11 ವರ್ಷಗಳ ಬಳಿಕ ಫೈನಲ್‌ಗೆ ಕರ್ನಾಟಕ ಎಂಟ್ರಿ.

11 ವರ್ಷಗಳ ಬಳಿಕ ಫೈನಲ್‌ಗೆ ಕರ್ನಾಟಕ ಎಂಟ್ರಿ.

ರಣಜಿ ಸೆಮಿಫೈನಲ್‌ನಲ್ಲಿ ಭರ್ಜರಿ ಮುನ್ನಡೆ.

ಬರೋಬ್ಬರಿ 11 ವರ್ಷಗಳ ಬಳಿಕ ಕರ್ನಾಟಕ ತಂಡ ರಣಜಿ ಟೂರ್ನಿಯ ಫೈನಲ್​ಗೇರಿದೆ. ಲಕ್ನೋನ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಉತ್ತರಾಖಂಡ್ ಮತ್ತು ಕರ್ನಾಟಕ ನಡುವಣ ಸೆಮಿಫೈನಲ್ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿದೆ. ಈ ಪಂದ್ಯವು ಡ್ರಾನಲ್ಲಿ ಕೊನೆಗೊಂಡರೂ ಮೊದಲ ಇನಿಂಗ್ಸ್​ನಲ್ಲಿನ 503 ರನ್​ಗಳ ಮುನ್ನಡೆಯ ಆಧಾರದ ಮೇಲೆ ಕರ್ನಾಟಕ ತಂಡವು ಫೈನಲ್​ಗೆ ಲಗ್ಗೆಯಿಟ್ಟಿದೆ.

ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಉತ್ತರಾಖಂಡ್ ತಂಡದ ನಾಯಕ ಕುನಾಲ್ ಚಂಡೆಲಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ಪರ ಕೆಎಲ್ ರಾಹುಲ್ (141) ಶತಕ ಬಾರಿಸಿದರೆ,  ನಾಯಕ ದೇವದತ್ ಪಡಿಕ್ಕಲ್ (232) ದ್ವಿಶತಕ ಸಿಡಿಸಿದರು.

ಫಾಲೋಆನ್​ ಹೇರದ ಕರ್ನಾಟಕ:

ಮೊದಲ ಇನಿಂಗ್ಸ್​ನಲ್ಲಿ 503 ರನ್​ಗಳ ಮುನ್ನಡೆ ಪಡೆದರೂ ಕರ್ನಾಟಕ ತಂಡ ಫಾಲೋ ಹೇರದೆ ದ್ವಿತೀಯ ಇನಿಂಗ್ಸ್ ಆರಂಭಿಸಿದ್ದರು. ಅದರಂತೆ ದ್ವಿತೀಯ ಇನಿಂಗ್ಸ್​ನಲ್ಲಿ ಕರ್ನಾಟಕ ಪರ ಕೃತಿಕ್ ಕೃಷ್ಣ 52, ಸ್ಮರಣ್ ರವಿಚಂದ್ರನ್ 127 ಹಾಗೂ ಕೆಎಲ್ ರಾಹುಲ್ 86 ರನ್ ಬಾರಿಸಿದರು. ಈ ಮೂಲಕ ಸೆಕೆಂಡ್ ಇನಿಂಗ್ಸ್​ನಲ್ಲಿ 323 ರನ್​ಗಳಿಸಿ ಆಲೌಟ್ ಆಗಿದೆ.

ಉತ್ತರಾಖಂಡ್ ಪ್ಲೇಯಿಂಗ್ 11: ಪ್ರಶಾಂತ್ ಚೋಪ್ರಾ , ಅವನೀಶ್ ಸುಧಾ , ಭೂಪೇನ್ ಲಾಲ್ವಾನಿ , ಕುನಾಲ್ ಚಂಡೆಲಾ (ನಾಯಕ) , ಲಕ್ಷ್ಯ ರಾಜೇಶ್ ರಾಯ್‌ಚಂದಾನಿ , ಜಗದೀಶ ಸುಚಿತ್ , ಸೌರಭ್ ರಾವತ್ (ವಿಕೆಟ್ ಕೀಪರ್) , ಅಭಯ್ ನೇಗಿ , ಮಾಯಾಂಕ್ ಮಿಶ್ರಾ , ಆದಿತ್ಯ ರಾವತ್ , ಜನಮೇಜಯ್ ಜೋಶಿ.

ಕರ್ನಾಟಕ ಪ್ಲೇಯಿಂಗ್ 11: ಕೆಎಲ್ ರಾಹುಲ್ , ಮಾಯಾಂಕ್ ಅಗರ್ವಾಲ್ , ದೇವದತ್ ಪಡಿಕ್ಕಲ್ (ನಾಯಕ) , ಕರುಣ್ ನಾಯರ್ , ಸ್ಮರಣ್ ರವಿಚಂದ್ರನ್ , ಶ್ರೇಯಸ್ ಗೋಪಾಲ್ , ಕೃತಿಕ್ ಕೃಷ್ಣ (ವಿಕೆಟ್ ಕೀಪರ್ ), ವಿದ್ಯಾಧರ ಪಾಟೀಲ್ , ವಿಜಯಕುಮಾರ್ ವೈಶಾಕ್ , ಶಿಖರ್ ಶೆಟ್ಟಿ , ಪ್ರಸಿದ್ಧ್ ಕೃಷ್ಣ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *