ಬ್ರೆಜಿಲ್ : ಸಿಂಹವನ್ನು ಪಳಗಿಸುವ ಕನಸು ಕಂಡಿದ್ದ ವ್ಯಕ್ತಿ ಸಿಂಹದ ಬಾಯಿಗೆ ಆಹಾರವಾಗಿದ್ದಾನೆ. ಜೋವೊ ಪೆಸ್ಸೋವಾ ನಗರದ ಪಾರ್ಕ್ ಝೂಬೊಟಾನಿಯೊ ಅರುಡಾದಲ್ಲಿ ಸಿಂಹವೊಂದು ಮಾರಣಾಂತಿಕ ದಾಳಿ ನಡೆಸಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.ಗೆರ್ಸನ್ ಡಿ ಮೆಲೊ ಮಚಾದೊ 20 ಅಡಿ ಗೋಡೆ ಮತ್ತು ಭದ್ರತಾ ಬೇಲಿಯನ್ನು ಹತ್ತಿ ಸಿಂಹದ ಆವರಣಕ್ಕೆ ಪ್ರವೇಶಿಸಿದ ನಂತರ ಈ ದುರಂತ ಘಟನೆ ಸಂಭವಿಸಿದೆ.
ಮೃಗಾಲಯಕ್ಕೆ ಬಂದಿದ್ದ ಜನ ಈ ಘಟನೆಯನ್ನು ವೀಕ್ಷಿಸಿದ್ದಾರೆ. ಆದರೆ ಆತನಿಗೆ ಸ್ಕಿಜೋಫ್ರೇನಿಯಾ ಸೇರಿದಂತೆ ಮಾನಸಿಕ ಆರೋಗ್ಯ ಸಮಸ್ಯೆಗಳಿವೆ ಎಂದು ತಿಳಿಸಿದ್ದಾರೆ.ತನಿಖೆಗಾಗಿ ಮೃಗಾಲಯವನ್ನು ತಾತ್ಕಾಲಿಕವಾಗಿ ಮುಚ್ಚಲಾಯಿತು.
For More Updates Join our WhatsApp Group :




