ಜೈಪುರ : ಭಾರತ ಗಡಿ ಸದಾ ಅಲರ್ಟ್ನಲ್ಲಿರುತ್ತದೆ. ಯೋದರು ದಿನದ 24 ಗಂಟೆ ಹದ್ದಿನ ಕಣ್ಣಿಟ್ಟಿರುತ್ತಾರೆ. ಇದರ ನಡುವೆ ಪಾಕಿಸ್ತಾನ ತನ್ನ ಕುತಂತ್ರ ಬುದ್ದಿ ತೋರಿಸುತ್ತಲೇ ಇರುತ್ತದೆ. ಇದೀಗ ಕಳೆದ ಕಳೆದ ತಿಂಗಳಿನಿಂದ ಭಾರತದ ಗಡಿ ಹಾಗೂ ಗಡಿ ಪ್ರದೇಶದ ಕೆಲ ಘಟನೆಗಳು ನಡೆಯುತ್ತಿದೆ. ಪಾಕಿಸ್ತಾನದಿಂದ ಬಲೂನ್ ಹಾರಿಬಂದು ಭಾರತದೊಳಗೆ ಬೀಳುತ್ತಿದೆ. ಇದೀಗ ವಿಮಾನ ಆಕೃತಿಯ ಬಲೂನ್ ಭಾರತದ ರಾಜಸ್ಥಾನದ ಬಿಕಾನೆರ್ನ ಖಜುವಾಲ ಬಳಿ ಬಿದ್ದಿದೆ. ಕಳೆದ 35 ದಿನಗಳಲ್ಲಿ ಇದು 3ನೇ ಘಟನೆಯಾಗಿದೆ.
2 ಅಡಿ ಉದ್ದದ ಬಲೂನ್ ಭಾರತದ ಗಡಿ ಪ್ರದೇಶದೊಳಗೆ ಬಿದ್ದಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಬಳಿಕ ಪೊಲೀಸರು ಹಾಗೂ ಬಿಎಸ್ಎಫ್ ಯೋಧರಿಗೆ ಮಾಹಿತಿ ನೀಡಿದ್ದರು. ಮಾಹಿತಿ ತಿಳಿಯುತ್ತಿದ್ದಂತೆ ತಕ್ಷಣ ಪೊಲೀಸರು ಹಾಗೂ ಯೋಧರು ಸ್ಥಳಕ್ಕೆ ಧಾವಿಸಿದ್ದಾರೆ. ಬಲೂನ್ ವಶಕ್ಕೆ ಪಡೆದು ಪ್ರಾಥಮಿಕ ತನಿಖೆ ನಡೆಸಿದ್ದಾರೆ