ಎಲ್ಪಿಜಿ ಪೂರೈಕೆ ಸಿಗುವಂತಾಗಲು ಸರ್ಕಾರ ಹೊಸ ತಂತ್ರ ಯೋಜಿಸಿದೆ.
ನವದೆಹಲಿ : ಹೆಚ್ಚೆಚ್ಚು ಜನರಿಗೆ ಎಲ್ಪಿಜಿ ಪೂರೈಕೆ ಸಿಗುವಂತಾಗಲು ಸರ್ಕಾರ ಹೊಸ ತಂತ್ರ ಯೋಜಿಸಿದೆ. ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಗೃಹಬಳಕೆಗೆ ಕಡಿಮೆ ಎಲ್ಪಿಪಿ ಇರುವ ಸಿಲಿಂಡರ್ಗಳನ್ನು ವಿತರಿಸಲು ಆಲೋಚಿಸಿವೆ. ಎಕನಾಮಿಕ್ ಟೈಮ್ಸ್ನಲ್ಲಿ ಬಂದಿರುವ ವರದಿ ಪ್ರಕಾರ, ಈಗಿರುವ 14.2 ಕಿಲೋ ಎಲ್ಪಿಜಿ ಬದಲು 10 ಕಿಲೋ ಎಲ್ಪಿಜಿ ಸಿಲಿಂಡರ್ಗಳ ವಿತರಣೆ ಮಾಡಲಾಗಬಹುದು.
ಕಡಿಮೆ ಪ್ರಮಾಣದ ಎಲ್ಪಿಜಿ ಪೂರೈಕೆಯಿಂದ ಏನು ಲಾಭ?
ಎಲ್ಪಿಜಿ ಲಭ್ಯತೆ ಸೀಮಿತ ಪ್ರಮಾಣದಲ್ಲಿ ಮಾತ್ರವೇ ಇರುವುದು. ಹೀಗಾಗಿ, ಗೃಹಬಳಕೆಗೆ ಎಲ್ಪಿಜಿ ಕಡಿಮೆ ಪ್ರಮಾಣದ ಇರುವ ಸಿಲಿಂಡರ್ ಅನ್ನು ನೀಡಿದರೆ ಹೆಚ್ಚೆಚ್ಚು ಮನೆಗಳಿಗೆ ಪೂರೈಕೆ ಮಾಡಲು ಸಾಧ್ಯವಾಗುತ್ತದೆ ಎಂಬುದು ಒಂದು ಆಲೋಚನೆ. ಪಶ್ಚಿಮ ಏಷ್ಯಾದ ಯುದ್ಧದ ಸ್ಥಿತಿ ದೀರ್ಘಕಾಲ ಮುಂದುವರಿಯದೇ ಇದ್ದರೆ ಈ ತಂತ್ರ ಕೆಲಸ ಮಾಡುತ್ತದೆ.
ಭಾರತದ ಶೇ. 60ರಷ್ಟು ಎಲ್ಪಿಜಿ ಅಗತ್ಯವನ್ನು ಆಮದು ಮೂಲಕ ಪೂರೈಸಲಾಗುತ್ತಿದೆ. ಅದರ ಶೇ. 80ಕ್ಕಿಂತಲೂ ಹೆಚ್ಚು ಆಮದು ಹಾರ್ಮುಜ್ ಜಲಸಂಧಿ ಮಾರ್ಗದಿಂದ ಬರುತ್ತದೆ. ಹೀಗಾಗಿ, ಭಾರತಕ್ಕೆ ಎಲ್ಪಿಜಿ ಬಿಕ್ಕಟ್ಟು ಬಹಳವೇ ಕಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರೂ ಕೂಡ ಇಂದು ಲೋಕಸಭೆಯಲ್ಲಿ ಈ ವಿಚಾರದ ಬಗ್ಗೆ ಮಾತನಾಡಿ, ಮಧ್ಯಪ್ರಾಚ್ಯ ಯುದ್ಧ ಸ್ಥಿತಿ ಬಗ್ಗೆ ಆತಂಕ ವ್ಯಕ್ತಪಡಿಸಿದರು.
ಭಾರತದಲ್ಲಿ ಗೃಹಬಳಕೆಗೆ 14.2 ಕಿಲೋ ಎಲ್ಪಿಜಿ ಸಿಲಿಂಡರ್ ವಿತರಣೆ ಮಾಡಲಾಗುತ್ತದೆ. ಒಂದು ಸಣ್ಣ ಕುಟುಂಬಕ್ಕೆ ಈ ಸಿಲಿಂಡರ್ನಲ್ಲಿರುವ ಗ್ಯಾಸ್ ಒಂದರಿಂದ ಮೂರು ತಿಂಗಳವರೆಗೆ ಬಾಳಿಕೆ ಬರುತ್ತದೆ. 10 ಕಿಲೋ ಎಲ್ಪಿಜಿ ರೀಫಿಲ್ ಆಗಿರುವ ಸಿಲಿಂಡರ್ ಸಾಮಾನ್ಯವಾಗಿ ಒಂದರಿಂದ ಎರಡು ತಿಂಗಳು ಬರಬಹುದು.
10 ಕಿಲೋ ಎಲ್ಪಿಜಿ ಎಂದರೆ ಸಿಲಿಂಡರ್ ಬದಲಾಗಲ್ಲ. 14.2 ಕಿಲೋ ಎಲ್ಪಿಜಿ ಸಿಲಿಂಡರ್ನಲ್ಲೇ 10 ಕಿಲೋ ಎಲ್ಪಿಜಿ ರೀಫಿಲ್ ಮಾಡಲಾಗುತ್ತದೆ. ಸಿಲಿಂಡರ್ ಮೇಲೆ ಹೊಸ ಲೇಬಲ್ ಹಾಕಲಾಗಬಹುದು.
For More Updates Join our WhatsApp Group :



