ಚಿಕ್ಕಮಗಳೂರು : ಗಂಡನನ್ನು ಬಿಟ್ಟು ಮಕ್ಕಳ ಜೊತೆ ತಾಯಿಮನೆ ಸೇರಿದ್ದ ಮಹಿಳೇಯೋರ್ವರು ಭೀಕರ ಕೊಲೆಯಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಅರೇನೂರು ಗ್ರಾಮದಲ್ಲಿ ನಡೆದಿದೆ. ಮನೆಯ ಹಿಂದೆ ಬಟ್ಟೆ ತೊಳೆಯುತ್ತಿದ್ದ ಮಹಿಳೆಯ ಕುತ್ತಿಗೆಯನ್ನು ಚಾಕುವಿನಿಂದ ಸೀಳಿ ಬರ್ಬರ ಹತ್ಯೆ ಮಾಡಲಾಗಿದೆ. ಸಂಧ್ಯಾ (32) ಮೃತ ಮಹಿಳೆಯಾಗಿದ್ದಾರೆ.
ಮೃತ ಸಂಧ್ಯಾ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಅರೇನೂರು ಗ್ರಾಮದವರು. ಕಳೆದ 10 ವರ್ಷಗಳ ಹಿಂದೆ ಅರೇನೂರು ಗ್ರಾಮದಿಂದ 20 ಕಿಮೀ ದೂರದ ಶಿರಗೋಳ ಗ್ರಾಮದ ರವಿ ಅವರೊಂದಿಗೆ ಸಂಧ್ಯಾ ಮದುವೆಯಾಗಿತ್ತು. ಇಬ್ಬರ ದಾಂಪತ್ಯಕ್ಕೆ ಸಾಕ್ಷಿ ಎಂಬಂತೆ ಮೂವರು ಮಕ್ಕಳಿದ್ದರು. ಆದರೆ ಇವರಿಬ್ಬರ ನಡುವೆ ಅದೇನಾಯ್ತೋ ಗೊತ್ತಿಲ್ಲ. ಗಂಡನ ಬಿಟ್ಟು ಬಂದಿದ್ದ ಸಂಧ್ಯಾ, ಕಳೆದ 3 ವರ್ಷಗಳಿಂದ ಅರೇನೂರು ಗ್ರಾಮದ ತಾಯಿ ಮನೆ ಸೇರಿದ್ದರು. ಕಾಫಿತೋಟದಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಈ ನಡುವೆ ಕಳೆದ ಕೆಲ ದಿನಗಳ ಹಿಂದೆ ಸಂಧ್ಯಾ ನಾಪತ್ತೆಯಾಗಿದ್ದು, ಮನೆಯವರು ಎಷ್ಟು ಹುಡುಕಿದ್ರೂ ಅವರ ಸುಳಿವಿರಲಿಲ್ಲ. ಆತಂಕಗೊಂಡ ಅವರ ತಂದೆ ಈ ಬಗ್ಗೆ ಆಲ್ದೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ಕೂಡ ನೀಡಿದ್ದರು. ಆದರೆ ಸೋಮವಾರ ಸಂಜೆ ಅರೇನೂರು ಗ್ರಾಮದ ತಾಯಿ ಮನೆಗೆ ಸಂಧ್ಯಾ ವಾಪಸ್ ಬಂದಿದ್ದಾರೆ. ತಾನು ಸಂಬಂಧಿಕರ ಮನೆಗೆ ಹೋಗಿದ್ದೆ ಎಂದು ಮನೆಯವರಿಗೆ ತಿಳಿಸಿದ್ದಾರೆ. ಆದ್ರೆ ನಿನ್ನೆ ಬೆಳಗ್ಗೆ ಮನೆಯ ಹಿಂಭಾಗ ಅವರು ಬಟ್ಟೆ ತೊಳೆಯುತ್ತಿದ್ದ ಸಂಧ್ಯಾರ ಕುತ್ತಿಗೆಯನ್ನು ಚಾಕುವಿನಿಂದ ಸೀಳಲಾಗಿದೆ. ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿ ಮಧ್ಯದಲ್ಲಿ ಅವರು ಮೃತಪಟ್ಟಿದ್ದಾರೆ.
For More Updates Join our WhatsApp Group :
