ಬೆಂಗಳೂರು: ದಸರಾ ಹಬ್ಬದ ಸಂದರ್ಭ ಸರಕು ಮತ್ತು ಸೇವಾ ತೆರಿಗೆ ಸಂಗ್ರಹಣೆಯಲ್ಲಿ ಕರ್ನಾಟಕ ದಾಖಲೆ ಮಾಡಿದೆ. ಸೆಪ್ಟೆಂಬರ್ ಅವಧಿಯಲ್ಲಿ ರಾಜ್ಯದ ತೆರಿಗೆ ಆದಾಯದಲ್ಲಿ ಶೇ.10ರಷ್ಟು ಹೆಚ್ಚಳವಾಗಿದ್ದು, ದಸರಾ ಹಬ್ಬದ ಖರೀದಿ ಜೋರಾಗಿ ನಡೆದಿರುವುದನ್ನು ಸಾಭೀತುಪಡಿಸಿದೆ. ಜಿಎಸ್ಟಿ ದರದಲ್ಲಿ ಕಡಿತದ ಬಳಿಕ ಬೆಲೆಗಳಲ್ಲಿ ಭಾರಿ ಇಳಿಕೆ ಹಿನ್ನಲೆ ಜನರು ಉತ್ಹಾದಿಂದ ಖರೀದಿಗೆ ಮುಂದಾದ ಹಿನ್ನಲೆ ತೆರಿಗೆ ಆದಾಯದಲ್ಲಿ ಹೆಚ್ಚಳ ಕಂಡುಬಂದಿದೆ. ಈ ಹೆಚ್ಚಳಕ್ಕೆ ರಾಜ್ಯ ಸರ್ಕಾರದ ಗ್ಯಾರಂಟಿ ಯೊಜನೆಗಳೇ ಕಾರಣ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದು, ಯೋಜನೆಗಳು ರಾಜ್ಯದ ಖಜಾನೆಗೆ ಯಾವುದೇ ಹೆಚ್ಚುವರಿ ಭಾರ ಉಂಟುಮಾಡಿಲ್ಲ. ಬದಲಾಗಿ ಜನರ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸಿದ್ದು, ಬೇಡಿಕೆಯನ್ನ ಉತ್ತೇಜಿಸಿದೆ ಎಂದಿದ್ದಾರೆ.
ಅಕ್ಟೋಬರ್ನಲ್ಲಿ 14,395 ಕೋಟಿ ಸಂಗ್ರಹ
ಶನಿವಾರ ಬಿಡುಗಡೆಯಾದ ಅಕ್ಟೋಬರ್ ತಿಂಗಳ ಜಿಎಸ್‌ಟಿ ಸಂಗ್ರಹಣೆ ವರದಿಯ ಪ್ರಕಾರ (ಸೆಪ್ಟೆಂಬರ್ ತಿಂಗಳ ವಹಿವಾಟುಗಳ ಆಧಾರದ ಮೇಲೆ), ರಾಜ್ಯವು 14,395 ಕೋಟಿ ಸಂಗ್ರಹಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 13,080 ಕೋಟಿ ರೂಪಾಯಿಗಳು ಕರ್ನಾಟಕದಲ್ಲಿ ಸಂಗ್ರಹವಾಗಿತ್ತು. ಇದು ಕೇಂದ್ರದ ಜಿಎಸ್ಟಿ, ಐಜಿಎಸ್ಟಿ ಮತ್ತು ಸೆಸ್ ಸೇರಿದಂತೆ ಒಟ್ಟು ಸಂಗ್ರಹಣೆಯಾಗಿದ್ದು, ಇವುಗಳ ಕಡಿತದ ಬಳಿಕ 7,065 ಕೋಟಿ ರೂ. ರಾಜ್ಯದ ಬೊಕ್ಕಸಕ್ಕೆ ಸಿಗಲಿದೆ. ಆ ಮೂಲಕ ಜಿಎಸ್ಟಿ ಸಂಗ್ರಹಣೆಯಲ್ಲಿ ಟಾಪ್ 5 ರಾಜ್ಯಗಳಲ್ಲಿ ಕರ್ನಾಟಕ ಉತ್ತಮ ಸ್ಥಾನ ಪಡೆದಿದೆ.
For More Updates Join our WhatsApp Group :




