ಯಶ್ ನಟಿಸಿ, ಸಹ ನಿರ್ಮಾಣ ಮಾಡುತ್ತಿರುವ ‘ಟಾಕ್ಸಿಕ್’ ಸಿನಿಮಾನಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಇನ್ನೂ ಕೆಲವು ಅದ್ಭುತ ನಟಿಯರಿದ್ದರೆ. ಇದೀಗ ಸಿನಿಮಾಕ್ಕೆ ಕನ್ನಡದ ಸುಂದರ ಮತ್ತು ಪ್ರತಿಭಾವಂತ ನಟಿಯೊಬ್ಬರು ಸೇರಿಕೊಂಡಿದ್ದಾರೆ. ಯಾರು ಆ ನಟಿ? ನಟಿಯ ಪಾತ್ರ ಏನು?
ಯಶ್ ನಟಿಸಿ ಸಹ ನಿರ್ಮಾಣ ಮಾಡುತ್ತಿರುವ ‘ಟಾಕ್ಸಿಕ್’ ಪ್ರಸ್ತುತ ಭಾರತ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದೆನಿಸಿಕೊಂಡಿದೆ. ‘ಟಾಕ್ಸಿಕ್’ ಸಿನಿಮಾ ಕೇವಲ ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ ಬದಲಿಗೆ ಪ್ಯಾನ್ ವರ್ಲ್ಡ್ ಸಿನಿಮಾ ಆಗಿದೆ. ಭಾರಿ ದೊಡ್ಡ ಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಭಾರತದ ಕೆಲ ಸ್ಟಾರ್ ನಟ-ನಟಿಯರ ಜೊತೆಗೆ ಹಾಲಿವುಡ್ನ ಕೆಲವು ನುರಿತ ತಂತ್ರಜ್ಞರು ಸಹ ಸಿನಿಮಾಕ್ಕೆ ಕೆಲಸ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಯಶ್ ಹೊರತುಪಡಿಸಿ ಕನ್ನಡ ಪ್ರಮುಖ ನಟ-ನಟಿಯರು ಯಾರೂ ಇಲ್ಲ ಎನ್ನಲಾಗುತ್ತಿತ್ತು, ಆದರೆ ಇದೀಗ ಕನ್ನಡದ ನಾಯಕಿಯೊಬ್ಬರು ‘ಟಾಕ್ಸಿಕ್’ ತಂಡ ಸೇರಿಕೊಂಡಿದ್ದಾರೆ.
‘ಟಾಕ್ಸಿಕ್’ ಸಿನಿಮಾ ಅನ್ನು ಮಲಯಾಳಂ ನಟಿ, ನಿರ್ದೇಶಕ ಗೀತು ಮೋಹನ್ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾನಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ. ಸಿನಿಮಾನಲ್ಲಿ ಹಾಲಿವುಡ್ ನಟರಾದ ಕಿಲಿ ಪೌಲ್, ಡಾರೆಲ್ ಡಿಸಿಲ್ವಾ, ಭಾರತದ ನಟರುಗಳಾದ ತಾರಾ ಸತಾರಿಯಾ, ಹುಮಾ ಖುರೇಷಿ, ಅಮಿತ್ ತಿವಾರಿ ಇನ್ನೂ ಕೆಲವರು ನಟಿಸುತ್ತಿದ್ದಾರೆ. ಸಿನಿಮಾನಲ್ಲಿ ಹಾಲಿವುಡ್ ಸ್ಟಂಟ್ ಮ್ಯಾನ್ ಜೆಜೆ ಪೆರ್ರಿ ಕೆಲಸ ಮಾಡುತ್ತಿದ್ದಾರೆ. ಸಂಗೀತ ನೀಡುತ್ತಿರುವುದು ಜೆರ್ಮಿ ಸ್ಟ್ಯಾಕ್ ಹಾಗೂ ಅನಿರುದ್ಧ್ ರವಿಚಂದ್ರನ್.
ಸಿನಿಮಾದ ಚಿತ್ರೀಕರಣ ಬೆಂಗಳೂರು, ಮುಂಬೈಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆದಿದೆ. ಅದಾದ ಬಳಿಕ ತೂತುಕುಡಿ, ರಾಜಸ್ಥಾನದ ಜೈಪುರಗಳಲ್ಲಿಯೂ ಸಿನಿಮಾದ ಚಿತ್ರೀಕರಣ ನಡೆದಿದೆ. ಸಿನಿಮಾ 2026, ಮಾರ್ಚ್ ತಿಂಗಳಲ್ಲಿ ಬಿಡುಗಡೆ ಆಗಲಿದೆ.
For More Updates Join our WhatsApp Group :
