ಬೆಂಗಳೂರು: ರಾಗಿಗುಡ್ಡ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಇಂದು (ಆಗಸ್ಟ್ 10) ಹಬ್ಬದ ವಾತಾವರಣ ಕಂಡುಬಂತು. ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನ ಬಹುನಿರೀಕ್ಷಿತ ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಚಾಲನೆ ನೀಡಿದ್ದಾರೆ. ನಂತರ ಎಲೆಕ್ಟ್ರಾನಿಕ್ ಸಿಟಿ ವರೆಗೆ ಮೆಟ್ರೋದಲ್ಲಿ ಪ್ರಯಾಣಿಸಿದರು. ಈ ವೇಳೆ ಕೆಲ ನಿಮಿಷ ಶಾಲಾ ಮಕ್ಕಳೊಂದಿಗೆ ಮಾತುಕತೆ ನಡೆಸಿದರು. ಬಳಿಕ ಪ್ರಧಾನಿ ನರೇಂದ್ರ ಮೋದಿ, ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅಕ್ಕಪಕ್ಕ ಕುಳಿತುಕೊಂಡು ಮೆಟ್ರೋನಲ್ಲಿ ಪ್ರಯಾಣ ಮಾಡಿದರು. ಇನ್ನು ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಇತರರು ಮೋದಿ-ಸಿಎಂ ಎದುರುಗಡೆಯ ಹಾಸನದಲ್ಲಿ ಕುಳಿತು ಪ್ರಯಾಣಿಸಿದರು. ಈ ಸಂದರ್ಭದಲ್ಲಿ ಮೋದಿ ಯಾವುದೇ ವಿಷಯನ್ನು ಪ್ರಸ್ತಾಪಿಸಿದ್ದಾರೆ. ಈ ಮಾತನ್ನು ಕೇಳಿ ಪಕ್ಕದಲ್ಲೇ ಕುಳತಿದ್ದ ಸಿದ್ದರಾಮಯ್ಯ ಮತ್ತು ಡಿಕೆಶಿವಕುಮಾರ್ ಬಿದ್ದು ಬಿದ್ದು ನಕ್ಕಿದ್ದಾರೆ.
ಮೋದಿ, ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಗುವುದನ್ನು ಬಿಜೆಪಿ ಇತರೆ ನಾಯಕರು ನೋಡುತ್ತ ಕುಳಿತ್ತಿದ್ದರು. ನಂತರ ಪ್ರಯಾಣದುದ್ದಕ್ಕೂ ಆ ಕಡೆ ಈ ಕಡೆ ಕೈ ಸನ್ನೆ ಮಾಡುತ್ತು ಉಭಯ ನಾಯಕರು ಮಾತುಕತೆ ಮಾಡುತ್ತ ಎಲೆಕ್ಟ್ರಾನಿಕ್ ಸಿಟಿ ನಿಲ್ದಾಣಕ್ಕೆ ಬಂದಿಳಿದರು.
For More Updates Join our WhatsApp Group :