ಮರ್ಡರ್ ಕೇಸ್ ತನಿಖೆಯಲ್ಲಿ ಖಾಕಿಗೆ ಶಾಕ್.

ಮರ್ಡರ್ ಕೇಸ್ ತನಿಖೆಯಲ್ಲಿ ಖಾಕಿಗೆ ಶಾಕ್.

ಒಂದೇ ಆರೋಪಿ, ಎರಡು ಕೊ*; ಹಳೆಯ ಕೇಸ್ ಕೂಡ ರೀ–ಓಪನ್.

ಬೆಳಗಾವಿ: ಗೋಕಾಕ್ ತಾಲೂಕಿನ ಘಟಪ್ರಭಾ ರೈಲ್ವೆ ನಿಲ್ದಾಣದ ಬಳಿ ಹತ್ಯೆಯಾದ ರೀತಿಯಲ್ಲಿ ಅಪರಿಚಿತ ವ್ಯಕ್ತಿಯೋರ್ವನ ಶವ ಪತ್ತೆ ಪ್ರಕಣ ತನಿಖೆ ವೇಳೆ ಪೊಲೀಸರೇ ದಂಗಾಗಿದ್ದಾರೆ. ಅಕ್ರಮ ಸಂಬಂಧದ ಕಾರಣಕ್ಕೆ ವ್ಯಕ್ತಿ ಕೊಲೆಯಾಗಿರೋದು ಗೊತ್ತಾಗಿದ್ದರೆ, ಆರೋಪಿ ಈ ಹಿಂದೆ ಮತ್ತೊಂದು ಮರ್ಡರ್​​ ಮಾಡಿ ಎಸ್ಕೇಪ್​​ ಆಗಿದ್ದ ಎಂಬುದೂ ಬಯಲಾಗಿದೆ.

ಅಕ್ಟೋಬರ್ 22ರಂದು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಘಟಪ್ರಭಾ ರೈಲ್ವೆ ನಿಲ್ದಾಣದ ಬಳಿ ಹತ್ಯೆ ಮಾಡಿದ ರೀತಿಯಲ್ಲಿ ವ್ಯಕ್ತಿಯೋರ್ವರ ಶವ ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೃತನ ಗುರುತು ಪತ್ತೆಯಾಗದ ಕಾರಣ ಪೊಲೀಸರು ಫಿಂಗರ್ ಪ್ರಿಂಟ್ ಹಾಗೂ ಆತನ ಕೈ ಮೇಲಿದ್ದ ಟ್ಯಾಟೂ ಆಧಾರಿಸಿ ತನಿಖೆಗೆ ಮುಂದಾಗಿದ್ದಾರೆ. ಈ ವೇಳೆ ಮೃತ ವ್ಯಕ್ತಿ ಅಥಣಿ ತಾಲೂಕಿನ ಮಹೇಶವಾಡಿ ಗ್ರಾಮದ ನಿವಾಸಿ ತುಕಾರಾಮ್ ಶಿಂಗೆ ಎಂಬುದು ಗೊತ್ತಾಗಿದೆ. ರಾಯಭಾಗ ತಾಲೂಕಿನ ಬೊಮ್ಮನಾಳ ಗ್ರಾಮದ ಮಾವನ ಮನೆಯಲ್ಲೇ ಬೆಳೆದಿದ್ದ ತುಕಾರಾಮ್, ರೇಲ್ವೆ ನಿಲ್ದಾಣದಲ್ಲಿ ಖಾಲಿ ಬಾಟಲ್ ಆರಿಸಿ ಗುಜರಿಗೆ ಹಾಕುವ ಕೆಲಸ ಮಾಡುತ್ತಿದ್ದ.

ಮುಂದಿನ ತನಿಖೆ ಭಾಗವಾಗಿ ಅನುಮಾನದ ಆಧಾರದಲ್ಲಿ ಪೊಲೀಸರು ಘಟಪ್ರಭಾದ ಬಾರ್​​ಗಳ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದಾಗ  ಬಾರ್​​ನಲ್ಲಿ ತುಕಾರಾಮ್​​ ಮದ್ಯ ಸೇವನೆ ಮಾಡ್ತಿರೋದು ಪತ್ತೆಯಾಗಿದೆ. ಈತನ ಜೊತೆ ಮತ್ತೊಬ್ಬ ಇರೋದು ಕೂಡ ಕಂಡಿದೆ. ಹೀಗಾಗಿ ಆತ ಯಾರೆಂಬ ಬಗ್ಗೆ ವಿಚಾರಣೆಗೆ ಇಳಿದಾಗ ತುಕಾರಾಮ್ ಜೊತೆಗೆ ಇದ್ದವ ಮಹಾರಾಷ್ಟ್ರ ಮೂಲದ ಆರೀಫ್ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಪ್ರಕರಣ ಸಂಬಂಧ ಈತನ ವಿಚಾರಣೆ ನಡೆಸಿದಾಗ ಕೊಲೆಗೂ ನನಗೂ ಸಂಬಂಧ ಇಲ್ಲ ಎಂದಿದ್ದಾನೆ. ಆದರೆ, ಚಿಕ್ಕೋಡಿ ಮೂಲದ ಪ್ರದೀಪ್ ನಾಯಕ್ ಎಂಬಾತನ ಜೊತೆಗೆ ತುಕಾರಾಮ್​​ ಜಗಳವಾಡಿದ್ದ ಎನ್ನುವ ವಿಷಯ ಬಾಯ್ಬಿಟ್ಟಿದ್ದಾನೆ. ಹೀಗಾಗಿ ಪ್ರದೀಪ್​​ ಬಗ್ಗೆ ಮಾಹಿತಿ ಸಿಕ್ಕರೆ ತಿಳಿಸುವಂತೆ ಆರೀಫ್​​ಗೆ ಪೊಲೀಸರು ಸೂಚಿಸಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *