ಸಿಕಂದರ್ ಮಾರಾಟ ಮಾಡಿದ ಜಾಗ ನಕಲಿ.
ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಇಂದು ಜೆಸಿಬಿ ಘರ್ಜನೆ ಮಾಡಿದೆ. ಅಕ್ರಮವಾಗಿ ಕಟ್ಟಿದ್ದ 47 ಮನೆಗಳನ್ನು ನೆಲಸಮ ಮಾಡಲಾಗಿದೆ. ಸುಪ್ರೀಂಕೋರ್ಟ್ ಆದೇಶ ಹಿನ್ನಲೆ, ಹುಬ್ಬಳ್ಳಿಯ ಉದಯನಗರದಲ್ಲಿರುವ ಮನೆಗಳ ತೆರವು ಮಾಡಲಾಗಿದೆ. ದಾಖಲಾತಿ ನೋಡದೆ ಮನೆ ಕಟ್ಟಿಕೊಂಡವರ ಬದುಕು ಇದೀಗ ಬೀದಿಗೆ ಬಂದಿದೆ. ಸಿಕಂದರ್ ಎಂಬ ವ್ಯಕ್ತಿ ತನ್ನದೇ ಭೂಮಿ ಎಂದು ಮಾರಾಟ ಮಾಡಿದ್ದ.
ಜಾಗಕ್ಕಾಗಿ ನಿವಾಸಿಗಳು ಸಾವಿರಾರು ರೂ. ಹಣ ನೀಡಿದ್ದರು. ಆದರೆ ಅದು ರಾಮರಾವ್ ಸಬನಿಸ್ ಎನ್ನುವವರಿಗೆ ಸೇರಿದ ಜಾಗವಾಗಿದ್ದು, ಮೂಲ ದಾಖಲಾತಿ ಪರಿಶೀಲಿಸದೆ ಜನರು ಮೋಸ ಹೋಗಿದ್ದಾರೆ. ಇತ್ತ ಸುಪ್ರೀಂ ಕೋರ್ಟ್ ರಾಮರಾವ್ ಪರ ತೀರ್ಪು ನೀಡಿದೆ. ಈ ಹಿನ್ನಲೆ ಪೊಲೀಸ್ ಬಂದೋಬಸ್ತ್ನಲ್ಲಿ ಮನೆಗಳ ತೆರವು ಮಾಡಲಾಗಿದೆ.
For More Updates Join our WhatsApp Group :
