‘ಮಾರ್ಕ್’ ಸಿನಿಮಾ ಸೆಟ್ಟೇರಿದ್ದು ಜುಲೈನಲ್ಲಿ. ಕೇವಲ ನಾಲ್ಕೇ ತಿಂಗಳಲ್ಲಿ ಈ ಸಿನಿಮಾದ ಶೂಟ್ನ ಸುದೀಪ್ ಪೂರ್ಣಗೊಳಿಸಿದ್ದಾರೆ. ಸದ್ಯ ತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸ ಆರಂಭಿಸಿದ್ದು, ಡಿಸೆಂಬರ್ 25ಕ್ಕೆ ರಿಲೀಸ್ ಫಿಕ್ಸ್ ಎಂದು ತಂಡ ಮಾಹಿತಿ ನೀಡಿದೆ. ಇತ್ತೀಚಿನ ವರ್ಷಗಳಲ್ಲಿ ಇಷ್ಟು ವೇಗವಾಗಿ ಸುದೀಪ್ ಸಿನಿಮಾ ಪೂರ್ಣಗೊಳಿಸಿದ್ದು ಇದೇ ಮೊದಲು ಎನ್ನಲಾಗುತ್ತಿದೆ.
‘ಮಾರ್ಕ್’ ಸಿನಿಮಾದ ಟೀಸರ್ ಇತ್ತೀಚೆಗೆ ಬಿಡುಗಡೆ ಕಂಡಿದೆ. ಟೀಸರ್ನಲ್ಲಿ ಸುದೀಪ್ ಅವರು ಸಾಕಷ್ಟು ಆ್ಯಕ್ಷನ್ ಮೆರೆದಿದ್ದಾರೆ. ಅವರ ಆ್ಯಕ್ಷನ್ ನೋಡಿ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಹೀಗಿರುವಾಗಲೇ ಸುದೀಪ್ ಹೊಸ ಚಿತ್ರದ ಬಗ್ಗೆ ಕ್ರೇಜಿ ಅಪ್ಡೇಟ್ ಸಿಕ್ಕಿದೆ.
ಬಿಗ್ ಬಾಸ್ ಪೂರ್ಣಗೊಳ್ಳುವುದಕ್ಕೂ ಮೊದಲೇ ಸುದೀಪ್ ಅವರು ‘ಮಾರ್ಕ್’ ಸಿನಿಮಾದ ಬಹುತೇಕ ಶೂಟ್ನ ಪೂರ್ಣಗೊಳಿಸಿದ್ದರು. ಈಗ ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ತಂಡ ಕೊನೆಯ ಹಂತದ ಚಿತ್ರೀಕರಣ ಪೂರ್ಣಗೊಳಿಸಿದೆ. ಶೂಟಿಂಗ್ ಮುಗಿಸಿರುವ ಚಿತ್ರತಂಡ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿ ಇದೆ.
ಡಿಸೆಂಬರ್ 25ಕ್ಕೆ ರಿಲೀಸ್
‘ಮ್ಯಾಕ್ಸ್ ಸಿನಿಮಾ ಕಳೆದ ವರ್ಷ ಡಿಸೆಂಬರ್ 25ರಂದು ರಿಲೀಸ್ ಆಗಿತ್ತು. ಈ ಚಿತ್ರಕ್ಕೆ ಸುದೀಪ್ ಹೀರೋ ಆದರೆ ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದರು. ಇವರ ಕಾಂಬಿನೇಷನ್ನಲ್ಲಿ ‘ಮಾರ್ಕ್’ ಬರುತ್ತಿದೆ. ಈ ಚಿತ್ರ ಕೂಡ ಕ್ರಿಸ್ಮಸ್ ಪ್ರಯುಕ್ತ ಡಿಸೆಂಬರ್ 25ರಂದೇ ರಿಲೀಸ್ ಆಗಲಿದೆ. ‘ಮ್ಯಾಕ್ಸ್’ ರೀತಿಯೇ ಈ ಬಾರಿ ಕೂಡ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಜಯ್ ಮಾರ್ಕಂಡೆ ಎಂಬುದು ಸುದೀಪ್ ಮಾಡಿದ ಪಾತ್ರದ ಹೆಸರು.
ಶೇಖರ್ ಚಂದ್ರ ‘ಮಾರ್ಕ್’ ಸಿನಿಮಾಗೆ ಛಾಯಾಗ್ರಹಣ ಮಾಡಿದ್ದಾರೆ. ಅಜನೀಶ್ ಬಿ. ಲೋಕನಾಥ್ ಸಂಗೀತ ಸಯೋಜನೆ ಚಿತ್ರಕ್ಕೆ ಇದೆ. ‘ಸತ್ಯಜ್ಯೋತಿ ಫಿಲ್ಮ್ಸ್’ ಹಾಗೂ ‘ಕಿಚ್ಚ ಕ್ರಿಯೇಷನ್ಸ್’ ಬ್ಯಾನರ್‌ಗಳು ಜಂಟಿಯಾಗಿ ‘ಮಾರ್ಕ್’ ಚಿತ್ರವನ್ನು ನಿರ್ಮಿಸಿವೆ. ಸುದೀಪ್ ಅವರು ‘ಮಾರ್ಕ್’ ಚಿತ್ರಕ್ಕಾಗಿ ಭಿನ್ನ ಹೇರ್ಸ್ಟೈಲ್ ಮಾಡಿಕೊಂಡಿದ್ದಾರೆ. ಡಿಸೆಂಬರ್ನಲ್ಲಿ ‘ಡೆವಿಲ್’ ಹಾಗೂ ‘45’ ಎರಡೂ ಸಿನಿಮಾ ರಿಲೀಸ್ ಆಗುತ್ತಿದ್ದು, ಬಾಕ್ಸ್ ಆಫೀಸ್ನಲ್ಲಿ ಕ್ಲ್ಯಾಶ್ ಜೋರಿರಲಿದೆ.
For More Updates Join our WhatsApp Group :
