ಮಧುಗಿರಿ ಪೊಲೀಸರ ಶ್ಲಾಘನೀಯ ಕಾರ್ಯ: ಕಳೆದುಹೋದ ಚಿನ್ನ ವಾಪಸ್
ಮಧುಗಿರಿ: ಮಧುಗಿರಿ ಪೊಲೀಸ್ ಠಾಣೆಯ ಆರಕ್ಷಕರ ಸಮಯ ಪ್ರಜ್ಞೆಯಿಂದ ಕಳೆದು ಹೋಗಿದ್ದ 30 ಗ್ರಾಂ ಚಿನ್ನದ ಬ್ಯಾಗನ್ನು 12 ಗಂಟೆಗಳ ಯಶಸ್ವಿ ಕಾರ್ಯಾಚರಣೆಯಲ್ಲಿ ಸಂತ್ರಸ್ತರಿಗೆ ಹಿಂದಿರುಗಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರಿನಿಂದ ಮಡಕಶಿರ ಮಾರ್ಗವಾಗಿ ಕೆ ಎಸ್ ಆರ್ ಟಿ ಸಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ದಂಪತಿಗಳ ಬ್ಯಾಗ್ ನಲ್ಲಿ 30 ಗ್ರಾಂ ಬೆಲೆಬಾಳುವ ಚಿನ್ನಾಭರಣಗಳು ಇದ್ದವು. ಅದೇ ಬಸ್ನಲ್ಲಿ ಮಧುಗಿರಿಗೆ ಖಾಸಗಿ ಕಾರ್ಯಕ್ರಮದ ಪ್ರಯುಕ್ತ ಪ್ರಯಾಣಿಸುತ್ತಿದ್ದ ಕುಟುಂಬದವರ ಬ್ಯಾಂಕ್ ಜೊತೆ ಸಂತ್ರಸ್ತರ ಬ್ಯಾಕ್ ಕೂಡ ಸೇರ್ಪಡೆಯಾಗಿ ಕಾಣೆಯಾಗಿತ್ತು. ತಡರಾತ್ರಿ 12 ಗಂಟೆಗೆ ಮಧುಗಿರಿ ಪೊಲೀಸ್ ಠಾಣೆಗೆ ಬಂದು ಸಂತ್ರಸ್ತರು ಗಸ್ತಿನಲ್ಲಿದ್ದ ಠಾಣೆಯ ಎಸ್ ಐ ಚಂದ್ರಶೇಖರ್ ಅವರಿಗೆ ದೂರನ್ನು ಸಲ್ಲಿಸುತ್ತಾರೆ.
ತದನಂತರ ಹೆಡ್ ಕಾನ್ಸ್ಟೇಬಲ್ ಮಲ್ಲಿಕಾರ್ಜುನ ಅವರಿಗೆ ಕಾರ್ಯಾಚರಣೆ ಮಾಡುವಂತೆ ಮಾಹಿತಿ ನೀಡುತ್ತಾರೆ. ರಾತ್ರಿ ಇಡೀ ಕಾರ್ಯಾಚರಣೆ ನಡೆಸಿದ ಮಲ್ಲಿಕಾರ್ಜುನ್ ಅವರು ಸಂಶಯಸ್ಪದವಾಗ ಕಾಯಾಚರಣೆ ಬೆನ್ನತ್ತಿ ನಾಮಕರಣದ ಕಾರ್ಯಕ್ರಮ ಒಂದಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಸಂತ್ರಸ್ಥರ ಬ್ಯಾಗ್ ಪತ್ತೆಯಾಗಿರುತ್ತದೆ.
ಯಶಸ್ವಿ ಕಾರ್ಯಾಚರಣೆ ರೂವಾರಿ ಹೆಡ್ ಕಾನ್ಸ್ಟೇಬಲ್ ಮಲ್ಲಿಕಾರ್ಜುನ್ ಅವರನ್ನು ಎಸ್ ಐ ಚಂದ್ರಶೇಖರ್, ಹಾಗೂ ವೃತ್ತ ನಿರೀಕ್ಷಕರಾದ ಹನುಮಂತರಾಯಪ್ಪನವರು ಕಾರ್ಯಕ್ಷಮತೆಯನ್ನು ಮೆಚ್ಚಿದ್ದಾರೆ. ಕೇವಲ 12 ಗಂಟೆಗಳ ಯಶಸ್ವಿ ಕಾರ್ಯಾಚರಣೆಯ ನಂತರ ಸಂತ್ರಸ್ತರಿಗೆ 30 ಗ್ರಾಂ ಒಡವೆ ಇದ್ದ ಬ್ಯಾಗನ್ನು ಹಿಂದಿರುಗಿಸುವಲ್ಲಿ ಯಶಸ್ವಿಯಾಗುತ್ತಾರೆ. ಸಾರ್ವಜನಿಕರು ಮಧುಗಿರಿ ಪೊಲೀಸ್ ಠಾಣಾ ಸಿಬ್ಬಂದಿಗಳ ಕಾರ್ಯಕ್ರಮತೆಯನ್ನು ಮೆಚ್ಚಿ ಹಾಡಿ ಹೊಗಳಿದ್ರು. ಸಂತ್ರಸ್ತರು ಪೊಲೀಸ್ ಠಾಣೆಯ ಸಿಬ್ಬಂದಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ರು.
For More Updates Join our WhatsApp Group :




