ಮಹಾರಾಷ್ಟ್ರ : ಕೆಲವೊಮ್ಮೆ ಹುಚ್ಚು ಸ್ಟಂಟ್, ರೀಲ್ಸ್ ಎಲ್ಲವೂ ಓಕೆ ನಿಮ್ಮ ಎಚ್ಚರಿಕೆಯಲ್ಲಿ ನೀವಿದ್ದಾಗ ಮಾತ್ರ ಯಾವುದೋ ಹುಚ್ಚುತನ ಜೀವಕ್ಕೆ ಕುತ್ತು ತರುವಂತಾಗಬಾರದು. ಸಹಾಸ ಮಾಡಲು ಹೋಗಿ ಏನೆಲ್ಲಾ ಕಷ್ಟಗಳನ್ನು ಆ ನಾವು ತೆಗೆದುಕೊಳ್ಳುತ್ತೇವೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ವ್ಯಕ್ತಿ ಒಬ್ಬ ಕಾರು ಸ್ಟಂಟ್ ಮಾಡಲು ಹೋಗಿ 300 ಅಡಿ ಆಳದ ಕಂದಕಕ್ಕೆ ಬಿದ್ದಿರುವ ಘಟನೆ ಮಹಾರಾಷ್ಟ್ರ ದಲ್ಲಿ ನಡೆದಿದೆ.

ಮಹಾರಾಷ್ಟ್ರದ ಕರಾಡ್ನ ಪಟ್ಟಣ್ ಸದವ ಗಾಪುರ ರಸ್ತೆಯಲ್ಲಿರುವ ಪ್ರಸಿದ್ಧ ಟೇಬಲ್ ಪಾಯಿಂಟ್ ನಲ್ಲಿ ಸಾಹಿಲ್ ಅನಿಲ್ ಜಾದವ್ ಎಂಬುವರು ಸೆಂಡ್ ಮಾಡಲು ಹೋಗಿ ಕಾರಿನ ಸಮೇತ ಕಂದಕಕ್ಕೆ ಬಿದ್ದಿದ್ದಾರೆ. ಸಾಹಿಲ್ ಗಂಭೀರ ಗಾಯಗೊಂಡಿದ್ದು, ಈಗ ಸಹ್ಯಾದ್ರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳೀಯರು ಸುರಕ್ಷತಾ ಬೇಲಿಗಳು ಮತ್ತು ಎಚ್ಚರಿಕೆ ಫಲಕಗಳನ್ನು ತಕ್ಷಣವೇ ಅಳವಡಿಸಬೇಕೆಂದು ಒತ್ತಾಯಿಸಿದ್ದಾರೆ.