ಬೆಂಗಳೂರು: ನಟ ಕಿಚ್ಚ ಸುದೀಪ್ ಯಾವಾಗ ರಾಜಕೀಯಕ್ಕೆ ಬರ್ತಾರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಸದಾ ಚರ್ಚೆಯಾಗುತ್ತಲೇ ಇದೆ. ಹುಟ್ಟುಹಬ್ಬದ ಪ್ರಯುಕ್ತ ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
“ಅಮ್ಮನ ಹೆಜ್ಜೆ ಹಸಿರು ಹೆಜ್ಜೆ” ಸುದೀಪ್ ತಮ್ಮ ಪರಿಸರ ಸಂರಕ್ಷಣೆ ಕಾರ್ಯಕ್ರಮ ‘ಅಮ್ಮನ ಹೆಜ್ಜೆ ಹಸಿರು ಹೆಜ್ಜೆ’ಕುರಿತು ಮಾತನಾಡಿ – ಕಲಾವಿದನಾಗಿ ಸದ್ಯಕ್ಕೆ ಇಷ್ಟು ಮಾಡಬಲ್ಲೆ. ರಾಜಕೀಯಕ್ಕೆ ಬಂದ ನಂತರ ಬೇರೆ ಕೆಲಸ ಮಾಡಬಹುದು” ಎಂದು ಹೇಳಿದ್ದಾರೆ.
ರಾಜಕೀಯ ಎಂಟ್ರಿ ಬಗ್ಗೆ ಪ್ರತಿಕ್ರಿಯೆ: ರಾಜಕೀಯ ಪ್ರವೇಶ ಯಾವಾಗ ಎಂಬ ಪ್ರಶ್ನೆಗೆ ಸುದೀಪ್ ಉತ್ತರಿಸುತ್ತಾ “ಸದ್ಯಕ್ಕೆ ರಾಜಕೀಯಕ್ಕೆ ಬರುವ ಯೋಚನೆ ಇಲ್ಲ. ಆದರೆ, ಆಗಾಗ ಕೆಲವರು ಅಂಥ ಯೋಚನೆ ಬರೋ ಹಾಗೆ ಮಾಡುತ್ತಾರೆಎಂದಿದ್ದಾರೆ. ಅಭಿಮಾನಿಗಳ ಕುತೂಹಲ ಮುಂದುವರಿಕೆ. ಹೀಗಾಗಿ, ಸುದೀಪ್ ಅವರ ರಾಜಕೀಯ ಎಂಟ್ರಿ ಬಗ್ಗೆ ಊಹಾಪೋಹಗಳು ಮುಂದುವರಿಯುವ ಸಾಧ್ಯತೆ ಇದೆ. ಆದರೆ, ಸದ್ಯಕ್ಕೆ ಅವರು ತಮ್ಮ ಸಿನಿಮಾ ಹಾಗೂ ಸಾಮಾಜಿಕ ಕಾರ್ಯಗಳಲ್ಲೇ ತೊಡಗಿಸಿಕೊಂಡಿದ್ದಾರೆ.
For More Updates Join our WhatsApp Group :
