ್ರೋ ಬರಬೇಕು ಎಂದಿದ್ದಾರೆ. ಪ್ರೈವೆಟ್ ಬಸ್ಗಳಿಗೂ ಅವಕಾಶ ನೀಡಬೇಕು. ಬಿಎಂಎಲ್ ಟಿ ಫೀಡರ್ ಬಸ್ ಮಾಡಬೇಕು ಎಂದಿದ್ದಾರೆ. ಮೆಟ್ರೋ ಕಾಮಗಾರಿ ಮಾಡುತ್ತಿದ್ದೇವೆ. ಆದ್ರೆ ಹಣ ಕೂಡ ಬೇಕು ಅಲ್ವಾ ಎಂದು ಪ್ರಶ್ನಿಸಿದ ಎಂದು ಹೇಳಿದರು.
ದೆಹಲಿಯಿಂದ ಎಷ್ಟು ಹಣ ಬಂದಿದೆ ಎಂದು ಕೇಳಿದೆ. ನಾನು ಕೂಡ ಪಿಎಂ ಅವರನ್ನ ಭೇಟಿ ಮಾಡಲು ಬರುತ್ತೇನೆ. ಹಣ ಕೊಡಿಸಿ ಎಂದಿದ್ದೇನೆ. ಲಾಲ್ ಬಾಗ್ ನಲ್ಲಿ ಸಣ್ಣ ಜಾಗ ಅಷ್ಟೇ ಬೇಕು ಇಲ್ಲಂದ್ರೆ ನೀವೇ ಜಾಗ ತೋರಿಸಬೇಕು ಎಂದಿದ್ದೇನೆ. ಟನಲ್ ರಸ್ತೆ ಬೇಡವೇ ಬೇಡ ಎಂದಿದ್ದಾರೆ. ಆದ್ರೆ ನೀನು ಹೇಳಿದಂತೆ ಆಗಲ್ಲ ಎಂದಿದ್ದೇನೆ ಎಂದು ತೇಜಸ್ವಿ ಸೂರ್ಯ ಜತೆಗಿನ ಮಾತುಕತೆಯನ್ನು ಮಾಧ್ಯಮಗಳ ಮುಂದೆ ಬಿಚ್ಚಿಟ್ಟರು.
ಅವರು ಏನೂ ಬೇಕಾದರೂ ಪಿಐಎಲ್ ಹಾಕಲಿ. ನಾವು ಮರುಪರಿಶೀಲನೆ ಮಾಡುತ್ತೇವೆ ಎಂದಿದ್ದೇವೆ. ಎಲ್ಲಾ ಸ್ಟಡಿ ಮಾಡಿದ್ದೀನಿ ಎಂದಿದ್ದಾರೆ ಅದ್ರೆ ನಾನು ಅವರ ಸಲಹೆಗೆ ಗೌರವ ನೀಡುತ್ತೇನೆ. ಖಾಲಿ ಟ್ರಂಕ್ ಅಂದ್ರೆ ಹಣ ತರಬೇಕು. ಪಿಎಂಗೆ ಹೇಳಿ ಹಣ ಕೇಳಬೇಕು. ಎಲ್ಲರೂ ಸಲಹೆ ಕೊಡ್ತಾರೆ ಟ್ವೀಟ್ ಮಾಡ್ತಾರೆ. ಆದ್ರೆ ಹಣ ತರಬೇಕು ಎಂದು ತೇಜಸ್ವಿ ಸುರ್ಯಗೆ ಟಾಂಗ್ ಕೊಟ್ಟರು.
For More Updates Join our WhatsApp Group :

