ಇಂದಿನಿಂದ ವಿಜ್ರಂಭಣೆಯ ಆಚರಣೆ.
ಮಂಗಳೂರು : ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇಂದಿನಿಂದ ಕಿರುಷಷ್ಠಿ ಮಹೋತ್ಸವ ವಿಜ್ರಂಭಣೆಯಿಂದ ನಡೆಯುತ್ತಿದೆ. ಆದರೆ, ಈ ಮಹೋತ್ಸವಕ್ಕೆ ಅನ್ಯಧರ್ಮೀಯ ನಾಯಕರನ್ನು ಆಹ್ವಾನಿಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕ್ಷೇತ್ರ ಸಂರಕ್ಷಣಾ ವೇದಿಕೆಯು ಇಂದು ಪ್ರತಿಭಟನೆ ನಡೆಸುತ್ತಿದ್ದು, ಅನ್ಯಧರ್ಮೀಯ ನಾಯಕರಿಗೆ ಕೊಟ್ಟಿರುವ ಆಹ್ವಾನಗಳನ್ನು ತಕ್ಷಣವೇ ವಾಪಸ್ ಪಡೆಯುವಂತೆ ಆಗ್ರಹಿಸಿದೆ.
ಸ್ಪೀಕರ್ ಯು.ಟಿ. ಖಾದರ್, ಐವಾನ್ ಡಿಸೋಜ, ಬ್ಯಾರಿ ಅಕಾಡೆಮಿ ಅಧ್ಯಕ್ಷ ಉಮರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಗಫೂರ್, ಕನಿಷ್ಠ ವೇತನ ಸಲಹಾ ಮಂಡಳಿಯ ಶಹೀದ್ ತೆಕ್ಕಿಲ್, ಕೊಂಕಣಿ ಸಾಹಿತ್ಯ ಅಕಾಡೆಮಿಯ ಜೋಕಿಮ್, ಮತ್ತು ಶಾರ್ಲೆಟ್ ಪಿಂಟೋ ಸೇರಿದಂತೆ ಹಲವರಿಗೆ ಆಹ್ವಾನ ನೀಡಲಾಗಿದೆ. ಹಿಂದೂ ಶ್ರದ್ಧಾ ಕೇಂದ್ರಗಳಿಗೆ ಅನ್ಯಧರ್ಮೀಯರನ್ನು ಏಕೆ ಆಹ್ವಾನಿಸಬೇಕು ಎಂಬುದು ಆಕ್ರೋಶಕ್ಕೆ ಮುಖ್ಯ ಕಾರಣವಾಗಿದೆ.
For More Updates Join our WhatsApp Group :




