ಲೀಲಾ ಮರಳಿ ಪತಿ ಮಂಜನ ಮನೆಗೆ – ದೊಡ್ಡ ಟ್ವಿಸ್ಟ್!
ಆನೇಕಲ್ : ಮಂಜು-ಲೀಲಾ- ಸಂತು ಟ್ರಯಾಂಗಲ್ ಲವ್ ಸ್ಟೋರಿಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಲವರ್ ಸಂತುಗೆ ಗುಡ್ ಬೈ ಹೇಳಿರೋ ಲೀಲಾ ಮರಳಿ ಪತಿ ಮಂಜನ ಮನೆ ಸೇರಿದ್ದಾಳೆ. ಬನ್ನೇರುಘಟ್ಟ ಸಮೀಪದ ಬಸವನಪುರದಲ್ಲಿ ನಡೆದಿದ್ದ ಟ್ರಯಾಂಗಲ್ ಲವ್ ಸ್ಟೋರಿ ಹಿಂದೆ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಪತಿ, ಮೂವರು ಮಕ್ಕಳನ್ನ ಬಿಟ್ಟು ಲವರ್ ಜೊತೆ ಲೀಲಾ ಹೋಗಿದ್ದ ಪರಿಣಾಮ, ಪತಿ ಮಂಜ ಗೋಳಾಡಿದ್ದ. ಮಾಧ್ಯಮಗಳಲ್ಲಿ ಕಣ್ಣೀರು ಹಾಕಿ ಗೋಳಾಡಿ,ಚಿನ್ನು, ಬಂಗಾರ ಬಂದ್ಬೀಡು ಎಂದಿದ್ದ. ಆದ್ರೆ ಸಂತು ಬಿಟ್ಟು ಬರೋದಿಲ್ಲ ಅಂತ ಲೀಲಾ ಪಟ್ಟು ಹಿಡಿದಿದ್ದಳು.
ಆ ಬಳಿಕ ಸಂತು ಮನೆಯಲ್ಲಿಯೇ ಪತ್ನಿ ಲೀಲಾ ವಾಸವಿದ್ದ ಕಾರಣ ರೊಚ್ಚಿಗೆದ್ದ ಮಂಜ ಅವರ ಮೇಲೆ ಡೆಡ್ಲಿ ಅಟ್ಯಾಕ್ ನಡೆಸಿ ಜೈಲು ಸೇರಿದ್ದ. ಜೈಲಿನಿಂದ ರಿಲೀಸ್ ಆದಮೇಲೆ ಬಸವನಪುರದಲ್ಲಿ ಮನೆ ಖಾಲಿ ಮಾಡಿದ್ದ ಆತ, ಬನ್ನೇರುಘಟ್ಟ ಸಮೀಪದ ಜಲ್ಲಿಮಿಷನ್ ಏರಿಯಾಗೆ ಬಂದಿದ್ದ. ಲೀಲಾ ಬಳಿ ಇದ್ದ ದೊಡ್ಡ ಮಗನನ್ನ ಕರೆದುಕೊಂಡು ಹೋಗಿದ್ದ ಈತ, ಇನ್ಸ್ಟಾಗ್ರಾಮ್ ರೀಲ್ಸ್ನಲ್ಲಿ ಲೀಲಾ ಮೇಲಿನ ವಿರಹ ವೇದನೆ ವ್ಯಕ್ತಪಡಿಸುತ್ತಿದ್ದ. ಆ ಮೂಲಕ ಲೀಲಾ-ಸಂತುಗೆ ಟಕ್ಕರ್ ಕೊಡ್ತಿದ್ದ. ಜೊತೆಗೆ ಹೊಸ ಆಟೋ ಖರೀದಿ ಮಾಡಿ ಮಗನ ಜೊತೆ ಜೀವನ ನಡೆಸ್ತಿದ್ದ ಈತ, ಇಬ್ಬರು ಮಕ್ಕಳನ್ನ ಸಂತು ಮತ್ತು ಲೀಲಾ ಸ್ಕೂಲಿಗೆ ಕಳುಹಿಸುತ್ತಿಲ್ಲ ಎಂದು ಆರೋಪಿಸಿದ್ದ. ನನ್ನ ಇಬ್ಬರು ಮಕ್ಕಳನ್ನ ನನಗೆ ಕೊಡಿಸಿ ಎಂದು ಕೇಳಿಕೊಂಡಿದ್ದ. ಇದಾದ ಬಳಿಕ ಈಗ ಮಕ್ಕಳ ಜೊತೆಗೆ ಲೀಲಾ ಈಗ ಮಂಜನ ಮನೆ ಸೇರಿದ್ದಾಳೆ. ಆ ಮೂಲಕ ಮಂಜು-ಲೀಲಾ-ಸಂತು ಟ್ರಯಾಂಗಲ್ ಲವ್ ಕಹಾನಿ ಸುಖಾಂತ್ಯ ಕಂಡಿದೆ.
For More Updates Join our WhatsApp Group :



