ಚರಂಡಿ ಸಮಸ್ಯೆ ಹೇಳಿದರೆ ಬೇಕಾಬಿಟ್ಟಿ ಉತ್ತರ ಕೊಡ್ತಾರೆ 32ನೇ ವಾರ್ಡಿನ ಸದಸ್ಯ..!

ತುಮಕೂರು : ಪಾರ್ಕ್ ನಿರ್ಮಾಣ ಮಾಡುತ್ತೇವೆ ಎಂದು ಉತ್ತಮವಾಗಿದ್ದ ಚರಂಡಿಯನ್ನು ಹಾಳು ಮಾಡಿ ಇದೀಗ ಮುಂದೆ ಗಲೀಜು ನೀರು ಹರಿಯದೆ ಮಳೆ ನೀರು ಮನೆಯೊಳಗೆ ನುಗುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಇಡೀ ಕುಟುಂಬ ಪಾಲಿಕೆಯ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದೆ.

ಹೌದು,, ಇಂತಹದೊಂದು ಘಟನೆ ನಡೆದಿರುವುದು ತುಮಕೂರು ಮಹಾನಗರ ಪಾಲಿಕೆಯ 32ನೇ ವಾರ್ಡಿನ ಗೋಕುಲ ಬಡಾವಣೆ ಒಂದನೇ ಅಡ್ಡರಸ್ತೆ ಮಲ್ಲಿಗೆ ರಸ್ತೆಯಲ್ಲಿ, ಪಾರ್ಕ್ ಅಭಿವೃದ್ಧಿ ಮಾಡುತ್ತೇವೆ ಎಂದು ಕಳೆದ ಕೆಲವು ದಿನಗಳ ಹಿಂದೆ ಬಂದವರು ಪಾರ್ಕಿನ ಕಾಂಪೌಂಡಿಗೆ ಹೊಂದಿಕೊಂಡಂತೆ ಇದ್ದ ಚರಂಡಿಯನ್ನು ಹಾಳು ಮಾಡಿದ್ದಾರೆ.

ಈ ಚರಂಡಿ ಬ್ಲಾಕ್ ಆದರೆ ಮನೆಯೊಳಗೆ ಗಲೀಜು ನೀರು ಬರುತ್ತದೆ ಎಂದು ಮೊದಲೇ ಅರಿತಿದ್ದ ಕುಟುಂಬ ಇದನ್ನು ಸರಿ ಮಾಡಿ ಎಂದು ಎಷ್ಟೇ ಹೇಳಿದರು ಕೇಳದೆ, ಆಮೇಲೆ ಮಾಡುತ್ತೇವೆ ಈಗ ಮಾಡುತ್ತೇವೆ ಎಂದು ಸಬೂಬು ಹೇಳಿ ಈಗ ಪಾರ್ಕ್ ಅನ್ನು ಸರಿಯಾಗಿ ಕಾಮಗಾರಿ ನಡೆಸದೆ, ಚರಂಡಿ ಕಾಮಗಾರಿಯನ್ನು ನಡೆಸದೆ ಗಲೀಜು ನೀರು ಮುಂದೆ ಹರಿಯದಂತೆ ಬ್ಲಾಕ್ ಮಾಡಿದ್ದಾರೆ.

ಇತ್ತೀಚಿಗೆ ಬಂದ ಮಳೆ ನೀರು ಗಲೀಜು ನೀರಿನ ಜೊತೆ ಸೇರಿ ಮುಂದೆ ಹರಿಯಲು ಸಾಧ್ಯವಾಗದೆ ಮನೆಯೊಳಗೆ ನುಗ್ಗಿದೆ. ಇದರಿಂದಾಗಿ ದುರ್ವಾಸನೆ ಗಲೀಜು ನೀರಿನ ಸಮಸ್ಯೆಯನ್ನು ಎದುರಿಸಬೇಕಾಗಿದೆ. ಇದರ ಕೆಟ್ಟ ವಾಸನೆಯಿಂದ ಮನೆಯಲ್ಲಿರುವಂತಹ ಹಿರಿಯರ ಆರೋಗ್ಯ ಹದಗೆಟ್ಟಿದೆ ಎಂದು ನಿವಾಸಿ ಅನ್ನಪೂರ್ಣ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ.

ಇಂತಹದೊಂದು ಸಮಸ್ಯೆ ಉದ್ಭವ ಆಗಿದೆ, ಇದನ್ನು ಸರಿಪಡಿಸಿ ಕೊಡಿ ಎಂದು 32ನೇ ವಾರ್ಡಿನ ಪಾಲಿಕೆ ಸದಸ್ಯರು, ಮಾಜಿ ಮೇಯರ್ ಬಿ ಜಿ ಕೃಷ್ಣಪ್ಪ ಅವರ ಗಮನಕ್ಕೆ ತಂದರೆ. ಉಡಾಫೆ ಉತ್ತರ ನೀಡುತ್ತಿದ್ದಾರೆ ನಮ್ಮ ಸಮಸ್ಯೆಗಳನ್ನು ಜನಪ್ರತಿನಿಧಿಗಳ ಬಗ್ಗೆ ಹೇಳಿಕೊಳ್ಳದೆ ಮತ್ಯಾರ ಬಳಿ ಹೇಳಿಕೊಳ್ಳಬೇಕು ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ತಮ್ಮ ಈ ಮೊಂಡುವಾದವನ್ನು ಬಿಟ್ಟು ಯಾರು ಇದನ್ನು ಹಾಳು ಮಾಡಿದ್ದಾರೆ ಗುತ್ತಿಗೆದಾರ ಅವರಿಂದಲೇ ಇದನ್ನು ಸರಿ ಮಾಡಿಸಿ ಕೊಡಿ. ಇಲ್ಲ ಪರ್ಯಾಯವಾಗಿ ಇಲ್ಲಿ ಚರಂಡಿ ವ್ಯವಸ್ಥೆಯನ್ನು ದುರಸ್ತಿ ಮಾಡಿಸಿಕೊಡಿ ಎಂದು ಮನವಿ ಮಾಡಿದ್ದಾರೆ. ಇನ್ನು ಮುಂದೆಯಾದರೂ ಈ ಸಮಸ್ಯೆ ಬಗೆಹರಿಯುತ್ತಾ ಕಾದು ನೋಡಬೇಕಿದೆ.

ಕ್ಯಾಮೆರಾಮನ್ ಸುನಿಲ್ ಜೊತೆ ಮಂಜುನಾಥ್ ಪ್ರಗತಿ ಟಿವಿ ತುಮಕೂರು

Pragati TV Social Connect for more latest u

Leave a Reply

Your email address will not be published. Required fields are marked *