ಹೌದು ! ಇದು ವಿಚಿತ್ರ ಎಂದರು ಈ ಒಂದು ಆಚರಣೆ ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಇದೆ. ಭಾರತವು ಅನೇಕ ಸಂಪ್ರದಾಯ ಆಚರಣೆ ಗಳಿಗೆ ಹೆಸರುವಾಸಿಯಾದ ದೇಶವಾಗಿದೆ. ಒಂದೊಂದು ಭಾಗದ ಕೆಲವು ಸಂಪ್ರದಾಯಗಳು ಕೆಲವೊಮ್ಮೆ ಜನರಿಗೆ ಅಚ್ಚರಿಯನ್ನು ಉಂಟುಮಾಡುತ್ತವೆ. ಅಂದ ಹಾಗೆ ರಾಜಸ್ಥಾನದ ಈ ಹಳ್ಳಿಯಲ್ಲಿ ಪ್ರತಿಯೊಬ್ಬ ಪುರುಷನು ಎರಡು ಮದುವೆಯಾಗುತ್ತಾನೆ. ಈ ಗ್ರಾಮದ ಹೆಸರು ರಾಮದೇವ್ ಕಿ ಬಸ್ತಿ. ಇಲ್ಲಿ ಪ್ರತಿಪುರುಷನಿಗೆ ಇಬ್ಬರು ಪತ್ನಿಯರಿದ್ದಾರೆ. ರಾಜಸ್ಥಾನದ ಎಗ್ ಗ್ರಾಮದಲ್ಲಿ ದಶಕಗಳಿಂದ ನಡೆದುಕೊಂಡು ಬಂದಿರುವ ಈ ವಿಭಿನ್ನ ಸಂಪ್ರದಾಯವೇ ಎರಡನೇ ಮದುವೆಗೆ ಕಾರಣ. ಒಂದು ವರದಿಯ ಪ್ರಕಾರ ಈ ಗ್ರಾಮದಲ್ಲಿ ಪುರುಷನ ಮೊದಲ ಹೆಂಡತಿ ಎಂದಿಗೂ ಗರ್ಭ ಧರಿಸಲು ಸಾಧ್ಯವಿಲ್ಲ ಎಂಬ ನಂಬಿಕೆ ಇದೆ ಒಂದು ವೇಳೆ ಗರ್ಭ ಧರಿಸಿದರೆ ಆಕೆಗೆ ಹೆಣ್ಣು ಮಗುವಿನ ಜನನವಾಗುತ್ತದೆಯೇ ಹೊರತು ಗಂಡು ಮಗು ಜನಿಸಲ್ಲ. ಇದರಿಂದ ಗ್ರಾಮದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ ಅದಕ್ಕಾಗಿಯೇ ಇಲ್ಲಿನ ಪುರುಷರು ಎರಡು ಮದುವೆಯಾಗುತ್ತಾರೆ ಇದರಿಂದ ಅವರ ಕುಟುಂಬದಲ್ಲಿ ಗಂಡು ಮಗುವಿನ ಜನನವಾಗುತ್ತದೆ ಎಂಬ ಮತ್ತೊಂದು ನಂಬಿಕೆಯು ಇದೆ. ಈ ಸಂಪ್ರದಾಯವನ್ನು ಗಮನಿಸಿದರೆ ಹಳೆಯ ಜನರು ಇನ್ನೂ ಅದೇ ಸಂಪ್ರದಾಯಗಳಿಗೆ ಅಂಟಿಕೊಂಡಂತೆ ಇದ್ದಾರೆ ಅಲ್ಲವೇ?
ಈ ಊರಿನಲ್ಲಿ ಪ್ರತಿಪುರುಷನಿಗೂ ಇಬ್ಬರು ಹೆಂಡತಿಯರಂತೆ?
