ಚಿರತೆ ದಾಳಿ || 10 ದಿನದಲ್ಲಿ ಆರನೇ ಸಾವು : ಸ್ಥಳೀಯರಲ್ಲಿ ಆತಂಕ

ಚಿರತೆ ದಾಳಿ || 10 ದಿನದಲ್ಲಿ ಆರನೇ ಸಾವು : ಸ್ಥಳೀಯರಲ್ಲಿ ಆತಂಕ

ರಾಜಸ್ಥಾನ :  ಉದಯಪುರ ಜಿಲ್ಲೆಯ ಗೊಗುಂಡಾ ಪ್ರದೇಶದಲ್ಲಿ ಚಿರತೆ ದಾಳಿ ಇನ್ನೂ ನಿಂತಿಲ್ಲ. ಭಾನುವಾರ ತಡರಾತ್ರಿ ಚಿರತೆ ದೇವಾಲಯದ ಅರ್ಚಕರೊಬ್ಬರ ಮೇಲೆ ದಾಳಿ ಮಾಡಿ ಕೊಂದಿತ್ತು. ಈ ಪ್ರದೇಶದಲ್ಲಿ ಚಿರತೆ ದಾಳಿಯಿಂದ ಇದುವರೆಗೆ 6 ಜನರು ಸಾವನ್ನಪ್ಪಿದ್ದಾರೆ.

ಚಿರತೆ ನಿರಂತರ ದಾಳಿಯಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಈ ಅರ್ಚಕ ಕಳೆದ 50 – 60 ವರ್ಷಗಳಿಂದ ದೇವಸ್ಥಾನದಲ್ಲಿ ವಾಸವಾಗಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

‘ದೇವಾಲಯದಲ್ಲಿ ಮಲಗಿದ್ದ ಅರ್ಚಕನ ಮೇಲೆ ಚಿರತೆ ದಾಳಿ ಮಾಡಿ ಕೊಂದಿದೆ. ಮೃತ ವ್ಯಕ್ತಿಯ ಶವ ಕಾಡಿನಲ್ಲಿ ಪತ್ತೆಯಾಗಿದ್ದು, ಗೋಗುಂದ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಬಹುಶಃ ಈ ದಾಳಿಯನ್ನ ಒಂದೇ ಪ್ರಾಣಿ ನಡೆಸುತ್ತಿದೆ. ಇದರಿಂದಾಗಿ ಗ್ರಾಮೀಣ ಭಾಗದಲ್ಲಿ ರಾತ್ರಿ ವೇಳೆ ಜನ ಮನೆಯಿಂದ ಹೊರಗೆ ಬರುತ್ತಿಲ್ಲ’ ಎಂದು ಗೋಗುಂದ ಪೊಲೀಸ್ ಠಾಣಾಧಿಕಾರಿ ಶೈತಾನ್ ಸಿಂಗ್ ತಿಳಿಸಿದ್ದಾರೆ.

ಗೋಗುಂದ ಭಾಗದಲ್ಲಿ ಮಕ್ಕಳ ಮೇಲೆ ಚಿರತೆ ದಾಳಿ ನಡೆಸಬಹುದು ಎಂಬ ಭಯದಲ್ಲಿರುವುದರಿಂದ ಗ್ರಾಮಸ್ಥರಲ್ಲಿ ಭದ್ರತೆಯ ಭಾವ ಮೂಡಿಸಲು ಸಂಸದ ಡಾ. ಮನ್ನಾಲಾಲ್ ರಾವತ್ ಅವರು ಮೇಲ್ವಿಚಾರಣೆ ವಹಿಸಿಕೊಂಡಿದ್ದಾರೆ. ಈಗಾಗಲೇ ಚಿರತೆ ದಾಳಿ ನಡೆಸಿರುವ ಪ್ರದೇಶಗಳಿಗೆ ಸಂಸದರು ತೆರಳಿ ಅಲ್ಲಿನ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದ್ದಾರೆ.

Leave a Reply

Your email address will not be published. Required fields are marked *