Live || Modi 3.0 ಮೊದಲ ಬಜೆಟ್‌ : ನಿರ್ಮಲಾ ಸೀತಾರಾಮನ್‌ ಐತಿಹಾಸಿಕ 7ನೇ ಬಜೆಟ್‌

ದಾಖಲೆ ಬರೆದ ನಿರ್ಮಲಾ ಸೀತಾರಾಮನ್: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ ಕೇಂದ್ರ ಬಜೆಟ್ 2024 ನ್ನು ಮಂಡಿಸಲಿದ್ದು, ಇದು ಅವರ ಸತತ ಏಳನೇ ಬಜೆಟ್ ಮಂಡನೆಯಾಗಿದೆ.

ದಿವಂಗತ ಮೊರಾಜಿ ದೇಸಾಯಿ ಅವರ ಸತತ ಆರು ಬಜೆಟ್‌ಗಳ ದಾಖಲೆಯನ್ನು ಅವರು ಇಂದು ಮುರಿಯಲಿದ್ದಾರೆ. ಆದಾಯ ತೆರಿಗೆ ರಚನೆಯಲ್ಲಿನ ಬದಲಾವಣೆಗಳ ಮೇಲೆ ಕೇಂದ್ರೀಕರಿಸುವ ಸಾಧ್ಯತೆಯಿದೆ.

Live updateಗಾಗಿ ಪೇಜ್ ರೀಲೋಡ್ ಮಾಡಿ

12:35 PM (IST)

ವೇತನದಾರರ ಸ್ಯಾಡಂರ್ಡ್​ ಡಿಡಕ್ಷನ್ ಇಳಿಕೆ

  • ಹೊಸ ತೆರಿಗೆ ಪದ್ಧತಿಯಲ್ಲಿ ವೇತನದಾರರ ಸ್ಯಾಡಂರ್ಡ್​ ಡಿಡಕ್ಷನ್ 50 ಸಾವಿರ ದಿಂದ 75 ಸಾವಿರಕ್ಕೆ ಇಳಿಕೆ
  • ಹೊಸ ಆದಾಯ ತೆರಿಗೆಯಲ್ಲಿ ಸ್ಲ್ಯಾಬ್ಸ್ ಘೋಷಣೆ:
  • 3 ಲಕ್ಷದವರೆಗೆ 0 ತೆರಿಗೆ
  • 3-7 ಲಕ್ಷಕ್ಕೆ ಶೇ.5
  • 7-10 ಲಕ್ಷ ಕ್ಕೆ ಶೇ.10
  • 10-12 ಲಕ್ಷಕ್ಕೆ ಶೇ.15
  • 12-15 ಲಕ್ಷಕ್ಕೆ ಶೇ.20
  • 15 ಲಕ್ಷ ಮೇಲಿನ ಆದಾಯಕ್ಕೆ ಶೇ.30 ರಷ್ಟು ತೆರಿಗೆ

12:34 PM (IST)

ಬಜೆಟ್ ಗಾತ್ರ 32.07 ಲಕ್ಷ ಕೋಟಿ ರೂ

ಬಜೆಟ್ ಗಾತ್ರ: ಈ ಬಾರಿಯ ಕೇಂದ್ರ ಬಜೆಟ್ ಗಾತ್ರ 32.07 ಲಕ್ಷ ಕೋಟಿ ರೂ ಆಗಿದೆ. ಖರ್ಚು 48.1 ಲಕ್ಷ ಕೋಟಿ ರೂ ಇದೆ ಎಂದು ಬಜೆಟ್​ನಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

  • FY25ಯಲ್ಲಿ ತೆರಿಗೆಯಿಂದ 25.83 ಕೋಟಿ ರೂ ಸಂಗ್ರಹ
  • ವಿತ್ತೀಯ ಕೊರತೆ ಶೇ.4.5 ತಲುಪುವ ಗುರಿ
  • ಕ್ಯಾನ್ಸರ್​ ಕಾಯಿಲೆಯ ಇನ್ನು ಮೂರು ಔಷಧಿಗಳ ಮೇಲಿನ ಕಸ್ಟಮ್ಸ್ ಸುಂಕ ಇಳಿಕೆ
  • ಚಿನ್ನ, ಬೆಳ್ಳಿ ಮೇಲಿನ ಸುಂಕ ಶೇ.6ಕ್ಕೆ ಮತ್ತು ಪ್ಲಾಟಿನಂ ಸುಂಕ ಶೇ.6.4ಕ್ಕೆ ಇಳಿಕೆ
  • 25 ವಿರಳ ಮಿನಿರಲ್ಸ್ ಮೇಲೆ ಕಸ್ಟಮ್ಸ್ ಸುಂಕ ವಿನಾಯಿತಿ
  • ಮೊಬೈಲ್​ ಫೋನ್ ಮತ್ತು ಅದರ ಭಾಗಗಳ ಮೇಲಿನ ಸುಂಕ ಇಳಿಕೆ. ಶೇ.15ಕ್ಕೆ ಕಡಿತ

