ಮೆಟ್ರೋ ರೆಡ್ ಲೈನ್: DPRಗೆ ಕೇಂದ್ರ ಆಕ್ಷೇಪ, ಮರುಪರಿಶೀಲನೆ ಸೂಚನೆ.

ಮೆಟ್ರೋ ರೆಡ್ ಲೈನ್: DPRಗೆ ಕೇಂದ್ರ ಆಕ್ಷೇಪ, ಮರುಪರಿಶೀಲನೆ ಸೂಚನೆ.

ಸರ್ಜಾಪುರ-ಹೆಬ್ಬಾಳ ಮೆಟ್ರೋ ಯೋಜನೆ ಡಬಲ್ ಡೆಕ್ಕರ್ ನಿರಾಕರಣೆ.

ಬೆಂಗಳೂರು: ನಮ್ಮಮೆಟ್ರೋ ರೈಲುಗಳ ಟಿಕೆಟ್​​ ದರ ಏರಿಕೆ ವಿಚಾರವಾಗಿ ಜಟಾಪಟಿ ಬೆನ್ನಲ್ಲೇ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಬ್ಯಾಡ್​​ ನ್ಯೂಸ್​​ ಸಿಕ್ಕಿದೆ. ಬಹು ನಿರೀಕ್ಷಿತ ಮೆಟ್ರೋ ರೆಡ್​​ ಲೈನ್​​ನ ಸರ್ಜಾಪುರ ಟು ಹೆಬ್ಬಾಳ ಯೋಜನೆಯ ಡಿಪಿಆರ್​​ಗೆ ಕೇಂದ್ರ ಆಕ್ಷೇಪ ತೆಗೆದಿದ್ದು, ಡಬಲ್ ಡೆಕ್ಕರ್ ಪ್ಲ್ಯಾನ್​​ಗೆ ನೋ ಎಂದಿದೆ. ಹೀಗಾಗಿ ಮೆಟ್ರೋ ವಿಚಾರದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವೆ ಮತ್ತೊಂದು ಸುತ್ತಿನ ಸಮರ ಶುರುವಾಗುವ ಸಾಧ್ಯತೆ ಗೋಚರಿಸಿದೆ.

ಕೇಂದ್ರ ಸರ್ಕಾರದ ಆಕ್ಷೇಪ ಯಾಕೆ?

ಹೆಬ್ಬಾಳ-ಸರ್ಜಾಪುರ ಮೆಟ್ರೋ ಕಾರಿಡಾರ್‌ಗೆ 28,405 ಕೋಟಿ ಡಿಪಿಆರ್ ಹಿನ್ನೆಲೆ ಕೇಂದ್ರ ಸರ್ಕಾರ ತಗಾದೆ ತೆಗೆದಿದೆ. ಡಬಲ್ ಡೆಕ್ಕರ್ ಮಾಡೋದ್ರಿಂದ ಮೆಟ್ರೋ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿರುವ ಕಾರಣ ರೆಡ್ ಲೈನ್ ಮೆಟ್ರೋ ಕಾರಿಡಾರ್​​ಗಳಲ್ಲಿ ಡಬಲ್ ಡೆಕ್ಕರ್ ಬೇಡ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಬೇಕಾದಲ್ಲಿ ಅಗತ್ಯ ಜಂಕ್ಷನ್​​ಗಳಲ್ಲಿ ಮಾತ್ರ ಡಬಲ್ ಡೆಕ್ಕರ್ ಮಾಡಲು ಒಪ್ಪಿಗೆ ಸೂಚಿಸಲಾಗಿದ್ದು, ಯೋಜನೆಯನ್ನು ಮರುಪರಿಶೀಲನೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಲಾಗಿದೆ.

ಬೆಂಗಳೂರು ನಮ್ಮ ಮೆಟ್ರೋ 3ನೇ ಹಂತದಲ್ಲಿ ಸರ್ಜಾಪುರ – ಹೆಬ್ಬಾಳ ಸಂಪರ್ಕಿಸುವ ಕೆಂಪು ಮಾರ್ಗ ಯೋಜನೆಯ ಡಿಪಿಆರ್​​ಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿ, ಅನುಮೋದನೆಗಾಗಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿತ್ತು. ಸುಮಾರು 37 ಕಿ.ಮೀ ಉದ್ದದ, ಅಂದಾಜು 28,405 ಕೋಟಿ ವೆಚ್ಚದ ಈ ಮಹತ್ವಾಕಾಂಕ್ಷಿ ಯೋಜನೆಯಲ್ಲಿ, 28 ನಿಲ್ದಾಣಗಳನ್ನು ಈ ಮಾರ್ಗ ಹೊಂದಲಿದೆ. ಐಟಿ ಕಾರಿಡಾರ್ ಮತ್ತು ಉತ್ತರ ಬೆಂಗಳೂರನ್ನು ಸಂಪರ್ಕಿಸುವ ಈ ಮೆಟ್ರೋ ಮಾರ್ಗ 4 ಪ್ರಮುಖ ಇಂಟರ್‌ಚೆಂಜ್ ಮಾರ್ಗಗಳನ್ನು ಸಂಪರ್ಕಿಸಲಿದೆ ಎಂದು ಹೇಳಲಾಗಿತ್ತು. 2031ರ ವೇಳೆಗೆ ಈ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆಯಿತ್ತಾದರೂ ಈಗ ಕೇಂದ್ರ ಸರ್ಕಾರ ಯೋಜನೆಯ ಡಿಪಿಆರ್​​ಗೆ ಆಕ್ಷೇಪ ತೆಗೆದ ಕಾರಣ, ಕಾಮಗಾರಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *