ಕುಮಾರಸ್ವಾಮಿ ನ್ಯಾಯಯುತವಾಗಿ ಸೈಟ್‌ ಪಡೆದಿದ್ದಾರೆ, ಬೇಕಾದರೆ ಸಾರ್ವಜನಿಕರಿಗೆ ಬರೆದು ಕೊಡುತ್ತೇವೆ – ನಿಖಿಲ್​ 

ಮಂಡ್ಯ: “ಅದು ನಮ್ಮದೇ ಸ್ವತ್ತು. ನ್ಯಾಯಯುತವಾಗಿ ಹಣ ಕಟ್ಟಿಕೊಂಡು ಬಂದಿದ್ದೇವೆ. ಕುಮಾರಣ್ಣಂಗೆ ಬರಬೇಕಾದಂಥದ್ದು. ಆದರೂ ಬೇಕಾದರೆ ಸಾರ್ವಜನಿಕರಿಗೆ ಬರೆದು ಕೊಡುತ್ತೇವೆ” ಎಂದು ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್​​​​ ಕುಮಾರಸ್ವಾಮಿ ಮುಡಾ ಹಗರಣದಲ್ಲಿ ದಾಖಲೆ ಬಿಡುಗಡೆ ವಿಚಾರವಾಗಿ ಪ್ರತಿಕ್ರಿಯಿಸಿದರು.

ಮುಡಾ ಹಾಗೂ ವಾಲ್ಮೀಕಿ ಹಗರಣ ಕುರಿತು ಜೆಡಿಎಸ್​-ಬಿಜೆಪಿ ಪಾದಯಾತ್ರೆ ಹೋರಾಟದ ಬಗ್ಗೆ ಶನಿವಾರ ನಿಖಿಲ್​​ ಕುಮಾರಸ್ವಾಮಿ ಮಂಡ್ಯದಲ್ಲಿ ಪೂರ್ವಭಾವಿ ಸಭೆ ನಡೆಸಿದರು. ಈ ವೇಳೆ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದರು.

“ಈ ಬಗ್ಗೆ ಈಗಾಗಲೇ ದೆಹಲಿಯಲ್ಲಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಅವರು ಸಿಐಟಿಬಿಯಲ್ಲಿ ಸೈಟ್‌ ತೆಗೆದುಕೊಂಡಿದ್ದರು. ಅದು 1984ರಲ್ಲಿ ಇಂಡಸ್ಟ್ರಿಯಲ್ ಸೈಟ್​ ಆಗಿ ಹಂಚಿಕೆ ಆಗಿತ್ತು. ಆ ಸಮಯದಲ್ಲಿ ಕುಮಾರಸ್ವಾಮಿ ರಾಜಕಾರಣದಲ್ಲಿ ಇರಲಿಲ್ಲ. ಮೈಸೂರಿನಲ್ಲಿ ಒಂದು ಆಫೀಸ್ ಇಟ್ಟುಕೊಂಡಿದ್ದರು. ಸಿನಿಮಾ ಹಂಚಿಕೆದಾರರಾಗಿ ಅದರಿಂದ ಬಂದ ಹಣವನ್ನು ಸಾಮಾನ್ಯ ಪ್ರಜೆಯಾಗಿ ಕಟ್ಟಿ ಅಂದು ಅರ್ಜಿ ಹಾಕಿದ್ದರು” ಎಂದರು.

Leave a Reply

Your email address will not be published. Required fields are marked *