ಮಧ್ಯಪ್ರದೇಶ || ಹನಿಮೂನ್ಗೆ ಹೋದ ಉದ್ಯಮಿ ನವದಂಪತಿ ಇದ್ದಕ್ಕಿದ್ದಂತೆ ನಾಪತ್ತೆ

ಮಧ್ಯಪ್ರದೇಶ || ಹನಿಮೂನ್ಗೆ ಹೋದ ಉದ್ಯಮಿ ನವದಂಪತಿ ಇದ್ದಕ್ಕಿದ್ದಂತೆ ನಾಪತ್ತೆ

ಮಧ್ಯಪ್ರದೇಶ: ಇಂದೋರ್ನ ಸಾರಿಗೆ ಉದ್ಯಮಿ ರಾಜಾ ರಘುವಂಶಿ ಮತ್ತು ಅವರ ಪತ್ನಿ ಸೋನಮ್ ರಘುವಂಶಿ ಹನಿಮೂನ್ಗೆ ಶಿಲ್ಲಾಂಗ್ಗೆ ತೆರುಳಿದ್ದರು. ಇಬ್ಬರೂ ಅಲ್ಲಿಂದ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ. ಎರಡು ದಿನಗಳಿಂದ ಕುಟುಂಬವನ್ನು ಸಂಪರ್ಕಿಸಲು ಸಾಧ್ಯವಾಗದಿದ್ದಾಗ, ಕುಟುಂಬವು ಶಿಲ್ಲಾಂಗ್ಗೆ ತಲುಪಿದೆ. ಅಲ್ಲಿಗೆ ತೆರಳಿ ಇಬ್ಬರನ್ನೂ ಹುಡುಕಿದೆ ಆದರೆ ಎಲ್ಲಿದ್ದಾರೆ ಎಂಬ ಸುಳಿವೇ ಸಿಗ್ತಿಲ್ಲ.

ಇದರಿಂದಾಗಿ ಕಂಗಾಲಾಗಿರುವ ಕುಟುಂಬ ನಿರಾಶೆ ಹಾಗೂ ಆತಂಕದೊಂದಿಗೇ ಇಂದೋರ್ಗೆ ಮರಳಿದೆ. ಇಂದೋರ್ ಅಪರಾಧ ವಿಭಾಗಕ್ಕೆ ದೂರು ನೀಡಿ, ನಾಪತ್ತೆ ಆಗಿರುವ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದೆ. ನವದಂಪತಿಯನ್ನು ದಯವಿಟ್ಟು ಹುಡುಕಿಕೊಡಿ ಎಂದು ವಿನಂತಿ ಮಾಡಿಕೊಂಡಿದೆ.

ಈ ನಡುವೆ ಮಧ್ಯಪ್ರದೇಶ ಸರ್ಕಾರವು ನವವಿವಾಹಿತ ದಂಪತಿಗಳನ್ನು ಹುಡುಕಲು ಮೇಘಾಲಯ ಸರ್ಕಾರವನ್ನು ಸಂಪರ್ಕಿಸಿದೆ. ಎರಡೂ ಸರ್ಕಾರಗಳು ತಮ್ಮ ಹುಡುಕಾಟದಲ್ಲಿ ಒಟ್ಟಾಗಿ ಶೋಧ ಅಭಿಯಾನ ಕೈಗೊಂಡಿವೆ. ಈ ನಡುವೆ ಮಕ್ಕಳು ಕಾಣದಾಗಿರುವುದರಿಂದ ರಘುವಂಶಿ ಕುಟುಂಬ ಹಾಗೂ ಅವರ ಪೋಷಕರು ಕಂಗಾಲಾಗಿ ಕುಳಿತಿದ್ದು, ಆತಂಕದಲ್ಲಿದ್ದಾರೆ.

ಮೇ 25 ರ ನಂತರ ಕಡಿತಗೊಂಡ ಸಂಪರ್ಕ : ಇಂದೋರ್ ಮೂಲದ ಸಾರಿಗೆ ಉದ್ಯಮಿ ರಾಜಾ ರಘುವಂಶಿ ಮೇ 11 ರಂದು ಇಂದೋರ್ ಮೂಲದ ಸೋನಮ್ ರಘುವಂಶಿ ಅವರನ್ನು ವಿವಾಹವಾಗಿದ್ದಾರೆ. ಮದುವೆಯ ನಂತರ, ದಂಪತಿಗಳು ತಮ್ಮ ಹನಿಮೂನ್ಗಾಗಿ ಮೇ 20 ರಂದು ಇಂದೋರ್ನಿಂದ ಶಿಲ್ಲಾಂಗ್ಗೆ ತೆರಳಿದ್ದರು . ಶಿಲ್ಲಾಂಗ್ ತಲುಪಿದ ನಂತರ, ದಂಪತಿಗಳು ಮೇ 25 ರವರೆಗೆ ತಮ್ಮ ಕುಟುಂಬ ಸದಸ್ಯರೊಂದಿಗೆ ಮಾತನಾಡುತ್ತಲೇ ಇದ್ದರು. ಇದಾದ ನಂತರ, ಇಬ್ಬರೂ ತಮ್ಮ ಕುಟುಂಬಗಳೊಂದಿಗೆ ಸಂಪರ್ಕ ಕಳೆದುಕೊಂಡಿದ್ದಾರೆ. ಇದರಿಂದಾಗಿ ಕುಟುಂಬದವರು ಆತಂಕ ಹಾಗೂ ಏನಾಗಿದೆಯೋ ಎಂಬ ಭೀತಿಯಲ್ಲಿದ್ದಾರೆ. ಇಬ್ಬರ ಫೋನ್ ಗಳು ಸ್ವಿಚ್ಡ್ ಆಫ್ ಆಗಿರುವುದು ಭಯವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ.

ಇಬ್ಬರ ಫೋನ್ ಗಳು ಸ್ವಿಚ್ಡ್ ಆಫ್ ಆಗಿರುವುದರಿಂದ ಕುಟುಂಬ ವರ್ಗದವರು ನವ ವಿವಾಹಿತರನ್ನು ಹುಡುಕಿಕೊಂಡು ಶಿಲ್ಲಾಂಗ್ ಗೆ ತೆರಳಿದ್ದರು. ಸೋನಮ್ ಅವರ ಸಹೋದರ ಗೋವಿಂದ್ ಗೂಗಲ್ ನಕ್ಷೆಗಳ ಮೂಲಕ ಹತ್ತಿರದ ಸ್ಥಳಗಳಲ್ಲಿ ಅವರ ಫೋಟೋಗಳನ್ನು ಪತ್ತೆ ಹಚ್ಚಿದ್ದಾರೆ. ಇಬ್ಬರೂ ಬಾಡಿಗೆ ಆಕ್ಟಿವಾ ವನ್ನು ತೆಗೆದುಕೊಂಡು ಓಸ್ರಾ ಬೆಟ್ಟಕ್ಕೆ ಹೋಗಿರುವುದಾಗಿ ತಿಳಿದು ಬಂದಿದೆ.

Leave a Reply

Your email address will not be published. Required fields are marked *