ಮಂಡ್ಯ: ಗಣೇಶ ವಿಸರ್ಜನಾ ಮೆರವಣಿಗೆಯ ವೇಳೆ ನಡೆದ ಕಲ್ಲು ತೂರಾಟದಿಂದ ಮದ್ದೂರು ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಈ ಘಟನೆ ಖಂಡಿಸಿ ಹಿಂದೂ ಪರ ಸಂಘಟನೆಗಳು ಮದ್ದೂರು ಬಂದ್ಗೆ ಕರೆ ನೀಡಿದ್ದು, ಬಿಜೆಪಿ ಹಾಗೂ ಜೆಡಿಎಸ್ ಸಹ ಬೆಂಬಲ ಘೋಷಿಸಿವೆ.
ಈ ಮಧ್ಯೆ ಮದ್ದೂರಿನಲ್ಲಿ ತಂಗಿದ್ದ ಮಾಜಿ ಸಂಸದ ಪ್ರತಾಪ್ ಸಿಂಹ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು, ಕಲ್ಲು ತೂರಿದವರು ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದರು. ಸಭೆಯ ವೇಳೆ ಕಾರ್ಯಕರ್ತರು ನಿರಂತರವಾಗಿ ಯತ್ನಾಳ್… ಯತ್ನಾಳ್…” ಎಂದು ಘೋಷಣೆ ಕೂಗಿದ ಪರಿಣಾಮ, ಸ್ಥಳದಲ್ಲಿ ರಾಜಕೀಯ ಚಟುವಟಿಕೆ ಇನ್ನಷ್ಟು ಜೋರಾಯಿತು.
ಕಾರ್ಯಕರ್ತರ ಒತ್ತಾಯದ ನಡುವೆಯೂ ಪ್ರತಾಪ್ ಸಿಂಹ, “ಯತ್ನಾಳ್ ಅವರನ್ನು ಕೂಡಲೇ ಇಲ್ಲಿಗೆ ಕರೆಸೋಣ” ಎಂದು ಸಮಾಧಾನಪಡಿಸಿದರು. ಇದರಿಂದ ಯತ್ನಾಳ್ ಹೆಸರು ಮದ್ದೂರು ಕಲ್ಲುತೂರಾಟದ ಪ್ರತಿಭಟನೆಗೆ ಹೊಸ ರಾಜಕೀಯ ಬಣ್ಣ ನೀಡಿದೆ.
For More Updates Join our WhatsApp Group :