ಸಮಂತಾ ಹಾಗೂ ನಾಗ ಚೈತನ್ಯ ವಿಚ್ಛೇದನ ಪಡೆದಾಗ ಆರೋಪಗಳೆಲ್ಲ ನಾಗ ಚೈತನ್ಯ ಅವರ ಮೇಲೆ ಇತ್ತು. ಈ ವಿಚ್ಛೇದನಕ್ಕೆ ನಾಗ ಚೈತನ್ಯ ಕಾರಣ ಎಂಬ ಮಾತುಗಳು ಕೇಳಿ ಬಂದವು. ಈಗ ಸಮಂತಾಗೆ ಎರಡನೇ ವಿವಾಹ ಆಗಿದೆ. ‘ದಿ ಫ್ಯಾಮಿಲಿ ಮ್ಯಾನ್’ ನಿರ್ದೇಶಕ ರಾಜ್ ಜೊತೆ ಸಮಂತಾ ಹೊಸ ಬಾಳು ಆರಂಭಿಸಿದ್ದಾರೆ. ಇವರ ಮದುವೆಯ ಬೆನ್ನಲ್ಲೇ ಸಮಂತಾ ಆಪ್ತೆ ಎನಿಸಿಕೊಂಡಿದ್ದ ಮೇಕಪ್ ಆರ್ಟಿಸ್ಟ್ ಸಾಧ್ನಾ ಸಿಂಗ್ ಮಾಡಿದ ಪೋಸ್ಟ್ ವೈರಲ್ ಆಗಿದೆ. ಅವರು ಎಲ್ಲಿಯೂ ಹೆಸರು ಉಲ್ಲೇಖಿಸಿಲ್ಲ. ಆದರೆ, ಪರೋಕ್ಷ ಪೋಸ್ಟ್ ಚರ್ಚೆ ಹುಟ್ಟುಹಾಕಿದೆ.
ಸಮಂತಾ ಮತ್ತು ರಾಜ್ ನಿಡಿಮೋರು ಸೋಮವಾರ (ಡಿಸೆಂಬರ್ 1) ವಿವಾಹವಾದರು. ಕೊಯಮತ್ತೂರಿನ ಇಶಾ ಫೌಂಡೇಷನ್ನಲ್ಲಿ ಈ ಮದುವೆ ನಡೆಯಿತು. ಸಮಂತಾ ಹಾಗೂ ರಾಜ್ ಭೇಟಿ ಆಗಿದ್ದು 2019ರಲ್ಲಿ. ಸಮಂತಾ ಹಾಗೂ ನಾಗ ಚೈತನ್ಯ ವಿಚ್ಛೇದನ ಪಡೆದಿದ್ದು 2021ರಲ್ಲಿ. ಹೀಗಾಗಿ, ರಾಜ್ ಮತ್ತು ಸಮಂತಾ ಪರಿಚಯವೇ ಅವರ ದಾಂಪತ್ಯಕ್ಕೆ ಮುಳುವಾಯಿತೇ ಎಂಬ ಪ್ರಶ್ನೆ ಹುಟ್ಟುಹಾಕಿದೆ.
ಈ ಚರ್ಚೆ ಬೆನ್ನಲ್ಲೇ ಸಮಂತಾ ಮೇಕಪ್ ಆರ್ಟಿಸ್ಟ್ ಮಾಡಿರೋ ಪೋಸ್ಟ್ ಗಮನ ಸೆಳೆದಿದೆ. ‘ವಿಲನ್ ಆದವನು ತಾನೇ ಸಂತ್ರಸ್ತ ಎಂದು ಚೆನ್ನಾಗಿ ನಾಟಕ ಮಾಡುತ್ತಾನೆ’ ಎಂಬರ್ಥ ಬರುವ ರೀತಿಯಲ್ಲಿ ಸಾಧ್ನಾ ಪೋಸ್ಟ್ ಮಾಡಿದ್ದಾರೆ. ಇದು ಸಮಂತಾಗೆ ಹೇಳಿದ್ದು ಎನ್ನಲಾಗುತ್ತಿದೆ. ಇಷ್ಟೇ ಅಲ್ಲ, ಸಮಂತಾ ಅವರನ್ನು ಇನ್ಸ್ಟಾಗ್ರಾಮ್ನಲ್ಲಿ ಅವರು ಅನ್ಫಾಲೋ ಮಾಡಿದ್ದಾರೆ.
ರಾಜ್ ಹಾಗೂ ಸಮಂತಾಗೆ ಪರಿಚಯ ಆಗುವಾಗ ರಾಜ್ಗೆ ಆಗಲೇ ವಿವಾಹ ಆಗಿತ್ತು. ಶ್ಯಾಮಲಿ ಎಂಬುವವರ ಜೊತೆ ಇವರ ಮದುವೆ ನಡೆದಿತ್ತು. ಆದರೆ, ರಾಜ್ ಹಾಗೂ ಶ್ಯಾಮಲಿ ಬೇರೆ ಆಗಿದ್ದಾರೆ. ಇವರ ದಾಂಪತ್ಯದಲ್ಲಿ ಬಿರುಕು ಮೂಡಲು ಸಮಂತಾ ಕಾರಣ ಎಂಬ ಮಾತುಗಳು ಕೇಳಿ ಬಂದಿವೆ. ಆದರೆ, ಇದ್ಯಾವುದನ್ನು ಯಾರೂ ಅಧಿಕೃತವಾಗಿ ಒಪ್ಪಿಕೊಂಡಿಲ್ಲ.
For More Updates Join our WhatsApp Group :
