ಮಂಗಳೂರು: ಬೈಕ್ ಸವಾರ ಸಾವಿನ ದವಡೆಯಿಂದ ಜಸ್ಟ್ ಮಿಸ್ ಆಗಿರುವಂತಹ ಘಟನೆ ಮಂಗಳೂರು ಉಡುಪಿ ರಾಷ್ಟ್ರೀಯ ಹೆದ್ದಾರಿಯ ನಂತೂರು ಎಂಬಲ್ಲಿ ನಡೆದಿದೆ.
ಕಾರು ಓವರ್ ಟೇಕ್ ಮಾಡಿ ಮುಂದೆ ಹೋದ ಬೈಕ್ ಸವಾರ ರಸ್ತೆಯಲ್ಲಿದ್ದ ಗುಂಡಿಯನ್ನು ನೋಡದೇ ನಿಯಂತ್ರಣ ಕಳೆದುಕೊಂಡಿದ್ದು, ಬೈಕ್ ಸಹಿತ ಸವಾರ ಬಿದ್ದಿದ್ದಾರೆ. ಅಷ್ಟರಲ್ಲೇ ಹಿಂಬದಿಯಿಂದ ಖಾಸಗಿ ಬಸ್ವೊಂದು ಬರುತ್ತಿತ್ತು. ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ದುರಂತ ತಪ್ಪಿದೆ. ಘಟನೆಯ ವಿಡಿಯೋ ಬಸ್ನಲ್ಲಿ ಅಳವಡಿಸಿದ್ದ ಕ್ಯಾಮೆರಾದಲ್ಲಿ ಸೆರೆ ಆಗಿದೆ.
For More Updates Join our WhatsApp Group :