ಮಲೇಷ್ಯಾ: ಸೀರೆ ಭಾರತೀಯ ಹೆಣ್ಮಕ್ಕಳಿಗೆ ಮಾತ್ರ ಎನ್ನುವ ಕಾಲವಿತ್ತು, ಆದರೆ ಅದು ಈಗ ಬದಲಾಗಿದೆ, ಭಾರತೀಯ ಸಂಸ್ಕೃತಿಯನ್ನು ಜಗತ್ತಿನ ಬೇರೆ ಬೇರೆ ದೇಶಗಳು ಅನುಸರಿಸುತ್ತಿದೆ. ಭಾರತದ ಆಚರಣೆ, ಪದ್ಧತಿ, ಆಹಾರ ಕ್ರಮಗಳನ್ನು ವಿದೇಶಿಗರು ಇಷ್ಟ ಪಡುತ್ತಿದ್ದಾರೆ. ಇದೀಗ ಇದಕ್ಕೆ ಸಾಕ್ಷಿ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿ ಅಲ್ಲಿದ್ದ ಭಾರತೀಯರೇ ಅಚ್ಚರಿ ಪಟ್ಟಿದ್ದಾರೆ. ಮಲೇಷ್ಯಾದ ಬಾಟು ಗುಹೆಯಲ್ಲಿ ಸೀರೆ ಧರಿಸಿದ್ದ ಇಬ್ಬರು ಚೀನೀ ಮಹಿಳೆಯರು ಭಾರತೀಯ ವ್ಯಕ್ತಿಗೆ ಕಂಡಿದ್ದಾರೆ.

ಈ ಚೀನೀ ಮಹಿಳೆಯರು ಸೀರೆಯಲ್ಲಿ ಗೊಂಬೆಗಳಂತೆ ಕಂಡಿದ್ದಾರೆ, ಫೋಟೋ ಕ್ಲಿಕಿಸಿ ಸಂಭ್ರಮಿಸಿದ್ದಾರೆ. ಈ ವ್ಲಾಗರ್ ಆ ಮಹಿಳೆಯರನ್ನು ನೋಡಿ ಸೀರೆಯಲ್ಲಿ ತುಂಬಾ ಚೆನ್ನಾಗಿ ಕಾಣುತ್ತಿದ್ದಾರೆ ಎಂದು ಹೊಗಳಿದ್ದಾನೆ. ಇದಕ್ಕೆ ಚೀನೀ ಮಹಿಳೆಯರು ನಗುತ್ತಾ ಉತ್ತರಿಸುತ್ತಾರೆ.
ಇಬ್ಬರು ಮಹಿಳೆಯರು ಫೋಟೋಗೆ ಪೋಸ್ ಕೊಡುವುದು ಕಾಣಬಹುದು. ಒಬ್ಬರು ಹಸಿರು ಸೀರೆ ಧರಿಸಿದ್ದರೆ, ಇನ್ನೊಬ್ಬರು ಕೆಂಪು-ಗುಲಾಬಿ ಬಣ್ಣದ ಸೀರೆಯನ್ನು ಧರಿಸಿದ್ದಾರೆ. ಭಾರತೀಯರಂತೆ ಆಭರಣ, ಬಳೆ, ಹೂವನ್ನು ಧರಿಸಿ ಭಾರತೀಯ ನಾರಿಯಂತೆ ಕಂಗೊಳಿಸಿದ್ದಾರೆ. ಅಲ್ಲಿ ಓಡಾಡುತ್ತಿದ್ದ ಜನರು ಅವರನ್ನೇ ಅಚ್ಚರಿಯಿಂದ ನೋಡಿದ್ದಾರೆ. ಇನ್ನೊಂದು ವಿಶೇಷವೆಂದರೆ ಹಿಂದಿನ ಕಾಲದಲ್ಲಿ ಭಾರತೀಯ ನಾರಿಯರು ಬಳಸುತ್ತಿದ್ದ ಬ್ಯಾಗ್ಗಳನ್ನು ಹಿಡಿದುಕೊಂಡು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.