ಕಳೆದ ವರ್ಷ ಭಾರತದಿಂದ 860 ಬಿಲಿಯನ್ ಡಾಲರ್ ರಫ್ತು.!

ಕಳೆದ ವರ್ಷ ಭಾರತದಿಂದ 860 ಬಿಲಿಯನ್ ಡಾಲರ್ ರಫ್ತು.!

860 ಬಿಲಿಯನ್ ಡಾಲರ್ ದಾಟಿದ ಒಟ್ಟು ರಫ್ತು – ಐತಿಹಾಸಿಕ ಸಾಧನೆ.

ನವದೆಹಲಿ : ಕಳೆದ ಹಣಕಾಸು ವರ್ಷದಲ್ಲಿ ಭಾರತದ ಒಟ್ಟು ರಫ್ತು 860.09 ಬಿಲಿಯನ್ ಡಾಲರ್ ಆಗಿದೆ. ಹಿಂದಿನ ವರ್ಷವಾದ 2024-25ರಲ್ಲಿ 825.26 ಬಿಲಿಯನ್ ಡಾಲರ್ ರಫ್ತು ದಾಖಲಾಗಿತ್ತು. ಅದಕ್ಕೆ ಹೋಲಿಸಿದರೆ 2025-26ರಲ್ಲಿ ರಫ್ತು ಶೇ. 4.22ರಷ್ಟು ಹೆಚ್ಚಳ ಆಗಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲೇ ಯಾವ ಹಣಕಾಸು ವರ್ಷದಲ್ಲೂ ದಾಖಲಾದ ಅತ್ಯಧಿಕ ರಫ್ತು ಪ್ರಮಾಣ ಇದಾಗಿದೆ. ಇದರಲ್ಲಿ ಸರಕು ಮತ್ತು ಸೇವೆ ಎರಡೂ ಒಳಗೊಂಡಿವೆ.

‘ಭಾರತದ ಒಟ್ಟಾರೆ ರಫ್ತು ಹೊಸ ದಾಖಲೆ ಮಟ್ಟಕ್ಕೆ ಏರಿದೆ. 2025-26ರ ಹಣಕಾಸು ವರ್ಷದಲ್ಲಿ ಒಟ್ಟೂ ಸರಕು ಮತ್ತು ಸೇವೆಗಳ ರಫ್ತು 860.09 ಬಿಲಿಯನ್ ಡಾಲರ್ ಇರಬಹುದು ಎಂದು ಅಂದಾಜಿಸಲಾಗಿದೆ. 2024-25ರಲ್ಲಿ 825.26 ಬಿಲಿಯನ್ ಡಾಲರ್ ರಫ್ತಾಗಿತ್ತು. ಶೇ. 4.22ರಷ್ಟು ರಫ್ತು ಏರಿಕೆ ಆಗಿದೆ. ಜಾಗತಿಕ ವ್ಯಾಪಾರದಲ್ಲಿ ಭಾರತದ ಉಪಸ್ಥಿತಿ ಮತ್ತಷ್ಟು ಬಲಗೊಂಡಿದೆ’ ಎಂದು ಕೇಂದ್ರ ವಾಣಿಜ್ಯ ಇಲಾಖೆ ಟ್ವೀಟ್ ಮಾಡಿದೆ.

ಮಾರ್ಚ್ ತಿಂಗಳಲ್ಲಿ ಭಾರತದ ಸರಕು ವ್ಯಾಪಾರ ಅಂತರ, ಅಂದರೆ ಟ್ರೇಡ್ ಡೆಫಿಸಿಟ್ 20.98 ಬಿಲಿಯನ್ ಡಾಲರ್​ಗೆ ಇಳಿದಿದೆ. ಫೆಬ್ರುವರಿಯಲ್ಲಿ 36.61 ಬಿಲಿಯನ್ ಡಾಲರ್​ಗಳಷ್ಟಿದ್ದ ಸರಕುಗಳ ರಫ್ತು ಮಾರ್ಚ್​ನಲ್ಲಿ 38.92 ಬಿಲಿಯನ್ ಡಾಲರ್​ಗೆ ಏರಿದೆ. ಸರಕುಗಳ ಆಮದು 63.71 ಬಿಲಿಯನ್ ಡಾಲರ್​ನಿಂದ 59.9 ಬಿಲಿಯನ್ ಡಾಲರ್​ಗೆ ತಗ್ಗಿದೆ.

ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ನಡುವೆಯೂ ಮಾರ್ಚ್ ತಿಂಗಳಲ್ಲಿ ಭಾರತ ಉತ್ತಮ ವಹಿವಾಟುಗಳನ್ನು ನಡೆಸಿರುವುದು ಗಮನಾರ್ಹ ಸಂಗತಿ. ಆದರೆ, ಬಿಕ್ಕಟ್ಟು ಹೀಗೆಯೇ ಮುಂದುವರಿದರೆ ಮುಂಬರುವ ದಿನಗಳಲ್ಲಿ 2025-26ರ ಮಟ್ಟದ ವ್ಯಾಪಾರವನ್ನು ನಿರೀಕ್ಷಿಸಲು ಕಷ್ಟವಾಗಬಹುದು ಎನ್ನಲಾಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *