ಬೆಂಗಳೂರು: ಬೈಕ್ ಟಚ್ ಆಗಿದೆ ಎಂಬ ಕಾರಣಕ್ಕೆ ಕಚೇರಿಗೆ ತೆರಳುತ್ತಿದ್ದ ಸ್ವಾಫ್ಟ್ವೇರ್ ಉದ್ಯೋಗಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಪುಟ್ಟೇನಹಳ್ಳಿಯಲ್ಲಿ ನಡೆದಿದೆ. ಸ್ವಾಫ್ಟ್ವೇರ್ ಉದ್ಯೋಗಿ ಪ್ರತೀಕ್ ಎಂಬಾತ ನಿನ್ನೆ ಕಚೇರಿಗೆ ತೆರಳುತ್ತಿದ್ದ ವೇಳೆ ಇವರ ಬೈಕ್ ಮತ್ತೊಂದು ಬೈಕ್ಗೆ ಟಚ್ ಆಗಿದೆ.
ಇದೇ ಕಾರಣಕ್ಕೆ ಪ್ರತೀಕ್ ಬೈಕ್ ಕೀ ಕಿತ್ತುಕೊಳ್ಳಲಾಗಿದ್ದು, ತಲೆಗೆ ಹೊಡೆದು ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈ ಬಗ್ಗೆ ದೂರು ನೀಡಲು ಬಂದಾಗ ಕಂಪ್ಲೇಂಟ್ ಪಡೆಯಲು ಪುಟ್ಟೇನಹಳ್ಳಿ ಪೊಲೀಸರು 2 ಗಂಟೆಗಳ ಕಾಲ ಕಾಯಿಸಿರುವ ಆರೋಪವೂ ಕೇಳಿಬಂದಿದೆ. ಘಟನೆ ಸಂಬಂಧ ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
For More Updates Join our WhatsApp Group :




