ಬೆಂಗಳೂರು: ಆತ್ಮಹತ್ಯೆ ಪ್ರಕರಣಗಳ ಕುರಿತಂತೆ ನಿಮ್ಹಾನ್ಸ್ ಎನ್-ಸ್ಟ್ರೈಟ್ ಕೇಂದ್ರ ನಡೆಸಿದ ಅಧ್ಯಯನದಲ್ಲಿ ಆಘಾತಕಾರಿ ಅಂಶ ಬಹಿರಂಗವಾಗಿದೆ. 25 ರಿಂದ 39 ವರ್ಷದ ಗಂಡಸರೇ ಹೆಚ್ಚು ಆತ್ಮಹತ್ಯೆ ಯತ್ನಿಸುತ್ತಾರೆ ಎಂಬುದು ವರದಿಯಲ್ಲಿ ತಿಳಿದುಬಂದಿದೆ.
ಇದೇ ವೇಳೆ, ದೇಶದ ಪ್ರಮುಖ ನಗರಗಳಲ್ಲಿ ಬೆಂಗಳೂರಿನಲ್ಲೇ ಆತ್ಮಹತ್ಯೆ ಯತ್ನ ಪ್ರಮಾಣ ಅತಿ ಹೆಚ್ಚು ಎಂಬುದು ಅಧ್ಯಯನದ ಮತ್ತೊಂದು ಆತಂಕಕಾರಿ ಅಂಶ.
ನಿಮ್ಹಾನ್ಸ್ “ಉಷಾಸ್” ಅಧ್ಯಯನದ ಮುಖ್ಯ ಅಂಶಗಳು
* ಈವರೆಗೆ 20,861 ಮಂದಿ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ.
* ಇವರಲ್ಲಿ 44.37% ಮಂದಿ 25–39 ವರ್ಷದವರು,28.87% ಮಂದಿ 18–24 ವಯೋಮಾನದವರು.
* ಪುರುಷರು 55.76%, ಮಹಿಳೆಯರು 44.15%, ಟ್ರಾನ್ಸ್ಜೆಂಡರ್ 0.09%.
* ಆತ್ಮಹತ್ಯೆ ಮರುಪ್ರಯತ್ನ ಪ್ರಮಾಣ ಕೇವಲ 1.19%
“ಉಷಾಸ್” ಯೋಜನೆ ಏನು?
2022ರಲ್ಲಿ ಆರಂಭವಾದ ಈ ಯೋಜನೆ, ಆತ್ಮಹತ್ಯೆಗೆ ಯತ್ನಿಸಿದವರಿಗೆ ಆತ್ಮಸ್ಥೈರ್ಯ ತುಂಬಿ, ಮರು ಪ್ರಯತ್ನ ತಪ್ಪಿಸುವ ಉದ್ದೇಶ ಹೊಂದಿದೆ. ಬೆಂಗಳೂರಿನ ವಿಕ್ಟೋರಿಯಾ, ಕೆಸಿ ಜನರಲ್, ಬೌರಿಂಗ್ ಸೇರಿದಂತೆ 16 ಆಸ್ಪತ್ರೆಗಳಲ್ಲಿ ಈ ಯೋಜನೆ ಜಾರಿಯಲ್ಲಿದೆ.
ಆತ್ಮಹತ್ಯೆ ಪ್ರಕರಣಗಳಲ್ಲಿ ಬೆಂಗಳೂರಿನ ಸ್ಥಾನ
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಅಂಕಿಅಂಶಗಳ ಪ್ರಕಾರ, ಭಾರತದ ಮೆಗಾಸಿಟಿಗಳಲ್ಲಿ ಬೆಂಗಳೂರು ಮೂರನೇ ಸ್ಥಾನದಲ್ಲಿದೆ.
* ಕರ್ನಾಟಕದಲ್ಲಿ ಆತ್ಮಹತ್ಯೆ ಪ್ರಮಾಣ 20.2%, ರಾಷ್ಟ್ರೀಯ ಸರಾಸರಿ 12.4% ಕ್ಕಿಂತ ಹೆಚ್ಚಾಗಿದೆ.
* ರಾಜ್ಯದಲ್ಲಿ ವರ್ಷಕ್ಕೆ ಸರಾಸರಿ 13,606 ಆತ್ಮಹತ್ಯೆ ಪ್ರಕರಣಗಳು ದಾಖಲಾಗುತ್ತಿವೆ.
For More Updates Join our WhatsApp Group :
