ಮಂಡ್ಯ ಉದ್ವಿಗ್ನ : ಶೂ ಬಿಚ್ಚದೆ  ಕಚೇರಿ ಒಳಗೆ ಬಂದ ಪೋಲೀಸರು

ಮಂಡ್ಯ ಉದ್ವಿಗ್ನ : ಶೂ ಬಿಚ್ಚದೆ  ಕಚೇರಿ ಒಳಗೆ ಬಂದ ಪೋಲೀಸರು

ಮಂಡ್ಯ : ವಿಶ್ವ ಹಿಂದೂ ಪರಿಷತ್ ವಿಎಚ್‌ಪಿ ಮುಖಂಡ ಪುನೀತ್ ಅತ್ತಾವರನನ್ನು ಬಂಧಿಸಲು ಪೊಲೀಸರು ಮಂಡ್ಯ ಆರ್ ಎಸ್ ಎಸ್ ಕಚೇರಿಯಲ್ಲಿ ನಡೆಸಿದ ಪ್ರಯತ್ನದ ವಿರುದ್ಧ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರಿಂದ ರಾತ್ರಿ ಉದ್ವಿಗ್ನತೆ ಉಂಟಾಗಿತ್ತು.

ವಿಎಚ್‌ಪಿ ಮುಖಂಡ ಪುನೀತ್ ಅತ್ತಾವರ್ ಮತ್ತು ಶರಣ್ ಪಂಪ್‌ವೆಲ್ ಜಿಲ್ಲೆಯ ನಾಗಮಂಗಲಕ್ಕೆ ತೆರಳುವ ಮಾರ್ಗದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಪಾಂಡವಪುರದ ಆರ್‌ಎಸ್‌ಎಸ್ ಕಚೇರಿಯಲ್ಲಿ ಹಿಂದೂ ಕಾರ್ಯಕರ್ತರನ್ನು ಭೇಟಿಮಾಡಿದ್ದರು. ಮಾಹಿತಿ ತಿಳಿದ ಪೊಲೀಸರು ಎಚ್ಚೇತ್ತುಕೊಂಡು ಅತ್ತಾವರ ಅವರನ್ನು ವಶಕ್ಕೆ ತೆಗೆದುಕೊಳ್ಳಲು ಸಜ್ಜಾಗಿದ್ದಾರೆ. ಪೊಲೀಸರು ಏಕಾಏಕಿ ಆರ್‌ಎಸ್‌ಎಸ್ ಕಚೇರಿಗೆ ನುಗ್ಗಿದ್ದು ಕಾರ್ಯಕರ್ತರೊಂದಿಗೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಬಂಧನ ವಾರಂಟ್ ಅಥವಾ ಯಾವುದೇ ಅಧಿಕೃತ ಸೂಚನೆ ಇಲ್ಲದಿರುವುದನ್ನು ಗಮನಿಸಿದ ಕಾರ್ಯಕರ್ತರು ಪೊಲೀಸರ ಕ್ರಮದ ಕಾನೂನುಬದ್ಧತೆಯನ್ನು ಪ್ರಶ್ನಿಸಿದರು. ಈ ವೇಳೆ ತಳ್ಳಾಟ ನೂಕಾಟ ಉಂಟಾಯಿತು. ಪೊಲೀಸರು ಶೂ ಕಾಲಿನಲ್ಲಿ ಕಚೇರಿ ಪ್ರವೇಶಿಸಿ ನಮ್ಮ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಪಾದರಕ್ಷೆಗಳನ್ನು ತೆಗೆಯದೆ ಆರ್‌ಎಸ್‌ಎಸ್ ಕಚೇರಿಗೆ ಪ್ರವೇಶಿಸಿದ್ದಕ್ಕಾಗಿ ಕಾರ್ಯಕರ್ತರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು. ಆರ್‌ಎಸ್‌ಎಸ್ ಕಚೇರಿ ದೇವಾಲಯವಿದ್ದಂತೆ. ಪೂಜನೀಯ ಭಾವನೆಯಲ್ಲಿ ನೋಡುತ್ತೇವೆ. ಆರ್‌ಎಸ್‌ಎಸ್ ಭಕ್ತರ ಸಂಘಟನೆಯಾಗಿದ್ದು, ಸ್ವಯಂಸೇವಕರು ದೇಶದ ಏಕತೆ, ಅಖಂಡತೆಗೆ ಕಟ್ಟಿಬದ್ಧವಾಗಿದೆ ಎಂದರು.

Leave a Reply

Your email address will not be published. Required fields are marked *