ಬಿಹಾರ: ಪೊಲೀಸ್ ಇನ್ಸ್ಪೆಕ್ಟರ್ ಪರೀಕ್ಷೆಯಲ್ಲಿ ಮೂವರು ತೃತೀಯಲಿಂಗಿಗಳು ಉತ್ತೀರ್ಣರಾಗುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ದೇಶದ ಪೊಲೀಸ್ ಇಲಾಖೆಯಲ್ಲಿ ಇದೇ ಮೊದಲ ಬಾರಿಗೆ ತೃತೀಯಲಿಂಗಿಯೊಬ್ಬರು ಪಿಎಸ್ಐ ಆಗಿ ನೇಮಕವಾಗಿದ್ದಾರೆ. ಮಾನ್ವಿ ಮಧು ಕಶ್ಯಪ್ ಪೊಲೀಸ್ ಅಧಿಕಾರಿಯಾದ ಟ್ರಾನ್ಸ್ಜೆಂಡರ್.
ಪೊಲೀಸ್ ನೇಮಕಾತಿ ಪರೀಕ್ಷೆಯ 1275 ಹುದ್ದೆಗಳ ಫಲಿತಾಂಶ ಪ್ರಕಟವಾಗಿದ್ದು, ಅದರಲ್ಲಿ ಮೂವರು ತೃತೀಯಲಿಂಗಿಗಳು ಆಯ್ಕೆಯಾಗಿದ್ದಾರೆ. ಭಾಗಲ್ಪುರದ ಹಳ್ಳಿಯೊಂದರ ನಿವಾಸಿ ಮಾನ್ವಿ ಮಧು ಕಶ್ಯಪ್ ಅವರು ತೇರ್ಗಡೆಯಾಗುವ ಮೂಲಕ ದೇಶದ ಮೊದಲ ತೃತೀಯಲಿಂಗಿ ಸಬ್ಇನ್ಸ್ಪೆಕ್ಟರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ
ಮಾದ್ಯಮದ ಜೊತೆ ಮಾತನಾಡಿದ ಅವರು ತಾನು 9ನೇ ತರಗತಿಯಲ್ಲಿ ಓದುತ್ತಿದ್ದಾಗ ದೈಹಿಕವಾಗಿ ಬದಲಾವಣೆಗಳು ಕಂಡು ಬಂದವು. ಕ್ರಮೇಣ ಸಮಾಜದಿಂದ ದೂರವಾಗತೊಡಗಿದೆ. ತನಗೆ ಕುಟುಂಬದಲ್ಲಿ ಇಬ್ಬರು ಸಹೋದರಿಯರು, ಸಹೋದರ ಮತ್ತು ತಾಯಿ ಇದ್ದಾರೆ. ಕಳೆದ 9 ವರ್ಷಗಳಿಂದ ನಾನು ಮನೆಗೆ ಮನೆಗೆ ಹೋಗಿಲ್ಲ. ಈಗ ಇನ್ಸ್ಪೆಕ್ಟರ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದೇನೆ. ಅಧಿಕಾರಿಯಾಗಿ ನಾನು ಮನೆಗೆ ಭೇಟಿ ನೀಡುವೆ ಎಂದರು