ಮೋದಿ ತುಂಬಾ ಪವರ್ಫುಲ್, ಆದರೆ ದೇವರಲ್ಲ: ಕೇಜ್ರಿವಾಲ್ ವ್ಯಂಗ್ಯ

ಮೋದಿ ತುಂಬಾ ಪವರ್ಫುಲ್, ಆದರೆ ದೇವರಲ್ಲ: ಕೇಜ್ರಿವಾಲ್ ವ್ಯಂಗ್ಯ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ತುಂಬಾ ಪವರ್ಫುಲ್, ಆದರೆ ದೇವರಲ್ಲ ಎಂದು ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ

ಗುರುವಾರ ದೆಹಲಿ ವಿಧಾನಸಭೆಯಲ್ಲಿ AAP ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ 41ನೇ ಸ್ಥಾನವನ್ನು ನೀಡಲಾಯಿತು. ರಾಜೀನಾಮೆ ನೀಡಿದ ಬಳಿಕ ಮೊದಲ ಬಾರಿಗೆ ದೆಹಲಿ ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ವಿರೋಧ ಪಕ್ಷದಲ್ಲಿರುವ ನನ್ನ ಸಹೋದ್ಯೋಗಿಗಳು ಮನೀಷ್ ಸಿಸೋಡಿಯಾ ಮತ್ತು ನನ್ನನ್ನು ನೋಡಿ ದುಃಖಿತರಾಗಬೇಕು. ಪ್ರಧಾನಿ ಮೋದಿ ಅತ್ಯಂತ ಶಕ್ತಿಶಾಲಿ ವ್ಯಕ್ತಿ ಹಾಗೂ ಸಂಪನ್ಮೂಲ ವ್ಯಕ್ತಿ. ಆದರೆ ಮೋದಿ ದೇವರಲ್ಲ. ಇರುವ ದೇವರು ನಮ್ಮೊಂದಿಗಿದ್ದಾನೆ. ಇದರಿಂದ ನಾನು ಸುಪ್ರೀಂ ಕೋರ್ಟ್ಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಟಾಂಗ್ ಕೊಟ್ಟಿದ್ದಾರೆ

ಎಎಪಿಗೆ ಸಹಾಯ ಮಾಡಿದ ಸುಪ್ರೀಂ ಕೋರ್ಟ್ಗೆ ಧನ್ಯವಾದ ಹೇಳಲು ಬಯಸುತ್ತೇನೆ. ದೆಹಲಿಯಲ್ಲಿ ಆಡಳಿತವನ್ನು ಅಡ್ಡಿಪಡಿಸುವುದು ಬಿಜೆಪಿಯ (BJP) ಲೆಕ್ಕಾಚಾರವಾಗಿತ್ತು. ರಾಜಕೀಯ ನಡೆಯ ಭಾಗವಾಗಿ ಅವರ ಬಂಧನವಾಗಿದೆ. ರಾಜಕೀಯ ಸೇಡಿನ ಮೇಲೆ ಬಿಜೆಪಿ ಹೆಚ್ಚು ಗಮನಹರಿಸಿದೆ ಎಂದು ಕಿಡಿಕಾರಿದರು.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಉದ್ದೇಶಪೂರ್ವಕವಾಗಿ ದೆಹಲಿಯ ಪ್ರಮುಖ ಅಭಿವೃದ್ಧಿ ಯೋಜನೆಗಳನ್ನು ಸ್ಥಗಿತಗೊಳಿಸುತ್ತಿದೆ ಮತ್ತು ಎಎಪಿ ನಾಯಕರನ್ನು ಸುಳ್ಳು ಆರೋಪಗಳೊಂದಿಗೆ ಗುರಿಯಾಗಿಸುವುದು ಅವರು ಉದ್ದೇಶ ಎಂದು ಆರೋಪಿಸಿದರು

Leave a Reply

Your email address will not be published. Required fields are marked *