ಮುಡಾ ಪ್ರತಿ ಸಭೆಯಲ್ಲೂ ಶಾಸಕರ ಫೈಲ್​ಗಳೇ ಹೆಚ್ಚಿರುತ್ತಿತ್ತು: ಎಸ್.ಟಿ.ಸೋಮಶೇಖರ್

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಡೆಯುತ್ತಿದ್ದ ಪ್ರತಿ ಸಭೆಯಲ್ಲೂ ಸ್ಥಳೀಯ ಶಾಸಕರ ಫೈಲ್​ಗಳೇ ಹೆಚ್ಚಾಗಿರುತ್ತಿದ್ದವು. ಇದರ ಜೊತೆಗೆ ಈ ಫೈಲ್​ಗಳ ಬಗ್ಗೆ ಯಾವುದೇ ಸೂಕ್ತ ಚರ್ಚೆಯಾಗದೇ ಪಾಸ್​ ಆಗುತ್ತಿದ್ದವು ಎಂದು ಹಾಲಿ ಶಾಸಕ ಹಾಗೂ ಮೈಸೂರಿನ ಮಾಜಿ ಉಸ್ತುವಾರಿ ಸಚಿವರೂ ಆಗಿದ್ದ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

ಈ ಬಗ್ಗೆ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಮುಡಾ ಸಭೆಯ ಬಹುತೇಕ ಸಬ್ಜೆಕ್ಟ್​ಗಳು ಶಾಸಕರುಗಳಿಗೆ ಸೇರಿದ್ದವು. ಮುಡಾ ಸದಸ್ಯರಾಗಲು ಬೇರೆ ಜಿಲ್ಲೆಯ ಪರಿಷತ್ ಸದಸ್ಯರೂ ತಮ್ಮ ವಾಸ ಸ್ಥಳವನ್ನು ಮೈಸೂರು ಎಂದೇ ತೋರಿಸುತ್ತಾರೆ. ಈ ಮಟ್ಟಕ್ಕೆ ಇಲ್ಲಿಯ ಶಾಸಕರು ಲಾಬಿ ಮಾಡುತ್ತಾರೆ” ಎಂದು ದೂರಿದರು.

ಮುಡಾ ಇರುವುದು ಜನಸಾಮಾನ್ಯರ ಅಭಿವೃದ್ಧಿಗೋಸ್ಕರ. ಆದರೆ ಇಲ್ಲಿ ನಡೆಯುತ್ತಿರುವುದೇನು ಎಂದು ಪ್ರಶ್ನಿಸಿದ ಅವರು, ಈ ಬೋರ್ಡ್ ವ್ಯವಸ್ಥೆ ಬದಲಾಗಬೇಕು ಎಂದು ಆಗ್ರಹಿಸಿದರು. “ನಾನು ಇಲ್ಲಿ ಅಧಿಕಾರದಲ್ಲಿರುವಾಗಲೇ ಭ್ರಷ್ಟಾಚಾರ ನಡೆದಿತ್ತು. ಈ ಬಗ್ಗೆ ಸರಕಾರದ ಗಮನಕ್ಕೆ ತಂದು ಪತ್ರ ಬರೆದು ಆಯುಕ್ತರ ಬದಲಾವಣೆಗೆ ಯತ್ನಿಸಿದ್ದೆ. ಆದರೆ ಸರಕಾರದ ಕೆಲವರು ಜಾತಿ ಕಾರಣಕ್ಕೆ ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದರು. ಆಯುಕ್ತರೂ ಕೋರ್ಟ್​ಗೆ ಹೋಗಿ ಅಧಿಕಾರ ಉಳಿಸಿಕೊಂಡಿದ್ದರು

Leave a Reply

Your email address will not be published. Required fields are marked *