ಮೈಸೂರು: ಇನ್ಸೂರೆನ್ಸ್ ಹಣಕ್ಕಾಗಿ ಮಗನೊಬ್ಬ ಮಾಡಿದ ಸಂಚಿಗೆ ಎರಡು ಜೀವ ಬಲಿಯಾದ ಘಟನೆ ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮದ ಗೆರೋಸಿ ಕಾಲೋನಿಯಲ್ಲಿ ನಡೆದಿದೆ. ಈ ಕೃತ್ಯದ ಹಿಂದಿನ ಮಸಲತ್ತು ಅರಿತರೆ ಲೋಕದಲ್ಲಿ ಇಂತಹವರು ಇರುತ್ತಾರಾ? ಎಂಬ ಪ್ರಶ್ನೆಯೊಂದು ಮೂಡದಿರದು. ಇಷ್ಟಕ್ಕೂ ನಡೆದ ಘಟನೆ ಏನು ಎಂಬುದನ್ನು ನೋಡುತ್ತಾ ಹೋದರೆ ವ್ಯಕ್ತಿಯೊಬ್ಬನ ಪಾಪ ಕೃತ್ಯ ಬೆಳಕಿಗೆ ಬರುತ್ತದೆ.
ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮದ ಗೆರೋಸಿ ಕಾಲೋನಿ ನಿವಾಸಿ ಪಾಂಡು ಎಂಬಾತನೇ ತಂದೆಯನ್ನು ಹತ್ಯೆಗೈದ ಪಾಪಿ ಮಗ. ಈತ ತಂದೆ ಮತ್ತು ಅಣ್ಣ ಧರ್ಮನ ಹೆಸರಿನಲ್ಲಿ ಇನ್ಸೂರೆನ್ಸ್ ಮಾಡಿಸಿ ಅದನ್ನು ವಾಮಮಾರ್ಗದಲ್ಲಿ ಪಡೆಯುವ ಸಲುವಾಗಿ ಹೆತ್ತ ಅಪ್ಪನಿಗೆ ಮುಹೂರ್ತವಿಟ್ಟಿದ್ದಾನೆ. ಈ ನಡುವೆ ಅಪ್ಪ ಸತ್ತ ವಿಚಾರ ತಿಳಿಯುತ್ತಿದ್ದಂತೆಯೇ ಹಿರಿಮಗ ಧರ್ಮ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಲ್ಲಿ ಎರಡು ಜೀವಹೋಗಿದ್ದು ಅದಕ್ಕೆ ಕ್ರಿಮಿನಲ್ ಮೈಂಡ್ ನ ಪಾಂಡು ಕಾರಣನಾಗಿದ್ದಾನೆ.
ಹಂತಕ ಪಾಂಡುಗೆ ಒಮ್ಮೆಲೆ ಹಣ ಮಾಡುವ ಬಯಕೆ ಬಂದಿದೆ. ಕಷ್ಟಪಟ್ಟು ದುಡಿದು ಒಮ್ಮೆಲೆ ಲಕ್ಷಾಂತರ ರೂಪಾಯಿ ಸಂಪಾದಿಸುವುದು ಕಷ್ಟವಾಗಿರುವ ಕಾರಣ ಸುಲಭವಾಗಿ ಹಣ ಸಂಪಾದಿಸುವ ಮೋಸದ ಮಾರ್ಗ ಹುಡುಕುತ್ತಿದ್ದಾಗ ಅವನಿಗೆ ಬಂದ ಆಲೋಚನೆಯೇ ವಿಕೃತವಾಗಿತ್ತು. ಬಹುಶಃ ಯಾವ ಮಕ್ಕಳಿಗೂ ಇಂತಹ ಆಲೋಚನೆ ಬರಲು ಸಾಧ್ಯವಿಲ್ಲ. ಆದರೆ ಪಾಪಿ ಪಾಂಡುಗೆ ಬಂದಿದ್ದ ಆಲೋಚನೆ ಮಾತ್ರ ಭಿನ್ನವಾಗಿತ್ತು. ಅದು ಏನೆಂದರೆ ತಂದೆ ಮತ್ತು ಅಣ್ಣನಿಗೆ ಇನ್ಸೂರೆನ್ಸ್ ಮಾಡಿಸುವುದಾಗಿತ್ತು. ಇನ್ಸೂರೆನ್ಸ್ ಮಾಡಿಸಿ ಒಂದಷ್ಟು ಕಂತು ಕಟ್ಟಿದ ಬಳಿಕ ತಂದೆಯನ್ನು ಮುಗಿಸಿ ಅಪಘಾತದ ನಾಟಕವಾಡಿದರೆ ಅದರಿಂದ ಒಂದಕ್ಕೆ ಎರಡರಷ್ಟು ಹಣ ಬರುತ್ತದೆ ಎನ್ನುವುದು ಅವನ ಉದ್ದೇಶವಾಗಿತ್ತು. ಆದರೆ ತಂದೆಗೆ ಇದ್ಯಾವುದೂ ಗೊತ್ತೇ ಇರಲಿಲ್ಲ. ಇನ್ಸೂರೆನ್ಸ್ ಮಾಡಿಸಿದ ಪಾಂಡು ಅಪ್ಪನ ಮುಗಿಸಲು ಸಮಯ ಸಾಧಿಸುತ್ತಿದ್ದನು. ಈ ನಡುವೆ ತಂದೆಯನ್ನು ಟಿಬೇಟಿಯನ್ ಕ್ಯಾಂಪಿನಲ್ಲಿ ಕೆಲಸ ಇದೆ ಹೋಗು ಎಂದು ಕಳುಹಿಸಿ ಅವರನ್ನು ಹಿಂಬದಿಯಿಂದ ಹಿಂಬಾಲಿಸಿ ಸಮಯ ಸಾಧಿಸಿ ಯಾರು ಇಲ್ಲದ ವೇಳೆ ದೊಣ್ಣೆಯಿಂದ ತಲೆಗೆ ಹೊಡೆದು ಅಪಘಾತವೆಂಬಂತೆ ಬಿಂಬಿಸಿ ಬಿ.ಎಂ. ರಸ್ತೆಯ ಮಂಚ ದೇವನಹಳ್ಳಿ ಬಳಿ ಶವವನ್ನು ಎಸೆದಿದ್ದನು. ಇದಾದ ಬಳಿಕ ಬೈಲುಕುಪ್ಪೆ ಪೊಲೀಸರಿಗೆ ನನ್ನ ಅಪ್ಪನಿಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಸಾವನಪ್ಪಿರುವುದಾಗಿ ಮಾಹಿತಿ ನೀಡಿದ್ದನು. ಆದರೆ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಿದ ಸಬ್ ಇನ್ಸ್ ಪೆಕ್ಟರ್ ಅಜಯ್ ಕುಮಾರ್ ಮತ್ತು ತಂಡಕ್ಕೆ ಪಾಂಡುವಿನ ಹೇಳಿಕೆ ಮತ್ತು ನಡವಳಿಕೆ ಅನುಮಾನ ಮೂಡಿಸಿತ್ತು. ಹೀಗಾಗಿ ಪಾಂಡುವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವ ಸತ್ಯವನ್ನು ಒಪ್ಪಿಕೊಂಡಿದ್ದಾನೆ. ಈ ನಡುವೆ ತಂದೆ ಸಾವನ್ನಪ್ಪಿರುವ ವಿಚಾರ ತಿಳಿದು ಮತ್ತೊಬ್ಬ ಮಗ ಧರ್ಮ(ಹಂತಕನ ಅಣ್ಣ) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ಸೂರೆನ್ಸ್ ಹಣ ಪಡೆಯಲು ಕೊಲೆ ಪೊಲೀಸರ ವಿಚಾರಣೆ ವೇಳೆ ನನ್ನ ತಂದೆ ಹೆಸರಿನಲ್ಲಿ ಇನ್ಸೂರೆನ್ಸ್ ಮಾಡಿಸಿದ್ದು, ಅಪಘಾತದಲ್ಲಿ ಸಾವನಪ್ಪಿದ್ರೆ ಡಬಲ್ ಹಣ ಸಿಗುವ ಆಸೆಯಲ್ಲಿ ಈ ಕೃತ್ಯ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿಯನ್ನು ವಶಪಡಿಸಿಕೊಂಡಿರುವ ಬೈಲುಕುಪ್ಪೆ ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಸುದ್ದಿಯನ್ನು ಕೇಳಿದ ಊರಿನ ಮಂದಿ ಹಿಡಿಶಾಪ ಹಾಕುತ್ತಿದ್ದಾರೆ. ಲೋಕದಲ್ಲಿ ಹಣಕ್ಕಾಗಿ ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ಈ ಘಟನೆ