ಇರಾಕ್ ನಲ್ಲಿ ಹುಡುಗಿಯರ ಮದುವೆ ವಯಸ್ಸು 9 ವರ್ಷ

ಇರಾಕ್ ನಲ್ಲಿ ಹುಡುಗಿಯರ ಮದುವೆ ವಯಸ್ಸು 9 ವರ್ಷ

ಇರಾಕ್ 9-ವರ್ಷದ ಹುಡುಗಿಯನ್ನು ಮದುವೆಯಾಗಲು ಪುರುಷರಿಗೆ ಅನುಮತಿಸುವ ತಿದ್ದುಪಡಿಯ ಕಾನೂನಿಗೆ ಹತ್ತಿರವಾಗಿದೆ. ಇರಾಕ್ ನಲ್ಲಿ ಹೊಸ ಕಾನೂನು ಜಾರಿಯಾಗಲಿದೆ. ಇದು ಜಾರಿಯಾದರೆ ಮಹಿಳೆಯರ ಮದುವೆ ವಯಸ್ಸು 9 ವರ್ಷಕ್ಕೆ ಇಳಿಯಲಿದೆ. ವರದಿಯೊಂದರ ಪ್ರಕಾರ, ಮಹಿಳೆಯರಿಗೆ ವಿಚ್ಛೇದನ, ಮಕ್ಕಳ ಪಾಲನೆ ಮತ್ತು ಉತ್ತರಾಧಿಕಾರದ ಹಕ್ಕು ಕಸಿದುಕೊಳ್ಳುವ ಉದ್ದೇಶದಿಂದಲೇ ಈ ತಿದ್ದುಪಡಿ ಪ್ರಸ್ತಾಪಿಸಲಾಗಿದೆ. ಆದರೆ, ಇದು ಇಸ್ಲಾಮಿಕ್ ಷರಿಯಾ ಕಾನೂನಿನ ವ್ಯಾಖ್ಯಾನಕ್ಕೆ ಅನುಗುಣವಾಗಿದ್ದು, ಹೆಣ್ಣುಮಕ್ಕಳನ್ನು ಅನೈತಿಕ ಸಂಬಂಧಗಳಿಂದ ರಕ್ಷಿಸವುದು ನಮ್ಮ ಉದ್ದೇಶ ಎಂದು ಶಿಯಾ ಪಕ್ಷಗಳ ನೇತೃತ್ವದ ನಮ್ಮಿಶ್ರ ಸರ್ಕಾರ ಹೇಳುತ್ತಿದೆ. ವಿಶ್ವಸಂಸ್ಥೆಯ ಮಕ್ಕಳ ಏಜೆನ್ಸಿ, UNICEF ಪ್ರಕಾರ, 1950 ರ ದಶಕದಲ್ಲಿ ಬಾಲ್ಯ ವಿವಾಹಗಳನ್ನು ಕಾನೂನುಬಾಹಿರವಾಗಿದ್ದರೂ, ಇರಾಕ್ನಲ್ಲಿ 28 ಪ್ರತಿಶತದಷ್ಟು ಹುಡುಗಿಯರು ಈಗಾಗಲೇ 18 ವರ್ಷಕ್ಕಿಂತ ಮುಂಚೆಯೇ ವಿವಾಹವಾಗಿದ್ದಾರೆ. ನ್ಯಾಯಾಲಯಗಳ ಬದಲಿಗೆ ಧಾರ್ಮಿಕ ಮುಖಂಡರು ಈ ವಿವಾಹಗಳನ್ನು ನಿರ್ವಹಿಸುವ ಕಾನೂನಿನ ಲೋಪದೋಷ , ಅಪ್ರಾಪ್ತ ವಯಸ್ಸಿನ ಹುಡುಗಿಯರನ್ನು ತಂದೆಯ ಅನುಮತಿಯೊಂದಿಗೆ ಹಿರಿಯ ಪುರುಷರೊಂದಿಗೆ ಮದುವೆಯಾಗಲು ಅನುಮತಿಸುತ್ತದೆ

Leave a Reply

Your email address will not be published. Required fields are marked *