ಸರ್ಕಾರಕ್ಕೆ ಶಾಕ್ ಕೊಟ್ಟ ಮದ್ಯ ಪ್ರಿಯರು..!

ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಪರಿಣಾಮವಾಗಿ ಒಂದೊಂದೇ ಬೆಲೆ ಏರಿಕೆಯ ಬಿಸಿ ಜನರಿಗೆ ತಟ್ಟುತ್ತಿದೆ. ಇದರ ನಡುವೆ ರಾಜ್ಯ ಸರಕಾರ ಜುಲೈ ತಿಂಗಳಲ್ಲಿ ಮದ್ಯ ಹಾಗೂ ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ವಿಧಿಸಿತ್ತು.

ಈ ಮೂಲಕ ಹೆಚ್ಚಿನ ಆದಾಯವನ್ನು ನಿರೀಕ್ಷೆ ಮಾಡಿತ್ತು. ಆದರೆ ಮದ್ಯಪ್ರಿಯರು ಸರ್ಕಾರಕ್ಕೆ ಶಾಕ್ ಕೊಟ್ಟಿದ್ದಾರೆ. ಭಾರತೀಯ ಮದ್ಯ(ಐಎಂಎಲ್) ಮಾರಾಟ ಪ್ರಮಾಣ ಶೇ.15ರಷ್ಟು ಕುಸಿತ ಕಂಡಿದೆ. ಆದರೆ, ಬಿಯರ್ ಮಾರಾಟದಲ್ಲಿ ಅಂತಹ ವ್ಯತ್ಯಯವೇನೂ ಆಗಿಲ್ಲ. ಅಬಕಾರಿ ಸುಂಕ ಹೆಚ್ಚಳ ಆಗುತ್ತಿದ್ದಂತೆ ಬಾರ್, ಚಿಲ್ಲರೆ ಮದ್ಯದ ಅಂಗಡಿಗಳಲ್ಲಿ ಮಾರಾಟ ಕುಸಿದಿದೆ. ಹೀಗಾಗಿ ರಾಜ್ಯ ಪಾನೀಯ ನಿಗಮಕ್ಕೆ ಮದ್ಯಕ್ಕಾಗಿ ಸಲ್ಲಿಸುವ ಖರೀದಿ ಬೇಡಿಕೆ (ಪರ್ಚೇಸ್ ಇಂಡೆಂಟ್) ಇಳಿಕೆಯಾಗಿದೆ. ಅಬಕಾರಿ ಇಲಾಖೆ ಅಂಕಿ-ಅಂಶಗಳ ಪ್ರಕಾರ ಮದ್ಯ ಮಾರಾಟ ಶೇ.15ರಷ್ಟು ಕುಸಿತವಾಗಿದ್ದರೆ, ಬಿಯರ್ ಶೇ.5ರಷ್ಟು ಕುಸಿದಿದೆ.

ಮದ್ಯ

ಇದಿರಂದ ಸರ್ಕಾರದ ಆದಾಯ ಸಂಗ್ರಹದ ಮೇಲೂ ಪರಿಣಾಮ ಬೀರಿದೆ. ಏಪ್ರಿಲ್ -2308 ಕೋಟಿ, ಮೇ -2607 ಕೋಟಿ, ಜೂನ್-3549 ಕೋಟಿ, ಜುಲೈ-2980 ಕೋಟಿ ರೂ. ಇದ್ದ ಆದಾಯ ಆಗಸ್ಟ್ ತಿಂಗಳಲ್ಲಿ (ಆ.14ವರೆಗೆ) ಕೇವಲ 962 ಕೋಟಿ ರೂ. ಸಂಗ್ರಹವಾಗಿದೆ.

2022ರ ಆಗಸ್ಟ್ನಲ್ಲಿ 25.50 ಲಕ್ಷ ಸ್ವದೇಶಿ ಬ್ರ್ಯಾಂಡ್ ಬಾಕ್ಸ್, 10.34 ಲಕ್ಷ ಬಿಯರ್ ಬಾಕ್ಸ್ ಸೇಲ್ ಆಗಿತ್ತು. ಆದರೆ 2023ರ ಆಗಸ್ಟ್ ನಲ್ಲಿ 21.87 ಲಕ್ಷ ದೇಶಿ ಬ್ರ್ಯಾಂಡ್ ಬಾಕ್ಸ್, ಬಿಯರ್ 12.52 ಲಕ್ಷ ಬಾಕ್ಸ್ ಮಾತ್ರ ಮಾರಾಟವಾಗಿದೆ. ಕಡಿಮೆ ದರದ ಬ್ರ್ಯಾಂಡ್ಗಳಿಗೆ ಬೇಡಿಕೆ ಹೆಚ್ಚಿದೆ. ಸ್ಕಾಚ್ ಪ್ರಿಯರು ಪ್ರೀಮಿಯಮ್ ಬ್ರ್ಯಾಂಡ್ಗೆ ಶಿಫ್ಟ್ ಆದ್ರೆ, ಪ್ರೀಮಿಯಮ್ ಪ್ರಿಯರು ನಾರ್ಮಲ್ ಬ್ರ್ಯಾಂಡ್ಗೆ ಶಿಫ್ಟ್ ಆಗಿದ್ದಾರೆ. ಇದರಿಂದ ಸರ್ಕಾರಿ ಆದಾಯ ಸಂಗ್ರಹದ ಮೇಲೂ ಎಫೆಕ್ಟ್ ಆಗಿದೆ. ಕಳೆದ ನಾಲ್ಕು ತಿಂಗಳಲ್ಲಿ ಪ್ರತಿ ತಿಂಗಳು ಎರಡೂವರೆ ಸಾವಿರ ಕೋಟಿ ಆದಾಯ ಬರ್ತಿತ್ತು. ಆದರೆ ಈ ಆಗಸ್ಟ್ನಲ್ಲಿ 962 ಕೋಟಿ ಮಾತ್ರ ಸಂಗ್ರಹವಾಗಿದೆ.

Pragati TV Social Connect for more latest u

Leave a Reply

Your email address will not be published. Required fields are marked *