ಟ್ರಿನಿಡಾಡ್: ಪ್ರಧಾನಿ ನರೇಂದ್ರ ಮೋದಿ ಗುರುವಾರ ಟ್ರಿನಿಡಾಡ್ ಹಾಗೂ ಟೊಬಾಗೋಗೆ ಭೇಟಿ ನೀಡಿದ್ದಾರೆ. ಅಲ್ಲಿನ ಪ್ರಧಾನಿ ಕಮಲಾ ಪ್ರಸಾದ್ ಬಿಸ್ಸೆಸ್ಸರ್ಗೆ ಮಹಾಕುಂಭದಿಂದ ತಂದ ಪವಿತ್ರ ಜಲ ಹಾಗೂ ರಾಮ ಮಂದಿರ ಪ್ರತಿಕೃತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.ಟ್ರಿನಿಡಾಡ್ ಮತ್ತು ಟೊಬಾಗೋದಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಬಿಹಾರದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಒತ್ತಿ ಹೇಳಿದರು.

ಭಾರತೀಯ ವಲಸಿಗರ ಧೈರ್ಯವನ್ನು ಶ್ಲಾಘಿಸಿದರು ಮತ್ತು ಪ್ರಧಾನಿ ಕಮಲಾ ಪ್ರಸಾದ್-ಬಿಸ್ಸೆಸ್ಸರ್ ಅವರನ್ನು “ಬಿಹಾರದ ಮಗಳು” ಎಂದು ಕರೆದರು, ರಾಜ್ಯದೊಂದಿಗಿನ ಅವರ ಪೂರ್ವಜರ ಸಂಬಂಧಗಳನ್ನು ನೆನಪಿಸಿಕೊಂಡರು. ಟ್ರಿನಿಡಾಡ್ ಮತ್ತು ಟೊಬಾಗೋ ಪ್ರಧಾನಿ ಕಮಲಾ ಪ್ರಸಾದ್-ಬಿಸ್ಸೆಸ್ಸರ್ ಅವರ ಪೂರ್ವಜರು ಬಿಹಾರದ ಬಕ್ಸಾರ್ನಲ್ಲಿ ವಾಸಿಸುತ್ತಿದ್ದರು. ಕಮಲಾ ಅವರು ಬಿಹಾರಕ್ಕೆ ಭೇಟಿ ನೀಡಿದ್ದಾರೆ.
ಜನರು ಅವರನ್ನು ಬಿಹಾರದ ಮಗಳು ಎಂದು ಪರಿಗಣಿಸುತ್ತಾರೆ ಎಂದು ಪ್ರಧಾನಿ ಮೋದಿ ಹೇಳಿದರು. ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ಮಹಾಕುಂಭ ಮೇಳೆ ನಡೆದಿತ್ತು. ಸರಯು ನದಿ ಮತ್ತು ಮಹಾಕುಂಭದ ಪವಿತ್ರ ನೀರನ್ನು ಇಲ್ಲಿನ ಗಂಗಾ ಧಾರೆಗೆ ಅರ್ಪಿಸಲು ಕಮಲಾ ಬಳಿ ಕೇಳಿದರು. 2012 ರಲ್ಲಿ ಬಕ್ಸಾರ್ ಜಿಲ್ಲೆಯ ಇತಾರ್ಹಿ ಬ್ಲಾಕ್ನ ಅಡಿಯಲ್ಲಿರುವ ತಮ್ಮ ಪೂರ್ವಜರ ಗ್ರಾಮವಾದ ಭೇಲುಪುರಕ್ಕೆ ಭೇಟಿ ನೀಡಿದ್ದರು.
ಪ್ರಧಾನಿ ಮೋದಿಯನ್ನು ಕರೆದೊಯ್ಯಲು ಕಮಲಾ ತಮ್ಮ 38 ಸಚಿವರ ಜತೆ ಪಿಯಾರ್ಕೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು.ಇದು ಪ್ರಧಾನಿಯಾಗಿ ಮೋದಿ ಅವರ ಮೊದಲ ಭೇಟಿ ಮತ್ತು 1999 ರ ನಂತರ ಕೆರಿಬಿಯನ್ ರಾಷ್ಟ್ರಕ್ಕೆ ಭಾರತೀಯ ಪ್ರಧಾನಿಯೊಬ್ಬರು ನೀಡಿದ ಮೊದಲ ದ್ವಿಪಕ್ಷೀಯ ಭೇಟಿಯಾಗಿದೆ. ಟ್ರಿನಿಡಾಡ್ ಮತ್ತು ಟೊಬಾಗೋದ ಪ್ರಧಾನಿ ಕಮಲಾ ಪರ್ಸಾದ್-ಬಿಸ್ಸೆಸ್ಸರ್ ಅವರ ಆಹ್ವಾನದ ಮೇರೆಗೆ ಈ ಭೇಟಿ ನಡೆದಿದೆ.