ಭೋಪಾಲ್: ಮಧ್ಯಪ್ರದೇಶದ ಬುರ್ಹಾನ್ಪುರದಲ್ಲಿ ವಿಚಿತ್ರ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಕಚೇರಿ ಎದುರು ಕಾರು ನಿಲ್ಲಿಸಿ ಗಾಢ ನಿದ್ರೆಗೆ ಜಾರಿದ ಪರಿಣಾಮ, ಪ್ರಮುಖ ಹೆದ್ದಾರಿಯಲ್ಲಿ ಗಂಟೆಗಟ್ಟಲೆ ಸಂಚಾರ ದಟ್ಟಣೆ ಉಂಟಾಯಿತು.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಈ ಘಟನೆ ಇಂದೋರ್–ಇಚ್ಛಾಪುರ ಹೆದ್ದಾರಿ, ಶಿಕಾರ್ಪುರ ಪೊಲೀಸ್ ಠಾಣೆಯ ಬಳಿಯ ಎಲ್ಐಸಿ ಕಚೇರಿ ಬಳಿ ನಡೆದಿದೆ. ಮಧ್ಯಾಹ್ನ 3 ಗಂಟೆ ಸುಮಾರಿಗೆ ಕಾರನ್ನು ರಸ್ತೆಯ ಮಧ್ಯೆ ನಿಲ್ಲಿಸಿ ಚಾಲಕ ಒಳಗೆ ಮಲಗಿದ್ದಾನೆ. ಇದರಿಂದ ವಾಹನಗಳು ಸಾಗಲು ತೊಂದರೆಯಾಗಿ ದೀರ್ಘ ಟ್ರಾಫಿಕ್ ಜಾಮ್ ಉಂಟಾಯಿತು.
ಪ್ರಯಾಣಿಕರು ಹಾಗೂ ಸ್ಥಳೀಯರು ಹಲವು ಬಾರಿ ಕಾರಿನ ಕಿಟಕಿಗೆ ಬಡಿದು ಎಬ್ಬಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಮಾಹಿತಿ ಸಿಕ್ಕ ತಕ್ಷಣ ಶಿಕಾರ್ಪುರ ಪೊಲೀಸರು ಸ್ಥಳಕ್ಕೆ ಬಂದು ಚಾಲಕನನ್ನು ಎಬ್ಬಿಸಲು ಪ್ರಯತ್ನಿಸಿದರು. ಆದರೆ ಯಾವುದೇ ಪ್ರಯತ್ನ ಫಲಕಾರಿಯಾಗದೇ, ಕೊನೆಗೆ ಕಾರಿನ ಹಿಂಭಾಗದ ಗಾಜನ್ನು ಒಡೆದು ವ್ಯಕ್ತಿಯನ್ನು ಎಬ್ಬಿಸಲಾಯಿತು.
ನಂತರ ಪೊಲೀಸರವರು ಚಾಲಕನನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದರು. ಈ ಘಟನೆಯಿಂದಾಗಿ ಸುಮಾರು ಒಂದು ಗಂಟೆ ಕಾಲ ಸಂಚಾರ ದಟ್ಟಣೆ ಉಂಟಾಗಿ ನೂರಾರು ಪ್ರಯಾಣಿಕರು ತೊಂದರೆ ಅನುಭವಿಸಿದರು. ಸ್ಥಳೀಯರು ಚಾಲಕನ ನಿರ್ಲಕ್ಷ್ಯವನ್ನು ಟೀಕಿಸಿ, ಇಂತಹ ಘಟನೆಗಳು ಅಪಘಾತಗಳಿಗೆ ಕಾರಣವಾಗಬಹುದು ಎಂದು ಎಚ್ಚರಿಸಿದ್ದಾರೆ.
For More Updates Join our WhatsApp Group :