ಗದಗ ಅಂಗನವಾಡಿಗಳಲ್ಲಿ ಪೌಷ್ಠಿಕ ಆಹಾರ ಕೊರತೆ.

ಗದಗ ಅಂಗನವಾಡಿಗಳಲ್ಲಿ ಪೌಷ್ಠಿಕ ಆಹಾರ ಕೊರತೆ.

ಮೊಟ್ಟೆ ಹಣ ಬಿಡುಗಡೆ ವಿಳಂಬ; ಒಂದು ಮೊಟ್ಟೆ ಮೂವರಿಗೆ ಹಂಚಿಕೆ ಆರೋಪ.

ಗದಗ : ಜಿಲ್ಲೆಯ ಅಂಗನವಾಡಿಗಳಲ್ಲಿ ಮಕ್ಕಳು ಮತ್ತು ಗರ್ಭಿಣಿ ಸ್ತ್ರೀಯರಿಗೆ ಪೌಷ್ಟಿಕ ಆಹಾರದ ಕೊರತೆ ಎದುರಾಗಿದೆ. ಮುಂಡರಗಿ ತಾಲೂಕಿನ ಚುರ್ಚಿಹಾಳ ಗ್ರಾಮದ ಅಂಗನವಾಡಿಗಳಲ್ಲಿ ಜನವರಿ ತಿಂಗಳ ಮೊಟ್ಟೆ ಹಣ ಫೆಬ್ರವರಿ 11ರವರೆಗೂ ಬಿಡುಗಡೆಯಾಗಿಲ್ಲ. ಇದರ ಪರಿಣಾಮವಾಗಿ, ಒಂದು ಮೊಟ್ಟೆಯನ್ನು ಮೂರು ಮಕ್ಕಳಿಗೆ ಹಂಚಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಮೊಟ್ಟೆ ಮತ್ತು ಹಾಲಿಗೆ ಕೊರತೆ ಜೊತೆಗೆ ಮಕ್ಕಳ ಅನ್ನಕ್ಕೂ ಕನ್ನ ಹಾಕಲಾಗುತ್ತಿದೆ ಎಂದು ಹೆಳಲಾಗಿದೆ. ಅಲ್ಲದೆ, ಪೂರೈಕೆಯಾಗುವ ಗೋಧಿಯಲ್ಲಿ ನುಸಿಗಳಿದ್ದು, ಕಳಪೆ ಆಹಾರ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಘಟನೆಗಳಿಂದ ಆಕ್ರೋಶಗೊಂಡಿರುವ ಗ್ರಾಮಸ್ಥರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿರುದ್ಧ ಧ್ವನಿ ಎತ್ತಿದ್ದಾರೆ. ಅಧಿಕಾರಿಗಳು ಅನುದಾನ ಬಿಡುಗಡೆ ಮಾಡದಿರುವುದು ಅಥವಾ ಬಿಡುಗಡೆಯಾದ ಅನುದಾನ ಅಂಗನವಾಡಿಗಳಿಗೆ ತಲುಪದಿರುವುದು ಈ ಸಮಸ್ಯೆಗಳಿಗೆ ಕಾರಣ ಎನ್ನಲಾಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *