ಬೆಂಗಳೂರು: ಸಚಿವರಾಗಿದ್ದ ರಾಜಣ್ಣರನ್ನು ಮಂತ್ರಿಸ್ಥಾನದಿಂದ ಕಿತ್ತುಹಾಕಿದ್ದು ಯಾಕೆ ಅಂತ ಸಂಪುಟದಲ್ಲಿ ಹಿರಿಯ ಸಚಿವರಾಗಿರುವವರಿಗೂ ಗೊತ್ತಿಲ್ಲ. ಜಿ ಪರಮೇಶ್ವರ್ ಮತ್ತು ರಾಜಣ್ಣ ಒಂದೇ ಜಿಲ್ಲೆಯವರಾದರೂ ಗೃಹ ಸಚಿವ ಮಾತ್ರ ಏನನ್ನೂ ಹೇಳಲಿಲ್ಲ.
ಇದು ಹೈಕಮಾಂಡ್ ತೀರ್ಮಾನ, ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರೂ ವರಿಷ್ಠರ ತೀರ್ಮನವನ್ನು ಗೌರವಿಸುತ್ತಾರೆ ಮತ್ತು ಅದಕ್ಕೆ ಬದ್ಧರಾಗಿರುತ್ತಾರೆ ಎಂದು ಪರಮೇಶ್ವರ್ ಹೇಳಿದರು. ವಜಾ ಮಾಡಿರುವ ಕಾರಣ ಕೆಪಿಸಿಸಿ ಅಧ್ಯಕ್ಷರಿಗೆ ಗೊತ್ತಿರಬಹುದು ಇಲ್ಲವೇ ಮುಖ್ಯಮಂತ್ರಿಯವರಿಗೆ, ರಾಜಣ್ಣನರಿಗೆ ಸಹಜವಾಗೇ ಅಸಮಾಧಾನ ಇರುತ್ತದೆ, ಅದರೆ ವಜಾ ಮಾಡಿರುವ ಹಿಂದಿನ ಕಾರಣ ಬೇರೆ ಯಾರಿಗೂ ಗೊತ್ತಿಲ್ಲ ಎಂದು ಪರಮೇಶ್ವರ್ ಹೇಳಿದರು.
For More Updates Join our WhatsApp Group :