ಇತ್ತೀಚಿಗಷ್ಟೇ ವಿಶ್ವದಲ್ಲೇ ಅತಿ ಹೆಚ್ಚು ಪುಸ್ತಕಗಳನ್ನು ಪ್ರಕಟಿಸುವ ಟಾಪ್ 10 ದೇಶಗಳ ಪಟ್ಟಿ ಬಿಡುಗಡೆಯಾಗಿದೆ. ಇದರಲ್ಲಿ ವಾರ್ಷಿಕವಾಗಿ ಅತೀ ಹೆಚ್ಚು ಅಂದರೆ 275,000 ಕ್ಕೂ ಪುಸ್ತಕವನ್ನು ಪ್ರಕಟಿಸುವ ಮೂಲಕ ಯುನೈಟೆಡ್ ಸ್ಟೇಟ್ಸ್ ಮೊದಲ ಸ್ಥಾನವನ್ನು ಪಡೆದಿದೆ. ನಂತರ ಚೀನಾ ಮತ್ತು ಯುನೈಟೆಡ್ ಕಿಂಗ್ಡಮ್. ಭಾರತ 10ನೇ ಸ್ಥಾನದಲ್ಲಿದ್ದು, ಇಲ್ಲಿ 24ಕ್ಕೂ ಹೆಚ್ಚು ಭಾಷೆಗಳಲ್ಲಿ ಪ್ರತೀ ವರ್ಷ 90ಸಾವಿರಕ್ಕೂ ಅಧಿಕ ಪುಸ್ತಕಗಳು ಪ್ರಕಟವಾಗುತ್ತಿದೆ ಎಂದು ತಿಳಿದುಬಂದಿದೆ.
ಪುಸ್ತಕಗಳು ಮನುಷ್ಯನ ಶ್ರೇಷ್ಠ ಸ್ನೇಹಿತ ಇದ್ದಂತೆ, ಅವು ಜ್ಞಾನ, ಮಾಹಿತಿ ಮತ್ತು ಸ್ಫೂರ್ತಿಯ ಮೂಲವಾಗಿವೆ. ಜಾಗತೀಕರಣದ ಹಾವಳಿಯಲ್ಲಿಯೂ ಜನರಲ್ಲಿ ಪುಸ್ತಕ ಪ್ರೀತಿ ಕಡಿಮೆಯಾಗಿಲ್ಲ. ಇದೀಗ ವರದಿಯೊಂದು ಬಿಡುಗಡೆಯಾಗಿದ್ದು, ಪುಸ್ತಕಗಳನ್ನು ಮುದ್ರಿಸುವ ಟಾಪ್ ಹತ್ತು ದೇಶಗಳ ಬಗ್ಗೆ ಇದು ಬಹಿರಂಗಪಡಿಸಿದೆ. ಇದರಲ್ಲಿ ಭಾರತವು 10ನೇ ಸ್ಥಾನದಲ್ಲಿದ್ದು, ಪ್ರತಿ ವರ್ಷ ಭಾರತದಲ್ಲಿ 24 ಕ್ಕೂ ಹೆಚ್ಚು ಭಾಷೆಗಳಲ್ಲಿ ಸುಮಾರು 90,000 ಪುಸ್ತಕಗಳು ಪ್ರಕಟವಾಗುತ್ತವೆ ಎಂದು ತಿಳಿದುಬಂದಿದೆ.
ಭಾರತವು ಡಿಜಿಟಲ್ ಜಗತ್ತಿನಲ್ಲಿ ಮಾತ್ರವಲ್ಲದೆ ಮುದ್ರಿತ ಪದಗಳ ಜಗತ್ತಿನಲ್ಲಿಯೂ ವೇಗವಾಗಿ ಪ್ರಗತಿ ಸಾಧಿಸುತ್ತಿದೆ ಎಂದು ತೋರಿಸುತ್ತದೆ. ಈ ಪಟ್ಟಿಯಲ್ಲಿ ವಾರ್ಷಿಕವಾಗಿ ಅತೀ ಹೆಚ್ಚು ಅಂದರೆ 275,000 ಕ್ಕೂ ಪುಸ್ತಕವನ್ನು ಪ್ರಕಟಿಸುವ ಮೂಲಕ ಯುನೈಟೆಡ್ ಸ್ಟೇಟ್ಸ್ ಮೊದಲ ಸ್ಥಾನವನ್ನು ಪಡೆದಿದೆ.
ಟಾಪ್ 10 ರಲ್ಲಿ ಯಾವ ದೇಶಗಳಿವೆ?
1. ಅಮೆರಿಕ
2. ಚೀನಾ
3. ಯುನೈಟೆಡ್ ಕಿಂಗ್ಡಮ್
4. ರಷ್ಯಾ
5. ಜರ್ಮನಿ
6. ಇಟಲಿ
7. ಫ್ರಾನ್ಸ್
8. ಜಪಾನ್
9. ಇರಾನ್
10. ಭಾರತ
ವಿಶ್ವದ ಗರಿಷ್ಠ ಸಂಖ್ಯೆಯ ಪುಸ್ತಕಗಳನ್ನು ಮುದ್ರಿಸುವ ದೇಶಗಳಲ್ಲಿ ಭಾರತವೂ ಸೇರಿರುವುದು ಹೆಮ್ಮೆಯ ವಿಷಯ. ಭಾರತದ ಅತ್ಯಂತ ವಿಶೇಷವೆಂದರೆ ಪುಸ್ತಕಗಳನ್ನು ಇಂಗ್ಲಿಷ್ನಲ್ಲಿ ಮಾತ್ರವಲ್ಲದೆ ಹಿಂದಿ, ತಮಿಳು, ಬಂಗಾಳಿ, ಉರ್ದು, ಗುಜರಾತಿ, ತೆಲುಗು ಮುಂತಾದ 24 ಕ್ಕೂ ಹೆಚ್ಚು ಭಾಷೆಗಳಲ್ಲಿ ಮುದ್ರಿಸಲಾಗುತ್ತದೆ. ಭಾರತೀಯ ಓದುಗರ ಒಲವು ಕೇವಲ ಒಂದು ಭಾಷೆಗೆ ಸೀಮಿತವಾಗಿಲ್ಲ ಎಂಬುದನ್ನು ಇಲ್ಲಿ ತಿಳಿಯಬಹುದು.