ತ್ರಯಂಬಕಪುರ ಬಳಿ ಬಸ್ ಮಾರ್ಗ ಮಧ್ಯದಲ್ಲೇ ನಿಂತು ಪ್ರಯಾಣಿಕರಿಗೆ ತೀವ್ರ ತೊಂದರೆ.
ಚಾಮರಾಜನಗರ : ಜಿಲ್ಲೆಯ ತ್ರಯಂಬಕಪುರ ಗೇಟ್ ಬಳಿ ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ನ ಆಕ್ಸೆಲ್ ಏಕಾಏಕಿ ಕಟ್ ಆಗಿದ್ದು, ಸಂಭವನೀಯ ದೊಡ್ಡ ದುರಂತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ಚಾಮರಾಜನಗರದಿಂದ ಗುಂಡ್ಲುಪೇಟೆಗೆ ತೆರಳುತ್ತಿದ್ದ ಸಾರಿಗೆ ಬಸ್ನ ಆಕ್ಸೆಲ್ ಮುರಿದ ಕಾರಣ ಬಸ್ ಮಾರ್ಗ ಮಧ್ಯದಲ್ಲೇ ನಿಂತಿದೆ.
ಇದರಿಂದಾಗಿ ಶಾಲೆ-ಕಾಲೇಜುಗಳಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರಿಗೆ ತೀವ್ರ ತೊಂದರೆ ಅನುಭವಿಸಿದ್ದಾರೆ. ಬಸ್ಗಳ ಸ್ಥಿತಿಗತಿಯನ್ನು ಪರಿಶೀಲಿಸದೆ ಹೇಗೆ ಡಿಪೋದಿಂದ ಹೊರಗೆ ಕಳುಹಿಸಲಾಗುತ್ತದೆ ಎಂದು ಪ್ರಯಾಣಿಕರು ಪ್ರಶ್ನಿಸಿದ್ದು, ಒಂದು ಸಣ್ಣ ಎಡವಟ್ಟಾಗಿದ್ದರೂ ಕೂಡ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
For More Updates Join our WhatsApp Group :




