ಬಹುಭಾಷಾ ನಟ ಕಮಲ್ ಹಾಸನ್ ಅವರ ಬಗ್ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಹೇಳಿರುವ ಮಾತುಗಳು ಭಾರೀ ಚರ್ಚೆಗೆ ಕಾರಣವಾಗಿದೆ. ಶಿವರಾಜ್ ಕುಮಾರ್ ಅವರು ಈ ರೀತಿ ಹೇಳಿಕೆ ನೀಡಬಾರದಿತ್ತು ಅಂತ ಕನ್ನಡಿಗರು ಹೇಳುತ್ತಿದ್ದಾರೆ. ಈಗಾಗಲೇ ಕಮಲ್ ಹಾಸನ್ ಅವರು ತಮಿಳಿನಿಂದಲೇ ಕನ್ನಡ ಹುಟ್ಟಿದೆ ಅಂತ ಹೇಳಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಈ ರೀತಿ ಇರುವಾಗಲೇ ಶಿವರಾಜ್ ಕುಮಾರ್ ಅವರು ಕಮಲ್ ಹಾಸನ್ ಅವರ ಅಪ್ಪುಗೆ ಹೇಳಿಕೆ ಸಹ ಭಾರೀ ಚರ್ಚೆಗೆ ಕಾರಣವಾಗಿದೆ. ಹಲವು ಕನ್ನಡಿಗರು ಈ ಹೇಳಿಕೆಯನ್ನು ವಿರೋಧ ಮಾಡಿದರೆ, ಇನ್ನೂ ಕೆಲವರು ಇದು ಶಿವರಾಜ್ಕುಮಾರ್ ಅವರು ಅಭಿಮಾನದಿಂದ ಹೇಳಿರುವ ಮಾತು ಇದಕ್ಕೆ ವಿವಾದ ಬೇಡ ಅಂತಿದ್ದಾರೆ. ಇಷ್ಟಕ್ಕೂ ಶಿವಣ್ಣ ಹೇಳಿದ್ದೇನು, ಯಾಕಿ ಚರ್ಚೆ ನೋಡೋಣ.

ನಟ ಶಿವರಾಜ್ ಕುಮಾರ್ ಅವರು ಕನ್ನಡದೊಂದಿಗೆ ಇದೀಗ ತಮಿಳು ಭಾಷೆಯಲ್ಲೂ ಮಿಂಚುತ್ತಿದ್ದಾರೆ. ತಮಿಳು ಭಾಷೆಯಲ್ಲಿ ನಟ ರಜನೀಕಾಂತ್ ಅವರ ಸಿನಿಮಾ ಜೈಲರ್ನಲ್ಲಿ ನಟ ಶಿವರಾಜ್ ಕುಮಾರ್ ಸಣ್ಣ ಪಾತ್ರದಲ್ಲಿ ಮಿಂಚಿದ್ದಾರೆ. ಇದೀಗ ಅವರು ಜೈಲರ್ ಪಾರ್ಟ್ 2 ನಲ್ಲೂ ನಟಿಸಿದ್ದು, ಇದೀಗ ಈ ಸಿನಿಮಾ ಸಹ ತೆರೆಗೆ ಬರಲು ಪೂರ್ವ ಸಿದ್ಧತೆ ನಡೆದಿದೆ. ಇದರ ನಡುವೆ ನಟ ಕಮಲ್ ಹಾಸನ್ ಅವರ ಬಹು ನಿರೀಕ್ಷಿತ ಸಿನಿಮಾ ಥಗ್ ಲೈಫ್ ಆಡಿಯೋ ಲಾಂಚ್ನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಿವರಾಜ್ ಕುಮಾರ್ ಅವರು ಉತ್ಪ್ರೇಕ್ಷೆಯಿಂದ ಮಾತನಾಡಿದ್ದಾರೆ ಎಂದು ಕನ್ನಡಿಗರು ಹೇಳುತ್ತಿದ್ದಾರೆ.
