ಬೆಂಗಳೂರನ್ನು ವಿಶ್ವದ ಅತ್ಯುತ್ತಮ ನಗರವೆಂದು ಹಾಡಿದ ಜಪಾನ್ ಉದ್ಯಮಿ.

ಬೆಂಗಳೂರನ್ನು ವಿಶ್ವದ ಅತ್ಯುತ್ತಮ ನಗರವೆಂದು ಹಾಡಿದ ಜಪಾನ್ ಉದ್ಯಮಿ.

ಬೆಂಗಳೂರು ಸುಂದರ ನಗರ, ಆದರೆ ಟ್ರಾಫಿಕ್ ತೊಂದರೆ ಅಸಮಾಧಾನ

ಬೆಂಗಳೂರು : ಜಪಾನಿನ ಉದ್ಯಮಿ ಒಬ್ಬರು ಬೆಂಗಳೂರನ್ನು ಹಾಡಿಹೋಗಳಿದ್ದಾರೆ. ಬಿಯಾಂಡ್ ನೆಕ್ಸ್ಟ್  ವೆಂಚರ್ಸ್‌ನ ಸಿಇಒ ಮತ್ತು ಸಹ-ಸಂಸ್ಥಾಪಕ ಜಪಾನಿನ ಉದ್ಯಮಿ ತ್ಸುಯೋಶಿ ಇಟೊ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್​ಟ್​​​​​ ಭಾರೀ ವೈರಲ್​ ಆಗಿದೆ. ನಗರದ ಟ್ರಾಫಿಕ್​​​ ಬಗ್ಗೆಯೂ ಪ್ರಮಾಣಿಕವಾಗಿ ಹೇಳಿದ್ದಾರೆ. ಲಿಂಕ್ಡ್‌ಇನ್​​​ನ್ಲಿ ಈ ಪೋಸ್ಟ್​ನ್ನು ಹಂಚಿಕೊಂಡಿದ್ದು, ಬೆಂಗಳೂರು ಎಲ್ಲದರಲ್ಲೂ ಸೂಪರ್​​ ಆಗಿದೆ. ಆದರೆ ಈ ಬಗ್ಗೆ ಮಾತ್ರ ಅಸಮಾಧಾನ ಇದೆ ಎಂದು ಪೋಸ್ಟ್​​​ನಲ್ಲಿ ಹೇಳಿಕೊಂಡಿದ್ದಾರೆ. ಇವರ ಈ ಪೋಸ್ಟ್​​ ನೆಟ್ಟಿಗರನ್ನು ಗಮನಸೆಳೆದಿದೆ. ಈ ಪೋಸ್ಟ್​​ನಲ್ಲಿ ಜಪಾನಿನ ವಾತಾವರಣಕ್ಕೂ ಬೆಂಗಳೂರಿನ ವಾತಾವರಣಕ್ಕೂ ಹೋಲಿಕೆ ಮಾಡಿದ್ದಾರೆ.

ಅವರು ತಮ್ಮ ಪೋಸ್ಟ್​​ನಲ್ಲಿ ಬೆಂಗಳೂರು ವಿಶ್ವದ ಅತ್ಯುತ್ತಮ ನಗರ ಎಂದು ಹೇಳಿದ್ದಾರೆ. ಅಲ್ಲಿ ವಾಸಿಸಿದ ನಂತರವೇ ನಗರದ ಮೋಡಿ ಸ್ಪಷ್ಟವಾಗುತ್ತದೆ. ಅಲ್ಲಿನ ಹವಾಮಾನ ತುಂಬಾ ಕೂಲ್​​ ಹಾಗು ಸುಂದರ. ವರ್ಷಪೂರ್ತಿ ಸೌಮ್ಯವಾದ ತಾಪಮಾನ ಮತ್ತು ಶುಷ್ಕ, ಆಹ್ಲಾದಕರ ಗಾಳಿ ಅಲ್ಲಿನ ಆಕರ್ಷಣೆ ಎಂದು ಹೇಳಿದ್ದಾರೆ . ಇವರು ಜಪಾನಿನ ವೃತ್ತಿಪರರನ್ನು ಭಾರತಕ್ಕೆ ಬರುವಂತೆ ಹೇಳುವ ಪೋಸ್ಟ್​​ಗಳನ್ನು ಆಗ್ಗಾಗೆ ಹಂಚಿಕೊಳ್ಳುತ್ತಾರೆ. ಬೆಂಗಳೂರು “ಸಾಗರವಿಲ್ಲದ ಹವಾಯಿ ದ್ವೀಪ” ದಂತೆ ಎಂದು ಹೇಳಿದ್ದಾರೆ. ಆದರೆ ಜಪಾನ್​​​ ರೆಸಾರ್ಟ್ ತರಹದ ಹವಾಮಾನ ಹೊಂದಿದೆ ಎಂದು ಬೆಂಗಳೂರು ಹಾಗೂ ಜಪಾನ್​​​​​​ನ ಹವಾಮಾನವನ್ನು ಹೊಲಿಕೆ ಮಾಡಿದ್ದಾರೆ.

ಆದರೆ ಬೆಂಗಳೂರಿನಲ್ಲಿ ಒಂದು ನ್ಯೂನತೆ ಇದೆ, ಅದುವೆ ವಾಹನ ದಟ್ಟಣೆ, ಬೆಂಗಳೂರಿನಲ್ಲಿ ಟ್ರಾಫಿಕ್ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವಂತಿಲ್ಲ, ಇಂದಿಗೂ ಆ ಒಂದು ವಿಚಾರದಲ್ಲಿ ಅಸಮಾಧಾನ ಇದೆ. ಇಷ್ಟು ದೊಡ್ಡ ಹಾಗೂ ಸುಂದರ ನಗರದಲ್ಲಿ ವಾಹನ ದಟ್ಟಣೆ ಆಗಬಾರದು ಎಂದು ಹೇಳಿದ್ದಾರೆ. ಅವರು ಬೆಂಗಳೂರಿಗೆ ಬಂದ ನಂತರ ಸ್ಥಳೀಯ ಜೀವನವನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳಲು ಮಾರುತಿ ಸುಜುಕಿಯನ್ನು ಖರೀದಿಸಿ ಬೆಂಗಳೂರಿನ ನಗರಗಳಲ್ಲಿ ಓಡಾಡಿದ್ದಾರೆ. ಟ್ರಾಫಿಕ್​​​​, ರಸ್ತೆಗಳು, ವಾಹನ ಸಂಚಾರ ವ್ಯವಸ್ಥೆ, ಅದರಲ್ಲೂ ಕರ್ಕಶ ಹಾರ್ನ್​​​ಗಳಿಂದ ಬೆಂಗಳೂರಿನ ಸೌಂದರ್ಯವನ್ನು ಹಾಳು ಮಾಡಿದೆ ಎಂದು ಹೇಳಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *