ತುಮಕೂರು || ಅಪಘಾತ ನಿಯಂತ್ರಣಕ್ಕೆ ರಸ್ತೆ ಸಂಪರ್ಕಕ್ಕೆ ತಡೆ : ಹೊಸ ಸಮಸ್ಯೆ ಸೃಷ್ಟಿ

  • ರಾಧಾಕೃಷ್ಣನ್ ರಸ್ತೆ -ಹೈಸ್ಕೂಲ್ ಮೈದಾನ ನಡುವಿನ ಸಂಪರ್ಕಕ್ಕೆ ತಡೆ
  • ಅಪಘಾತ ನಿಯಂತ್ರಣಕ್ಕೆ ಸಂಚಾರಿ ಪೊಲೀಸರ ಕ್ರಮ
  • ವಾಹನ ಸವಾರರಲ್ಲಿ ಗೊಂದಲ : ಹೊಸ ಸಂಚಾರ ಸಮಸ್ಯೆ ಸೃಷ್ಟಿ

ವರದಿ : ಎಸ್.ಹರೀಶ್‌ ಆಚಾರ್ಯ, ತುಮಕೂರು

ತುಮಕೂರು:  ನಗರದ ಸರ್ವಪಲ್ಲಿ ಡಾ.ರಾಧಾಕೃಷ್ಣನ್ ರಸ್ತೆ – ಸರ್ಕಾರಿ ಹೈಸ್ಕೂಲ್ ಮೈದಾನದ ನಡುವಿನ ನೇರ ಪ್ರವೇಶ ರಸ್ತೆ ಸಂಪರ್ಕಕ್ಕೆ ಸಂಚಾರಿ ಪೊಲೀಸರು ತಡೆ ಅಳವಡಿಸಿದ್ದು, ವಾಹನ ಸವಾರರಲ್ಲಿ ಗೊಂದಲ, ಮತ್ತೊಂದು ರೀತಿಯ ಸಮಸ್ಯೆಗೆ ಕಾರಣವಾಗಿದೆ.

ಈವರೆಗೆ ಹೈಸ್ಕೂಲ್ ಮೈದಾನದ ಪಶ್ಚಿಮ ಭಾಗದ ಪ್ರವೇಶ ದ್ವಾರಕ್ಕೆ  ತೆರಳಲು ಭದ್ರಮ್ಮ ಛತ್ರ ಪಕ್ಕದ ರಾಧಾಕೃಷ್ಣನ್ ರಸ್ತೆಯಿಂದ ಮೇಲ್ಸೇತುವೆ ಇಳಿಜಾರಿನ ೩ ದಾರಿ ಕೂಡುವ ಸ್ಥಳದಲ್ಲಿ ಯಾವುದೇ ರಸ್ತೆ ವಿಭಜಕ ಅಡೆಯಿಲ್ಲದೆ ನೇರಸಂಪರ್ಕ ವ್ಯವಸ್ಥೆಯಿತ್ತು. ಈ ಸಂಪರ್ಕವನ್ನು ಬಳಸಿ ಸೋಮೇಶ್ವರ ಪುರಂ ಮುಖ್ಯರಸ್ತೆಯಿಂದ, ಮಾರುತಿ ವಿದ್ಯಾಮಂದಿರ ರಸ್ತೆ ಕಡೆಯಿಂದ ಹಾಗೂ ಅರುಣಾ ಆಸ್ಪತ್ರೆ ಮುಂಭಾಗದ ರಸ್ತೆಯಿಂದ ಬರುವ ಎಲ್ಲಾ ವಾಹನ ಸವಾರರು ಹೈಸ್ಕೂಲ್ ಮೈದಾನ ಹಾಗೂ ರಾಧಾಕೃಷ್ಣನ್ ರಸ್ತೆಯ ಮತ್ತೊಂದು ಬದಿಗೆ ಸುಲಭ ಪ್ರವೇಶ ಪಡೆಯುತ್ತಿದ್ದರು. ಇದೀಗ ಆ ಸಂಪರ್ಕ ರಹದಾರಿಯನ್ನು ಸಂಚಾರಿ ಪೊಲೀಸರು ಬ್ಯಾರಿಕೇಡ್‌ಗಳಿಂದ ಮುಚ್ಚಿರುವುದು ಈ ಮೂರು ರಸ್ತೆ ಮೂಲಕ  ಸರ್ಕಾರಿ ಹೈಸ್ಕೂಲ್ ಮೈದಾನ ಪ್ರವೇಶ ಬಯಸಿದ್ದ  ಎಲ್ಲಾ ವಾಹನಸವಾರರು ರೈಲ್ವೆ ಸಮಾನಾಂತರ ರಸ್ತೆವರೆಗೂ ಸಾಗಿ ‘ಯೂ ಟರ್ನ್’ ಮೂಲಕ ರಾಧಾಕೃಷ್ಣನ್ ರಸ್ತೆಯ ಮತ್ತೊಂದು ಬದಿ ತಲುಪುವಂತಾಗಿದೆ. ಇದು ವಾಹನ ಸವಾರರಲ್ಲಿ ಗೊಂದಲಕ್ಕೆ ಕಾರಣವಾಗಿದ್ದು, ಅವೈಜ್ಞಾನಿಕ ಕ್ರಮ ಎಂದು ಅಸಮಾಧಾನ ಹೊರಹಾಕುತ್ತಿದ್ದಾರೆ.

ಈ ರೀತಿ ಮಾಡಿದ್ದೇಕೆ?: ಸಂಪರ್ಕ ರಸ್ತೆಗೆ ಹೊಂದಿಕೊAಡAತೆ ಮೇಲ್ಸುತೆವೆ ಇಳಿಜಾರಿನಲ್ಲಿ ವೇಗವಾಗಿ ಬರುವ ವಾಹನಗಳು ರಸ್ತೆ ದಾಟುವ ವಾಹನ ಸವಾರರಿಗೆ ಡಿಕ್ಕಿ ಹೊಡೆದು ಅಪಘಾತ ಹೆಚ್ಚಾಗುತ್ತದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸರು ಈ ಕೂಡು ರಸ್ತೆ ಮಧ್ಯದ ಸಂಪರ್ಕವನ್ನು ಬ್ಯಾರಿಕೇಡ್‌ಗಳಿಂದ ಮುಚ್ಚಿ, ಮೇಲ್ಸುತೆವೆ ಆರಂಭದ ಸ್ವಲ್ಪ ದೂರ ಬ್ಯಾರಿಕೇಡ್‌ಗಳಿಂದ ಡಿವೈಡ್ ಮಾಡಿದ್ದಾರೆ. ಆದರೆ ಪೊಲೀಸರ ಈ ಕ್ರಮದಿಂದ ಬೇರೆ ರೀತಿಯ ಸಂಚಾರ ಸಮಸ್ಯೆಗಳು ತಲೆದೋರಿವೆ.

ಹೊಸ ಸಮಸ್ಯೆಯೇನು?: ರಾಧಾಕೃಷ್ಣನ್ ರಸ್ತೆಯ ಪೂರ್ವಬದಿಯಿಂದ, ಪಶ್ಚಿಮ ಬದಿಗೆ ತೆರಳಲು ಸಂಪರ್ಕ ಬಂದ್ ಆಗಿರುವ ಕಾರಣಕ್ಕೆ ಮುಂದಕ್ಕೆ ಹೋಗಿ ಯೂಟರ್ನ್ ಪಡೆಯುವವರು ಯಾರು ಎಂದು? ಕೆಲವು ವಾಹನ ಸವಾರರು ಮೇಲ್ಸುತೆವೆಯಲ್ಲಿ ತೆರಳಿ ಬ್ಯಾರಿಕೇಡ್ ಕೊನೆಗೊಂಡ ನಂತರ ಅಲ್ಲಿ ತಿರುಗಿಸಿಕೊಂಡು ಮತ್ತೊಂದು ಬದಿಗೆ ಸಾಗುತ್ತಿರುವುದು ಫ್ಲೆöÊ ಓವರ್ ಮೇಲೆ ಸಂಚಾರ ದಟ್ಟಣೆ, ಅಪಘಾತಕ್ಕೆ ಆಸ್ಪದ ಒದಗಿಸಿದೆ. ಇನ್ನೂ ಸೋಮೇಶ್ವರ ಪುರಂ ಕಡೆಯಿಂದ ರಾಧಾಕೃಷ್ಣನ್ ರಸ್ತೆಯ ಪೂರ್ವ ಬದಿಯಲ್ಲಿರುವ, ಆಸ್ಪತ್ರೆ, ಬ್ಯಾಂಕ್‌ಗೆ ತೆರಳ ಬೇಕಾದವರು ರೈಲ್ವೆ ಸಮಾನಾಂತರ ರಸ್ತೆಯಿಂದ ಯೂಟರ್ನ್ ಪಡೆದು ಭದ್ರಮ್ಮ ಛತ್ರ ವೃತ್ತದಿಂದ ತಿರುಗಿಸಿ ಬರುವ ಸರಿಯಾದ ಕ್ರಮವನ್ನು ಪಾಲಿಸದೆ ಸ್ನೇಹಮನೋವಿಕಾಸ ಕೇಂದ್ರದ ಮುಂಭಾಗದ ರಸ್ತೆಯಲ್ಲಿ ದ್ವಿಪಥ ಸಂಚಾರಕ್ಕೆ ನಿರ್ಬಂಧವಿದ್ದರೂ ಅದೇ ರಸ್ತೆಯಲ್ಲಿ ಮುಂದಕ್ಕೆ ಸಾಗುತ್ತಿರುವುದು ಕಂಡುಬAದಿದೆ. ಇದು ಸಂಚಾರಿ ನಿಯಮ ಉಲ್ಲಂಘನೆಗೆ ಕಾರಣವಾಗುತ್ತಿರುವುದಲ್ಲದೆ ಕಿರಿದಾದ ರಸ್ತೆಯಲ್ಲಿ ವಾಹನಗಳು ಎದುರು-ಬದಿರಾಗಿ ಬರುವುದು ಅಪಘಾತಗಳನ್ನು ಆಹ್ವಾನಿಸುವಂತಿದೆ.

ರಸ್ತೆ ಬದಿ ಪಾರ್ಕಿಂಗ್ ನಿರ್ಬಂಧ: ಇನ್ನೂ ಸದರಿ ರಾಧಾಕೃಷ್ಣನ್ ರಸ್ತೆಯಲ್ಲಿ ಮೊದಲು ಅವಕಾಶ ಕಲ್ಪಿಸಿದ್ದ ಪಾರ್ಕಿಂಗ್‌ಗೂ ಸಂಚಾರಿ ಪೊಲೀಸರು ನಿರ್ಬಂಧ ವಿಧಿಸಿ ನಾಮಫಲಕ ಹಾಕಿದ್ದು, ಈ ಭಾಗದಲ್ಲಿ ಆಸ್ಪತ್ರೆ, ಬ್ಯಾಂಕ್, ವಾಣಿಜ್ಯ ಮಳಿಗೆಗಳಿಗೆ ಬರುವವರು ಎಲ್ಲಿ ವಾಹನ ನಿಲ್ಲಿಸಿ ತೆರಳಬೇಕೆಂದು ತಿಳಿಯದೆ ಪರದಾಡುವಂತಾಗಿದೆ. ದೂರ ತೆರಳಿ ವಾಹನ ಪಾರ್ಕಿಂಗ್ ಮಾಡಿ ಬರುವುದು ದುಸ್ತರ ಎನ್ನುವ ಕಾರಣಕ್ಕೆ ನಿಯಮ ಮೀರಿ ರಸ್ತೆಯಲ್ಲೆ ವಾಹನ ಪಾರ್ಕಿಂಗ್ ಮಾಡುತ್ತಿರುವುದು ಕಂಡುಬAದಿದೆ.

ಸದರಿ ರಸ್ತೆಯನ್ನು  ಸ್ಮಾರ್ಟ್ ಸಿಟಿ ಯೋಜನೆಯಡಿ ಕೋಟಿ ಕೋಟಿ ವೆಚ್ಚ ಮಾಡಿ ಅಭಿವೃದ್ಧಿ ಪಡಿಸಿದ್ದು, ವಿಶಾಲವಾದ ರಸ್ತೆ ಕಿರಿದಾಗಿದ್ದು ಒಂದು ತೆರನಾದ ಸಮಸ್ಯೆಯಾದರೆ ಪ್ರಸ್ತುತ ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಕೆಯಿಂದ ಉಂಟಾಗಿರುವ ಹೊಸ ಸಂಚಾರ ಸಮಸ್ಯೆÀ, ನೋ ಪಾರ್ಕಿಂಗ್ ಬೋರ್ಡ್ಗಳನ್ನು ಕಂಡು ಜನ ಇದೆಂಥಾ ಸಮಸ್ಯಾತ್ಮಕ ರಸ್ತೆ ಎಂದು ಶಪಿಸುವ ಸ್ಥಿತಿ ನಿರ್ಮಾಣವಾಗಿದೆ. ಪೊಲೀಸರು ಸೂಕ್ತ ಚಿಂತನೆಯ ವೈಜ್ಞಾನಿಕ ಪರಿಹಾರ ಕ್ರಮಗಳನ್ನು ಕೈಗೊಂಡು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂಬ ಆಗ್ರಹ ವಾಹನಸವಾರರು, ಸ್ಥಳೀಯ ನಿವಾಸಿಗಳಿಂದ ಕೇಳಿಬಂದಿದೆ.

ಪರಿಹಾರ ಕ್ರಮಕ್ಕೆ ನಿವೃತ್ತ ಡಿವೈಎಸ್ಪಿ ಸಲಹೆ

ಸದರಿ ರಾಧಾಕೃಷ್ಣನ್ ರಸ್ತೆಯಲ್ಲಿ ಮತ್ತೊಂದು ಬದಿಗೆ ತೆರಳುವ ಸಂಪರ್ಕಸ್ಥಳ ಬಂದ್ ಮಾಡಿ ಅಳವಡಿಸಿರುವ ಬ್ಯಾರಿಕೇಡ್ ಒಂದು ರೀತಿಯ ಅವೈಜ್ಞಾನಿಕ ಕ್ರಮವಾಗಿದೆ. ಸಂಚಾರಿ ಪೊಲೀಸರು ಈ ಕ್ರಮದಿಂದಾಗಿ ಮತ್ತಷ್ಟು ದೂರ ಕ್ರಮಿಸಿ ತಿರುವು ಪಡೆಯುವವರು ಯಾರು ಎಂದು ಕೆಲವು ವಾಹನ ಸವಾರರರು ರಸ್ತೆ ಮೇಲ್ಸುತೆವೆಯಲ್ಲಿ ಬ್ಯಾರಿಕೇಡ್ ಕೊನೆಗೊಳ್ಳುವವರೆಗೆ ತೆರಳಿ ತಿರುವು ಪಡೆದು ಮತ್ತಷ್ಟು ಅಪಘಾತಗಳಿಗೆ ಈಡಾಗುವ ಸನ್ನಿವೇಶ ನಿರ್ಮಾಣವಾಗಿದೆ. ಒನ್‌ವೇಯಲ್ಲಿ ದ್ವಿಮುಖವಾಗಿ ವಾಹನ ಸಂಚರಿಸುವAತಾಗಿದೆ. ಆದ್ದರಿಂದ ಮೆÄÃಲ್ಸುತೆವೆ ಇಳಿಜಾರಿನಿಂದ ವೇಗವಾಗಿ ಬರುವ ವಾಹನಗಳನ್ನು ನಿಯಂತ್ರಿಸಲು ಸೂಕ್ತ ಅಂತರದಲ್ಲಿ ರಸ್ತೆ ಹಂಪ್ಸ್ಗಳನ್ನು ಅಳವಡಿಸಿ ಕೂಡು ರಸ್ತೆ ತಿರುವಿನಲ್ಲಿ ಸಂಚಾರಿ ಪೊಲೀಸರ ನಿಗಾ ವ್ಯವಸ್ಥೆ ಮಾಡಿ ಬ್ಯಾರಿಕೇಡ್ ತೆಗೆದು ರಸ್ತೆ ದಾಟಲು ಅವಕಾಶ ಮಾಡಿಕೊಡುವುದು ಉತ್ತಮ ಎಂದು ನಿವೃತ್ತ ಡಿವೈಎಸ್ಪಿ ಜಗದೀಶ್ ಸಲಹೆ ನೀಡಿದ್ದಾರೆ.

Leave a Reply

Your email address will not be published. Required fields are marked *