ಮೂರು ದಿನ ನಾನು ಸ್ನಾನ ಮಾಡಿರಲಿಲ್ಲ: ನಟ ಶಿವರಾಜ್ ಕುಮಾರ್ ಅವರು ಕಮಲ್ ಹಾಸನ್ ಅವರನ್ನು ಮೊದಲ ಬಾರಿ ಭೇಟಿಯಾಗಿದ್ದನ್ನು ಹಾಗೂ ಅವರೊಂದಿಗಿನ ಮೊದಲ ಭೇಟಿಯ ಅನುಭವವನ್ನು ಹಂಚಿಕೊಂಡಿದ್ದಾರೆ. ಆದರೆ, ಇದೇ ಸಂದರ್ಭದಲ್ಲಿ ಮೂರು ದಿನ ಸ್ನಾನ ಮಾಡಿಲ್ಲ ಅಂತ ಹೇಳಿದ್ದು ಚರ್ಚೆಗೆ ಕಾರಣವಾಗಿದೆ.
ಶಿವಣ್ಣ ಕಾರ್ಯಕ್ರಮದಲ್ಲಿ ಮಾತನಾಡಿ, ಅದು ನಮ್ಮ ಬಾಲ್ಯದ ದಿನಗಳು ಮೊದಲ ಬಾರಿ ನಟ ಕಮಲ್ ಹಾಸನ್ ಅವರು ನಮ್ಮ ಮನೆಗೆ ಭೇಟಿ ನೀಡಿದ್ದರು. ನಮ್ಮ ತಂದೆ ಡಾ.ರಾಜ್ ಕುಮಾರ್ ಅವರೊಂದಿಗೆ ಮಾತನಾಡಿದ್ದರು. ಆಗ ನಮ್ಮ ತಂದೆ ನನ್ನನ್ನು ಕಮಲ್ ಅವರಿಗೆ ಪರಿಚಯಿಸಿದ್ದರು. ಕಮಲ್ ಅವರು ಬಂದು ಶೇಕ್ ಹ್ಯಾಂಡ್ ಕೊಟ್ಟರು, ನಾನು ಒಂದು ಸಲ ಹಗ್ (ಅಪ್ಪುಗೆ) ಸಿಗಬಹುದಾ ಅಂತ ಕೇಳಿದೆ. ಕಮಲ್ ಅವರು ಅಪ್ಪುಗೆ ನೀಡಿದರು. ಇದಾದ ಮೇಲೆ ನಾನು ಮೂರು ದಿನಗಳ ಕಾಲ ಸ್ನಾನ ಮಾಡಿರಲಿಲ್ಲ ಅಂತ ಶಿವರಾಜ್ ಕುಮಾರ್ ಅವರು ಹೇಳಿದ್ದಾರೆ.

ಮುಂದುವರಿದು ಅವರ ದೇಹದ ಪರಿಮಳವನ್ನು ನಾನು ಎಂಜಾಯ್ ಮಾಡಿದ್ದೆ. ನಾನು ಅವರ ಅಷ್ಟು ದೊಡ್ಡ ಅಭಿಮಾನಿ ಅಂತ ಶಿವರಾಜ್ ಕುಮಾರ್ ಅವರು ಹೇಳಿಕೊಂಡಿದ್ದಾರೆ. ನೆಟ್ಟಿಗರು ಹೇಳಿದ್ದೇನು ? ಶಿವರಾಜ್ ಕುಮಾರ್ ಅವರು ತಮಿಳುನಾಡಿನಲ್ಲಿ ಹೋಗಿ ಈ ರೀತಿ ಹೇಳಬಾರದಿತ್ತು. ಕನ್ನಡಿಗರು ನಾವು ಇವರಿಗೆ ಏನು ಕಡಿಮೆ ಮಾಡಿದ್ದೇವೆ ಎಂದು ಕೆಲವರು ಪ್ರಶ್ನೆ ಮಾಡಿದರೆ, ಇನ್ನೂ ಕೆಲವರು ಇದು ಪೂರ್ತಿ ಅವರ ವೈಯಕ್ತಿಕ ವಿಚಾರ ಶಿವರಾಜ್ ಕುಮಾರ್ ಅವರು ಕಮಲ್ ಹಾಸನ್ ಅವರ ಮೇಲಿನ ಅಭಿಮಾನದಿಂದ ಈ ರೀತಿ ಮಾತನಾಡಿದ್ದಾರೆ. ಅದರಲ್ಲಿ ತಪ್ಪೇನಿದೆ ಅಂತಲೂ ಪ್ರಶ್ನೆ ಮಾಡಿದ್ದಾರೆ.