12:03 PM (IST)

3 ಕೋಟಿ ಮನೆ ನಿರ್ಮಾಣ

  • ಪಿಎಂ ಆವಾಸ್ ಯೋಜನೆಯಡಿ 3 ಕೋಟಿ ಮನೆಗಳ ನಿರ್ಮಾಣ. ಗ್ರಾಮಾಂತರ ಮತ್ತು ನಗರ ಪ್ರದೇಶದಲ್ಲಿ 3 ಕೋಟಿ ಮನೆಗಳ ನಿರ್ಮಾಣದ ಗುರಿ
  • ಉಚಿತ ಸೌರ ವಿದ್ಯುತ್ ಯೋಜನೆ: ಪ್ರಧಾನ ಮಂತ್ರಿ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ ಅಡಿಯಲ್ಲಿ ಮೇಲ್ಛಾವಣಿಯ ಮೇಲೆ ಸೌರ ಫಲಕಗಳನ್ನು ಅಳವಡಿಸಲಾಗುವುದು. ಇದರಿಂದ 1 ಕೋಟಿ ಕುಟುಂಬಗಳಿಗೆ 300 ಯೂನಿಟ್​.

11:34 AM (IST)

ಆಂಧ್ರಕ್ಕೆ ವಿಶೇಷ ನೆರವು

  • ಆಂಧ್ರಪ್ರದೇಶ ರಾಜಧಾನಿ ಅಭಿವೃದ್ಧಿಗೆ ವಿಶೇಷ ಹಣಕಾಸು ನೆರವು ಘೋಷಣೆ. ಪ್ರಸಕ್ತ ಸಾಲಿನಲ್ಲಿ ಆಂಧ್ರಪ್ರದೇಶಕ್ಕೆ 15,000 ಕೋಟಿ ರೂಪಾಯಿ ಆರ್ಥಿಕ ನೆರವು
  • ಮಹಿಳೆಯರು ಮತ್ತು ಮಕ್ಕಳ ಯೋಜನೆಗಳಿಗೆ 3 ಸಾವಿರ ಕೋಟಿ ರೂ ಅನುದಾನ ಮೀಸಲು
  • ಗ್ರಾಮೀಣಾಭಿವೃದ್ಧಿಗೆ 2.66 ಲಕ್ಷ ಕೋಟಿ ಮೀಸಲು
  • ಮುದ್ರಾ ಯೋಜನೆ ಸಾಲದ ಮಿತಿ 20 ಲಕ್ಷದವರೆಗೆ ಏರಿಕೆ
  • 5 ವರ್ಷಗಳಲ್ಲಿ 500 ಪ್ರಮುಖ ನಗರಗಳಲ್ಲಿ 1 ಕೋಟಿ ಯುವಕರಿಗೆ ಇಂರ್ಟನ್​ಶಿಪ್​ ಯೋಜನೆ ಘೋಷಣೆ
  • ಉದ್ಯೋಗ ಮಾರುಕಟ್ಟೆಗೆ ಬರುವ 30 ಲಕ್ಷ ಯುವಕರಿಗೆ ಒಂದು ತಿಂಗಳ ಪಿಎಫ್ ನೀಡುವ ಮೂಲಕ ಪ್ರೋತ್ಸಾಹ

11:24 AM (IST)

ಶಿಕ್ಷಣಕ್ಕೆ 1.48 ಲಕ್ಷ ಕೋಟಿ ಮೀಸಲು

  • ಉದ್ಯೋಗ ಸೃಷ್ಟಿಗೆ ಒತ್ತು. ಉದ್ಯೋಗ ಬಯಸುವ 30 ಲಕ್ಷ ಯುವಕರಿಗೆ ಇನ್ಸೆಂಟಿವ್
  • ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಸ್ಸಾ ಮತ್ತು ಆಂಧ್ರ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪೂರ್ವೋದಯ ಯೋಜನೆ
  • ಎನ್​ಡಿಎ ಮೈತ್ರಿ ಕೂಟಗಳ ರಾಜ್ಯಗಳಿಗೆ ಭರ್ಜರಿ ಕೊಡುಗೆ
  • ಶಿಕ್ಷಣ, ಉದ್ಯೋಗ, ಕೌಶಾಲ್ಯಾಭಿವೃದ್ಧಿಗೆ ಬಜೆಟ್​ನಲ್ಲಿ 1.48 ಲಕ್ಷ ಕೋಟಿ ಮೀಸಲು
  • ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ 5 ವರ್ಷ ವಿಸ್ತರಣೆ. ಇದರಿಂದ 80 ಕೋಟಿ ಜನರಿಗೆ ಅನುಕೂಲ
  • ಬಡವರು, ಮಹಿಳೆಯರು, ಯುವಕರು ಮತ್ತು ರೈತರಿಗೆ ಬಜೆಟ್​ನಲ್ಲಿ ಮೀಸಲು

ಸರಕಾರ ನೀಡುತ್ತಿರುವ ಆದ್ಯತಾ ಕ್ಷೇತ್ರಗಳು

ಉತ್ಪಾದನೆ, ಕೃಷಿ ಪ್ರಗತಿಗೆ ಒತ್ತು. 
ಉದ್ಯೋಗ ಮತ್ತು ಕೌಶಲ್ಯಭಿವೃದ್ಧಿ
ಮಾನವ ಸಂಪನ್ಮೂಲ ಅಭಿವೃದ್ಧಿ, ಸಾಮಾಜಿಕ ನ್ಯಾಯ
ಉತ್ಪಾದನೆ ಮತ್ತು ಸೇವೆ
ನಗರಾಭಿವೃದ್ಧಿ
ಇಂಧನ ಭದ್ರತೆ
ಮೂಲ ಸೌಕರ್ಯ 
ಆವಿಷ್ಕಾರ, ಸಂಶೋಧನೆ ಮತ್ತು ಅಭಿವೃದ್ಧಿ
ಮುಂದಿನ ತಲೆಮಾರಿ ಸುಧಾರಣೆ

11:13 AM (IST)

1 ಕೋಟಿ ರೈತರು ನೈಸರ್ಗಿಕ ಕೃಷಿ ವ್ಯಾಪ್ತಿಗೆ

  • ಉದ್ಯೋಗ, ಕೌಶಲ್ಯವೃದ್ಧಿ, ಆರ್ಥಿಕತೆ ಬೆಳವಣಿಗೆಗೆ ಪೂರಕ ಬಜೆಟ್ ಇದಾಗಿರಲಿದ್ದು, ಶಿಕ್ಷಣ, ಉದ್ಯೋಗ, ಕೌಶಲ್ಯಾಭಿವೃದ್ಧಿಗಾಗಿ 1.48 ಲಕ್ಷ ಕೋಟಿ ಮೀಸಲು ಇಡುತ್ತಿದ್ದೇವೆ.
  • ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ 5 ವರ್ಷ ವಿಸ್ತರಣೆ
  • ಮುಂದಿನ ಒಂದು ವರ್ಷದಲ್ಲಿ 1 ಕೋಟಿ ರೈತರನ್ನು ನೈಸರ್ಗಿಕ ಕೃಷಿ ವ್ಯಾಪ್ತಿಗೆ. ಸಾಮಾಜಿಕ ನ್ಯಾಯ, ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ. ಸೂಕ್ಷ್ಮ, ಸಣ್ಣ & ಮಧ್ಯಮ ಕೈಗಾರಿಕೆಗಳಿಗೆ ಪೂರಕವಾಗಿದೆ ಈ ಬಜೆಟ್ ಎಂದು ನಿರ್ಮಲಾ ಹೇಳಿದರು.

11:06 AM (IST)

ಬಜೆಟ್ ಮಂಡನೆ ಆರಂಭ

  • ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಆರಂಭಿಸಿದರು. ಆರಂಭದಲ್ಲಿ ಮೋದಿ ಅವರು ಸತತ ಮೂರನೇ ಬಾರಿ ಪ್ರಧಾನಿಯಾಗಿ ಇತಿಹಾಸ ಸೃಷ್ಟಿಸಿದ್ದಾರೆ ಎಂದು ಶ್ಲಾಘಿಸಿದರು.
  • ಭಾರತದಲ್ಲಿ ಆರ್ಥಿಕತೆ ನಿರಂತರವಾಗಿ ಬೆಳವಣಿಗೆಯಾಗುತ್ತಿದೆ.
  • ರೈತರು, ಕಾರ್ಮಿಕರಿಗೆ ಶಕ್ತಿ ನೀಡಲಾಗಿದೆ

11:03 AM (IST)

ಲೋಕಸಭೆ ಕಲಾಪ ಆರಂಭ, ಬಜೆಟ್ ಪ್ರತಿ ಓದಲು ಆರಂಭಿಸಲಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

10:42 AM IST

ಸಚಿವ ಸಂಪುಟ ಸಭೆಯಲ್ಲಿ ಬಜೆಟ್​ಗೆ ಅನುಮೋದನೆ

  • ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಜೆಟ್ 2024-25 ಅನುಮೋದನೆ. 11 ಗಂಟೆಯಿಂದ ಸಂಸತ್ತಿನಲ್ಲಿ ನಿರ್ಮಲಾ ಸೀತಾರಾಮನ್ ಅವರಿಂದ ಆಯವ್ಯಯ ಮಂಡನೆ ಆರಂಭ.
  • ಬಜೆಟ್​ ಮಂಡನೆ ಹಿನ್ನೆಲೆಯಲ್ಲಿ ಸಂಸತ್ತಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ

10:27 AM (IST)

ಸಂಸತ್ತಿನಲ್ಲಿ ನಿರ್ಮಲಾ ಸೀತಾರಾಮನ್

  • ಆಯವ್ಯಯ ಮಂಡನೆ ಹಿನ್ನೆಲೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರು ಬಜೆಟ್ ಟ್ಯಾಬ್ಲೆಟ್ ಹಿಡಿದು ಸಂಸತ್ತಿಗೆ ಆಗಮಿಸಿದರು. ಈ ವೇಳೆ ಹಣಕಾಸು ಸಚಿವಾಲಯದ ಅಧಿಕಾರಿಗಳು ಉಪಸ್ಥಿತಿದ್ದರು.

10:07 AM (IST)

ಸಂಸತ್ತಿನಲ್ಲಿ ಹಣಕಾಸು ಸಚಿವೆ

  • ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಿ ರಾಷ್ಟ್ರಪತಿ ಮುರ್ಮು ಅವರಿಗೆ ಬಜೆಟ್ ಕುರಿತು ಮಾಹಿತಿ ನೀಡಿದ ನಿರ್ಮಲಾ ಸೀತಾರಾಮನ್. ಈ ವೇಳೆ ಹಣಕಾಸು ಸಚಿವರಿಗೆ ಸಿಹಿ ತಿನಿಸಿ ರಾಷ್ಟ್ರಪತಿಗಳು ಶುಭ ಹಾರೈಸಿದರು.
  • ಬಳಿಕ ಹಣಕಾಸು ಅಧಿಕಾರಿಗಳ ಜೊತೆ ಸಂಸತ್ತಿಗೆ ನಿರ್ಮಲಾ ಸೀತಾರಾಮನ್ ಆಗಮಿಸಿದರು

10:04 AM IST

ಈ ಭಾರಿ ಬಜೆಟ್ ಪ್ರಧಾನಿ ಮೋದಿಯವರ ಸಬ್ಕಾ ಸಾಥ್ ಸಬ್ಕಾ ವಿಕಾಸ್ ಮಂತ್ರವನ್ನು ಆಧರಿಸಿದೆ..ಕೇಂದ್ರ ಬಜೆಟ್ ಮಂಡನೆಗೂ ಮುನ್ನ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಹೇಳಿಕೆ. ಇದೀಗ ಹಣಕಾಸು ಸಚಿವಾಲಯ ತಲುಪಿದ ರಾಜ್ಯ ಸಚಿವರು. ಅತ್ತ ವಿತ್ತ ಸಚಿವೆ ನಿರ್ಮಲಾ ಸೀತರಾಮನ್, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಲು ರಾಷ್ಟ್ರಪತಿ ಭವನಕ್ಕೆ ತೆರಳಿದ್ದು, ಬಜೆಟ್ ಮಂಡಿಸಲು ಅನುಮೋದನೆ ಪಡೆಯಲಿದ್ದಾರೆ

9:28 AM, (IST)

ರಾಷ್ಟ್ರಪತಿ ಭವನದತ್ತ ನಿರ್ಮಲಾ ಸೀತಾರಾಮನ್

ಅಧಿಕಾರಿಗಳ ಜೊತೆಗಿನ ಸಭೆ ಬಳಿಕ ಹಣಕಾಸು ಸಚಿವಾಲಯದ ಮುಂದೆ ನಿರ್ಮಲಾ ಸೀತಾರಾಮನ್ ಅವರು ಮಾಧ್ಯಮಗಳಿಗೆ ಬಜೆಟ್ ಟ್ಯಾಬ್ಲೆಟ್ ಪ್ರದರ್ಶಿಸಿದರು. ಬಳಿಕ ಅಲ್ಲಿಂದ ರಾಷ್ಟ್ರಪತಿ ಮುರ್ಮು ಅವರ ಭೇಟಿಗೆ ರಾಷ್ಟ್ರಪತಿ ಭವನಕ್ಕೆ ತೆರಳಿದರು.

Leave a Reply

Your email address will not be published. Required fields are marked *